English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 10 ಮೀ ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು. |
| ಕಾಂಡ ಮತ್ತು ತೊಗಟೆ : | ತೊಗಟೆ ಕಂದು ಬಣ್ಣ ಹೊಂದಿದ್ದು,ಅನಿಯತವಾಗಿ ಚಕ್ಕೆಯುಕ್ತವಾಗಿರುತ್ತದೆ;ಕಚ್ಚು ಮಾಡಿದ ಜಾಗ ನಸುಗೆಂಪು . |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ದುಂಡಾಗಿದ್ದು ಎಳೆಯದಾಗಿದ್ದಾಗ ನಸುಗೆಂಪಿನಿಂದ ಕೂಡಿದ ಹಳದಿ ಬಣ್ಣದ ಮೃದು ತುಪ್ಪಳದಿಂದ ಕೂಡಿದ್ದು ನಂತರ ರೋಮರಹಿತವಾಗುತ್ತವೆ. |
| ಜಿನುಗು ದ್ರವ : | ಸಸ್ಯ ಕ್ಷೀರ ಹಾಲಿನ ಬಿಳಿ ಬಣ್ಣ ಹೊಂದಿದ್ದು ವಿಫುಲವಾಗಿರುತ್ತದೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ; ತೊಟ್ಟು 0.5 – 0.7 ಸೆಂ.ಮೀ.ವರೆಗಿನ ಉದ್ದವಿದ್ದು,ಅಡ್ಡ ಸೀಳಿದಾಗ ಸಪಾಟ ಪೀನಮಧ್ಯದ ಆಕಾರದಲ್ಲಿರುತ್ತದೆ, ಮತ್ತು ರೋಮರಹಿತವಾಗಿರುತ್ತದೆ; ಪತ್ರಗಳು 4 -7.5 X 2 –3.2 ಸೆಂ.ಮೀ. ಗಾತ್ರ,ಬುಗುರಿಯ ಆಕಾರ ಹೊಂದಿದ್ದು, ಚೂಪಲ್ಲದ ಮತ್ತು ಧೀರ್ಘ ಕಚ್ಚುಳ್ಳ ತುದಿ,ಬೆಣೆಯಾಕಾರದ ಬುಡ,ನಯವಾದ ಮತ್ತು ಹಿಂಸುರುಳಿಗೊಂಡ ಅಂಚು,ತೊಗಲನ್ನೋಲುವ ಮೇಲ್ಮೈಹೊಂದಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 4 – 7 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಕಡಿಮೆ ಅಂತರ ಹೊಂದಿದ್ದು ಓರೆಯಾಗಿ ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ. |
| ಪುಷ್ಪಮಂಜರಿ / ಹೂಗಳು : | ಹೂಗಳು ಕೆನೆ ಬಣ್ಣದಲ್ಲಿದ್ದು,ತೊಟ್ಟುರಹಿತವಾಗಿರುತ್ತವೆ,ಅಕ್ಷಾಕಂಕುಳಿನಲ್ಲಿನ ಗುಂಪುಗಳಲ್ಲಿರುತ್ತವೆ ಅಥವಾ ಎಲೆರಹಿತ ಗಿಣ್ಣುಗಳ ಮೇಲಿರುತ್ತವೆ. |
| ಕಾಯಿ / ಬೀಜ : | ಬೆರ್ರಿ ಅಂಡವೃತ್ತದ ಆಕಾರ ಹೊಂದಿದ್ದು 0.8 ಸೆಂ.ಮೀ.ವರೆಗಿನ ಉದ್ದ ಹೊಂದಿರುತ್ತದೆ; ಬೀಜದ ಸಂಖ್ಯೆ 1. |