ಇಕ್ಸೋರ ನೊಟೊನಿಯಾನ Wall. ex G. Don - ರೂಬಿಯೇಸಿ

ಪರ್ಯಾಯ ನಾಮ : ಇಕ್ಸೋರ ಸೌಲಿಯೆರಿಯೈGamble

Vernacular names : Tamil: ಕಲಿಲಂಬಿಲಿMalayalam: ಇರಂಬುರಿಪ್ಪಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ 5 ಮೀ. ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು,ಒರಟಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಬೆಂದು ರೂಪದಲ್ಲಿದ್ದು ,ಕಿರಿದಾದ ಅಂತರ ಗಿಣ್ಣನ್ನು ಹೊಂದಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ದಬ್ಬಳದಾಕಾರದ ಅಗ್ರವುಳ್ಳ ವಿಶಾಲವಾದ ಅಂಡ ಆಕಾರ ಹೊಂದಿದ್ದು ತೊಟ್ಟುಗಳ ನಡುವೆ ಇದ್ದು ಉದುರು ಮಾದರಿಯಲ್ಲಿದ್ದು ಉದುರಿದ ನಂತರ ಗುರುತುಗಳನ್ನು ಉಳಿಸುತ್ತವೆ;ತೊಟ್ಟು 0.5 ರಿಂದ 1.3 ಸೆಂ.ಮೀ.ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತದೆ, ರೋಮರಹಿತವಾಗಿರುತ್ತದೆ;ಪತ್ರಗಳು 7.5-15(-20) X 2.5 –7.5 ಸೆಂ.ಮೀ. ಗಾತ್ರ ಹೊಂದಿದ್ದು ಸಂಕುಚಿತ ಅಂಡವೃತ್ತದಿಂದ ಬುಗುರಿ- ಭರ್ಜಿಯವರೆಗಿನ ಆಕಾರ ಹೊಂದಿದ್ದು,ಚೂಪಾದುದರಿಂದ ಕ್ರಮೇಣ ಚೂಪಾಗುವ ತುದಿ, ಚೂಪಾದುದದರಿಂದ ಬೆಣೆಯಾಕಾರದವರೆಗಿನ ಮಾದರಿಯ ಬುಡ,ಸ್ವಲ್ಪಮಟ್ಟಿಗೆ ಹಿಂಸುಳಿಗೊಂಡ ಅಂಚು,ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು 12 ರಿಂದ 16 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ನೀಳಛತ್ರ ಮಧ್ಯಾರಂಭಿ ಮಾದರಿಯವು; ಹೂಗಳು ಉಪತೊಟ್ಟುಗಳನ್ನು ಹೊಂದಿದ್ದು ಗುಲಾಬಿ ಬಣ್ಣದ ಛಾಯೆ ಹೊಂದಿರುತ್ತವೆ.
ಕಾಯಿ / ಬೀಜ : ಬೆರ್ರಿಗಳು ಗೋಳದ ಆಕಾರದಲ್ಲಿದ್ದು,ಅಂದಾಜು 0.9 ಸೆಂ.ಮೀ. ಅಡ್ಡಗಲತೆ ಹೊಂದಿರುತ್ತವೆ; ಬೀಜಗಳ ಸಂಖ್ಯೆ 2.

ಜೀವಪರಿಸ್ಥಿತಿ :

800 ಮತ್ತು 2400 ಮೀ. ನಡುವಿನ ಮಧ್ಯಮ ಮತ್ತು ಅತಿಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣದಿಂದ ಅರೆ ನಿತ್ಯ ಹರಿದ್ವರ್ಣ ದವರೆಗಿನ ಕಾಡುಗಳ ಅಂಚಿನಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿ ಮತ್ತು ಮಧ್ಯ ಸಹ್ಯಾದ್ರಿಯ ಪಾಲಕ್ಕಾಡು,ನೀಲಗಿರಿ ಮತ್ತು ಬಾಬಾಬುಡನ್ ಗಿರಿ ಬೆಟ್ಟ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Gen. Hist. 3:571.1834;Gamble, Fl. Madras 2: 630. 1993 (re. ed); Sasidharan, Biodiversity documentation for Kerala- Flowering Plants, part 6: 219. 2004.

Top of the Page