ಲ್ಯಾಸಿಯಾಂತಸ್ ವೆನ್ಯುಲೋಸಸ್ (Wt. & Arn.) Wt. - ರೂಬಿಯೇಸಿ

:

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ 4 ಮೀ. ಎತ್ತರದ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ನಯವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪ-ದುಂಡಾಗಿರುವುದರಿಂದ ಸಂಕುಚಿತವರೆಗಿನ ಆಕಾರ ಹೊಂದಿರುತ್ತವೆ ರೋಮರಹಿತವಾಗಿರುತ್ತವೆ
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ವಿಶಾಲವಾದ ತ್ರಿಕೋನಾಕಾರದಲ್ಲಿದ್ದು ತೊಟ್ಟುಗಳ ನಡುವೆ ಇರುತ್ತವೆ ಹಾಗೂ ಶಾಶ್ವತವಾಗಿರುತ್ತವೆ;ತೊಟ್ಟು 0.6 ಸೆಂ.ಮೀ.ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿದ್ದು ರೋಮರಹಿತವಾಗಿರುತ್ತವೆ;ಪತ್ರಗಳು 5.5-11.5 X 2.5 – 4.5 ಸೆಂ.ಮೀ. ಗಾತ್ರ ಹೊಂದಿದ್ದು ಅಂಡವೃತ್ತದಿಂದ ಅಂಡವೃತ್ತ -ಅಂಡದವರೆಗಿನ ಆಕಾರ ಹೊಂದಿದ್ದು, ಅಗ್ರದಲ್ಲಿ ಸಣ್ಣದಾದ ಮೊನಚು ಮುಳ್ಳನ್ನು ಹೊಂದಿದ ಕ್ರಮೇಣ ಚೂಪಾಗುವ ಮಾದರಿಯ ತುದಿ, ಬೆಣೆಯಾಕಾರದಿಂದ ಚೂಪಲ್ಲದ ಮಾದರಿವರೆಗಿನ ಬುಡ, ತರಂಗಿತವಾದ ಅಂಚು,ಉಪತೊಗಲನ್ನೋಲುವ ಮೇಲ್ಮೈ ಹೊಂದಿದ್ದು ತಳಭಾಗದಲ್ಲಿ ರೋಮರಹಿತವಾಗಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ತುಸುವಾಗಿ ಕಾಲುವೆಗೆರೆ ಹೊಂದಿರುತ್ತದೆ;ಎರಡನೇ ದರ್ಜೆಯ ನಾಳಗಳು 6 ರಿಂದ 8 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಎಲೆ ದಿಂಡಿಗೆ ಸಮಕೋನದಲ್ಲಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಮಧ್ಯಾರಂಭಿ ಮಾದರಿಯವು;ಹೂಗಳು ಬಿಳಿ ಬಣ್ಣದಲ್ಲಿರುತ್ತವೆ;ತೊಟ್ಟು 0.6 ಸೆಂ.ಮೀ ಉದ್ದವಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಗೋಳಾಕಾರದಲ್ಲಿದ್ದು ಅಗ್ರದಲ್ಲಿ ಶಾಶ್ವತವಾದ ಪುಷ್ಪಪಾತ್ರೆಯ ಎಸಳುಗಳನ್ನು ಹೊಂದಿರುತ್ತವೆ;ಬೀಜಗಳ ಸಂಖ್ಯೆ 4.

ಜೀವಪರಿಸ್ಥಿತಿ :

1600 ಮತ್ತು2500 ಮೀ. ನಡುವಿನ ಅತಿ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ನೈರುತ್ಯ ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ನೀಲಗಿರಿ ಮತ್ತು ಅಣ್ಣಾಮಲೈ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Wight, Ic.t. 1032. 1845; Gamble, Fl. Madras 2: 648. 1993 (re. ed); Sasidharan, Biodiversity documentation for Kerala- Flowering Plants, part 6: 222. 2004.

Top of the Page