ಲೆಪಿಸಾಂತೆಸ್ ಟೆಟ್ರಾಫಿಲ್ಲ (Vahl) Radlk. - ಸ್ಯಾಪಿಂಡೇಸಿ

ಪರ್ಯಾಯ ನಾಮ : ಸ್ಯಾಪಿಂಡಸ್ ಟೆಟ್ರಾಫಿಲ್ಲಸ್ Vahl

Vernacular names : Tamil: ಕಲ್ಪೂವತಿ,ಕುಲಪ್ಪುನ್ನ,ನಾಯ್ಕೊಲ್ಲಿMalayalam: ಕಡುಪೆ,ಕಲ್ಲು ಹೆಟ್ಟಿ,ಮೂಲಗ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ 12 ಮೀ ಎತ್ತರದವರೆಗಿನ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದ ಛಾಯೆಯಲ್ಲಿದ್ದು ದಟ್ಟವಾದ ಬೆಂಡು ರಂಧ್ರಗಳನ್ನು ಹೊಂದಿರುತ್ತದೆ; ಕಚ್ಚು ಮಾಡಿದ ಜಾಗ ತೆಳು ಕಿತ್ತಳೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿರುತ್ತವೆ,ಎಳೆಯದಾಗಿದ್ದಾಗ ಸ್ವಲ್ಪಮಟ್ಟಿಗೆ ಸೂಕ್ಷ್ಮ ಮೃದು ತುಪ್ಪಳದ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತವಾಗಿದ್ದು ಮತ್ತು ಸಮಗರಿ ರೂಪಿಗಳಾಗಿರುತ್ತವೆ, ಅಪರೂಪವಾಗಿ ಅಸಮಗರಿ ರೂಪಿಗಳಾಗಿರುತ್ತವೆ,ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆ -ಯಲ್ಲಿದ್ದು 40 ಸೆಂ.ಮೀ.ವರೆಗಿನ ಉದ್ದವಿರುತ್ತವೆ;ಅಕ್ಷದಿಂಡು ಉಬ್ಬಿದ ಬುಡದ ಸಮೇತವಿದ್ದು, ಎಳೆಯದಾಗಿದ್ದಾಗ ಕೊಂಚ ಮಟ್ಟಿನ ಮೃದುತುಪ್ಪಳವನ್ನು ಹೊಂದಿರುತ್ತದೆ; ಉಪತೊಟ್ಟು 0.4 ರಿಂದ 0.8 ಸೆಂ.ಮೀ.ಉದ್ದವಿದ್ದು,ದೃಢವಾಗಿರುತ್ತದೆ ಮತ್ತು ರೋಮರಹಿತವಾಗಿರುತ್ತದೆ;ಉಪಪತ್ರಗಳು 3 ರಿಂದ 6 ಜೋಡಿಗಳಿದ್ದು ಅಭಿಮುಖಿ ಅಥವಾ ಉಪ ಅಭಿಮುಖಿಗಳಾಗಿರುತ್ತವೆ,ಗಾತ್ರದಲ್ಲಿ 9-25 X 2.5 – 7 ಸೆಂ.ಮೀ. ಇದ್ದು,ಸಂಕುಚಿತ ಅಂಡವೃತ್ತದ ಆಕಾರದಲ್ಲಿರುತ್ತವೆ,ಕಿರು ಪತ್ರಗಳ ತುದಿ ಚೂಪಲ್ಲದ ಅಥವಾ ಮೊಂಡಾಗ್ರವುಳ್ಳ ಕಿರಿದಾಗಿ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು, ಬುಡ ಚೂಪಾಗಿರುತ್ತದೆ, ಅಂಚು ನಯವಾಗಿದ್ದು, ಮೇಲ್ಮೈ ತೊಗಲನ್ನೋಲುವ ಮಾದರಿ -ಯಲ್ಲಿರುತ್ತದೆ ಮತ್ತು ರೋಮರಹಿತವಾಗಿರುತ್ತವೆ;ಮಧ್ಯನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು 12 ರಿಂದ 25 ಜೋಡಿಗಳಿದ್ದು ಕ್ರಮೇಣವಾಗಿ ಬಾಗಿದ್ದು ಆರೋಹಣ ಮಾದರಿಯಲ್ಲಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಅಥವಾ ತುದಿಯಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವು; ಹೂಗಳು ಸಂಕೀರ್ಣಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ ಮತ್ತು ತೊಟ್ಟುರಹಿತವಾಗಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು3 ಹಾಲೆಗಳ ಸಮೇತವಿದ್ದು 3 ಬದಿಗಳನ್ನು ಹೊಂದಿರುತ್ತವೆ;ಬೀಜಗಳು ಅಂಡವೃತ್ತದ ಆಕಾರದಲ್ಲಿದ್ದು,ಕಪ್ಪು ಬಣ್ಣ ಹೊಂದಿರುತ್ತವೆ.

ಜೀವಪರಿಸ್ಥಿತಿ :

600 ಮೀ. ಎತ್ತರದ ಪ್ರದೇಶಗಳ ಅರೆನಿತ್ಯದಿಂದ ನಿತ್ಯ ಹರಿದ್ವರ್ಣದವರೆಗಿನ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ಮತ್ತು ಆಫ್ರಿಕ:ಪಶ್ಚಿಮ ಘಟ್ಟದಲ್ಲಿನ ಎಲ್ಲಾ ಪ್ರದೇಶಗಳಲ್ಲಿ ಈ ಪ್ರಬೇಧ ವ್ಯಾಪಿಸಿದೆ.

ಗ್ರಂಥ ಸೂಚಿ :

Radlk., Sitzungsber. Math.-Phys. Cl. Koenigl. Bayer. Akad. Wiss. Muenchen 8: 276. 1878; Gamble, Fl. Madras 1: 247. 1997 (re. ed); Sasidharan, Biodiversity documentation for Kerala- Flowering Plants, part 6: 108. 2004; Saldanha, Fl. Karnataka 2: 194. 1996.

Top of the Page