ನೀಮ ಅಟ್ಟೆನ್ಯುಯೇಟ (J.Hk. & Th.) Warb. - ಮಿರಿಸ್ಟಿಕೇಸಿ

ಪರ್ಯಾಯ ನಾಮ : ಮಿರಿಸ್ಟಿಕ ಅಟ್ಟೆನ್ಯುಯೇಟ Wall. Ex J.Hk. & Thoms;

Vernacular names : Tamil: ಚೊರಪತ್ತಿರಿ, ಚೊರಪ್ಪಯಿನ್, ಚೊರ ಪನು, ಚೆನ್ನೆಲ್ಲಿ,ಚೊರಪಲಿMalayalam: ಕಾಡುಪಿಂಡೆ ಮರ,ರಕ್ತಮರ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ. ವರೆಗಿನ ಎತ್ತರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ದಟ್ಟ ಕಂದು ಬಣ್ಣದಲ್ಲಿರುತ್ತದೆ ಸಾಮಾನ್ಯವಾಗಿ ನಯವಾಗಿದ್ದು ಅನಿಯತವಾಗಿ ಚಕ್ಕೆಯೇಳುತ್ತದೆ;ಕಚ್ಚು ಮಾಡಿದ ಜಾಗ ಕೆಂಪು ಛಾಯೆಯನ್ನು ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳುಗಳು ಸುತ್ತು ಜೋಡನೆಯಲ್ಲಿದ್ದು ಮುಖ್ಯ ಕಾಂಡದ ಲಂಬ ರೇಖೆಗೆ ಸಮಕೋನದಲ್ಲಿರುತ್ತವೆ; ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ತುಕ್ಕು ವರ್ಣದ ದಟ್ಟವಾದ ಮೃದು ತುಪ್ಪಳದಿಂದ ಕೂಡಿರುತ್ತವೆ.
ಜಿನುಗು ದ್ರವ : ತೊಗಟೆಯನ್ನು ಕೆತ್ತಿದಾಗ ಕೆಂಪು ಬಣ್ಣದ ವಿಫುಲವಾದ ಸಸ್ಯ ರಸವಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ; ತೊಟ್ಟುಗಳು 0.6 ರಿಂದ1.3 ಸೆಂ.ಮೀ. ಉದ್ದ ಹೊಂದಿದ್ದು ಕಾಲುವೆಗೆರೆ ಸಮೇತವಾಗಿರುತ್ತವೆ ಮತ್ತು ಎಳೆಯದಾಗಿದ್ದಾಗ ನಸುಗೆಂಪು ಮಿಶ್ರಿತ ಹಳದಿ ಬಣ್ಣದ ನಕ್ಷತ್ರ ರೂಪದ ದಟ್ಟವಾದ ಮತ್ತು ಉಪ-ಮೃದುತುಪ್ಪಳದಿಂದ ಕೂಡಿರುತ್ತವೆ ಹಾಗೂ ಬಲಿತಾಗ ರೋಮರಹಿತವಾಗಿರುತ್ತವೆ;ಪತ್ರಗಳು 12 - 23 X 3.5 - 8 ಸೆಂ.ಮೀ.ವರೆಗಿನ ಗಾತ್ರವಿದ್ದು ಸಂಕುಚಿತ ಚತುರಸ್ರದಿಂದ ಚತುರಸ್ರ ಅಥವಾ ಸಂಕುಚಿತ ಅಂಡವೃತ್ತದಿಂದ ಭರ್ಜಿಯವರೆಗಿನ ಆಕಾರ ಹೊಂದಿದ್ದು, ಅನುಕ್ರಮವಾಗಿ ಚೂಪಾದುದರಿಂದ ಕ್ರಮೇಣ ಚೂಪಾಗುವ ತುದಿ,ದುಂಡಾದ ಅಥವಾ ಚೂಪಾದ ಬುಡ,ನಯವಾದ ಅಂಚು,ಕಾಗದವನ್ನೋಲುವುದರಿಂದ ಹಿಡಿದು ಉಪ- ತೊಗಲನ್ನೋಲುವ ಮಾದರಿಯ ಮೇಲ್ಮೈ ಹೊಂದಿರುತ್ತವೆ,ಪತ್ರಗಳು ಮೇಲ್ಭಾಗದಲ್ಲಿ ಹೊಳಪಿನಿಂದ ಕೂಡಿದ್ದು ತಳಭಾಗ ಮಾಸಲು ಬೂದು ಹಸಿರು ಬಣ್ಣದಲ್ಲಿರುತ್ತವೆ ;ಮಧ್ಯ ನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 7 - 14 ಜೋಡಿಗಳಿದ್ದು ಪ್ರಮುಖವಾಗಿರುತ್ತವೆ ಮತ್ತು ಕ್ರಮೇಣವಾಗಿ ಬಾಗಿರುತ್ತವೆ ಹಾಗೂ ಪತ್ರದ ತಳಭಾಗದಲ್ಲಿ ಪ್ರಮುಖವಾಗಿ ಉಬ್ಬಿದ್ದು ಮೇಲ್ಭಾಗದಲ್ಲಿ ಸ್ವಲ್ಪಮಟ್ಟಿಗೆ ಉಬ್ಬಿರುತ್ತವೆ;ಮೂರನೇ ದರ್ಜೆಯ ನಾಳಗಳು ಕಡಿಮೆ ಅಂತರದಲ್ಲಿದ್ದು ಓರೆಯಾಗಿ ಎಲೆದಿಂಡಿನ ಕಡೆಗೆ ಬಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಏಕ ಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ;ಗಂಡು ಹೂಗಳು ಹಳದಿ ಛಾಯೆಯನ್ನು ಹೊಂದಿದ್ದು ಅಕ್ಷಾಕಂಕುಳಿನಲ್ಲಿರುವ ಪುನರಾವೃತ್ತಿಯಾಗಿ ಕವಲೊಡೆದ ಪುಷ್ಪಮಂಜರಿಯಲ್ಲಿರುತ್ತವೆ ಹಾಗೂ ನಸುಗೆಂಪು ಮಿಶ್ರಿತ ಹಳದಿ ಬಣ್ಣದ ದಟ್ಟ ಮೃದುಗೂದಲಿಂದ ಕೂಡಿರುತ್ತವೆ;ಹೆಣ್ಣ ಹೂಗಳು ದೊಡ್ಡ ಗಾತ್ರದಲ್ಲಿದ್ದು ಅಕ್ಷಾಕಂಕುಳಿನಲ್ಲಿನ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ / ಬೀಜ : ಸಂಪುಟ ಫಲ ಅಂಡವೃತ್ತಾಕೃತಿಯಲ್ಲಿದ್ದು 4 ಸೆಂ.ಮೀವರೆಗಿನ ಗಾತ್ರ ಹೊಂದಿದ್ದು, 2 ಹಾಲೆಗಳ ಸಮೇತವಿರುತ್ತವೆ ಮತ್ತು ತುದಿಯಲ್ಲಿ ಸೂಕ್ಷ್ಮವಾದ ಮುಳ್ಳನ್ನು ಹೊಂದಿದ್ದು ನಸುಗೆಂಪು ಮಿಶ್ರಿತ ಹಳದಿ ಬಣ್ಣದ ದಟ್ಟ ಮೃದುಗೂದಲಿಂದ ಕೂಡಿರುತ್ತವೆ; ಬೀಜಗಳು ಒಂದಿದ್ದು ಕಡುಗೆಂಪು ಬಣ್ಣದ ಆಳವಾದ ಸೀಳಿಕೆಗಳನ್ನುಳ್ಳ ಪತ್ರೆ ಸಮೇ

ಜೀವಪರಿಸ್ಥಿತಿ :

1400 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಈ ಪ್ರಭೇದ ಸಾಮಾನ್ಯವಾಗಿ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ, ಮಧ್ಯ ಮತ್ತು ದಕ್ಷಿಣ ಮಹಾರಾಷ್ಟ್ರದ ಸಹ್ಯಾದ್ರಿಯಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Ann. Roy. Bot. Gard.(Calcutta) 3: 291.t. 118.f. 1 -8.1891;Gamble, Fl. Madras 3:1215.1998(rep.ed.); Sasidharan, Biodiversity documentation for Kerala- Flowering Plants, part 6:393.2004;Saldanha, Fl. Karnataka 1: 53.1984.

Top of the Page