ಹಿಡ್ನೋಕಾರ್ಪಸ್ ಮ್ಯಾಕ್ರೋಕಾರ್ಪ (Bedd.) Warp. ssp. ಮ್ಯಾಕ್ರೋಕಾರ್ಪ - ಫ್ಲಕೋರ್ಶಿಯೇಸಿ

Synonym : ಆಸ್ಟೀರಿಯಾಸ್ಟಿಗ್ಮ ಮ್ಯಾಕ್ರೋಕಾರ್ಪ Bedd. ಮತ್ತು ಟರಕ್ಟೋಜಿನೋಸ್ ಮ್ಯಾಕ್ರೋಕಾರ್ಪ (Bedd.) Balak.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಸೂಕ್ಷ್ಮ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಸಾಲಿನಲ್ಲಿರುತ್ತವೆ;ಕಾವಿನೆಲೆಗಳು ಉದುರಿ ಹೋಗುವಂತವು; ತೊಟ್ಟುಗಳು 1.2 -2 ಸೆಂ.ಮೀ. ವರೆಗಿನ ಉದ್ದ ಹೊಂದಿದ್ದು ತುದಿಯಲ್ಲಿ ಊದಿಕೊಂಡಿರುತ್ತದೆ ಮತ್ತುಮೃದು ತುಪ್ಪಳದಿಂದ ಕೂಡಿರುತ್ತದೆ; ಪತ್ರಗಳು 17-30X6-10ಸೆಂ.ಮೀ.ಗಾತ್ರ ಹೊಂದಿದ್ದುಚತುರಸ್ರದ ಆಕಾರ ಹೊಂದಿದ್ದು,ಥಟ್ಟನೆ ಬಾಲರೂಪಿ- ಕ್ರಮೇಣ ಚೂಪಾಗುವ ತುದಿ,ಚೂಪಾದ ಮತ್ತು ಅಸಮವಾದ ಬುಡ ಮತ್ತು ನಯವಾದ ಅಂಚು ಹೊಂದಿರುತ್ತವೆ; ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿರುತ್ತದೆ;ಪತ್ರದ ತಳ ಭಾಗದ ಮಧ್ಯ ನಾಳ ಸೂಕ್ಷ್ಮ ಮೃದು ತುಪ್ಪಳದಿಂದ ಕೂಡಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು 6-8 ಜೋಡಿಗಳಿದ್ದು ಅಗ್ರದ ಕಡೆಗೆ ಓರೆಯಾಗಿ ಆರೋಹಣಗೊಳ್ಳುತ್ತವೆ;ಮೂರನೇ ದರ್ಜೆಯ ನಾಳಗಳು ಕಡಿಮೆ ಅಂತರದಲ್ಲಿದ್ದು ಲಂಬ ರೇಖೆಗೆ ಸಮಕೋನದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ / ಹೂಗಳು : ಹೂಗಳು ಹಳೆಯ ಕವಲುಗಳ ಮೇಲಿನ ಕಿರು ಉದ್ದದ ವೃಂತಗಳ ಮೇಲಿನ ಗುಚ್ಛಗಳಲ್ಲಿದ್ದು ಬಿಳಿ ಬಣ್ಣ ಹೊಂದಿರುತ್ತವೆ;ಕೇಸರಗಳು ಅನೇಕ..
ಕಾಯಿ / ಬೀಜ : ಬೆರ್ರಿಗಳು ಗೋಳಾಕಾರದಲ್ಲಿದ್ದು 15 ಸೆಂ.ಮೀ.ವರೆಗಿನ ಅಡ್ಡಗಳತೆ ಹೊಂದಿರುತ್ತವೆ ಮತ್ತುಕಡು ಕಂದು ಮೃದುತುಪ್ಪಳದಿಂದ ಕೂಡಿರುತ್ತವೆ ಹಾಗೂ ದಾರುವಿನಂತಿರುತ್ತವೆ; ಬೀಜಗಳು ಅನೇಕ.

ಜೀವಪರಿಸ್ಥಿತಿ :

1000 ಮೀ. ವರೆಗಿನ ಕಡಿಮೆ ಮತ್ತು ಮಧ್ಯಮ ತೇವಾಂಶದಿಂದ ಕೂಡಿದ ನಿತ್ಯಹರಿದ್ವರ್ಣ ಕಾಡುಗಳ ಒಳ ಛಾವಣಿಯಲ್ಲಿ ಅಪರೂಪವಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿಯಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Engl. & Prntl, Pflanzenf. 3 (6a). 21. 1893; Gamble, Fl. Madras 1: 52. 1997 (re. ed); Sasidharan, Biodiversity documentation for Kerala- Flowering Plants, part 6: 33. 2004.

Top of the Page