ಹಂಬೋಲ್ಟ್ ಶಿಯ ಡಿಕರೆನ್ಸ್ Bedd. ex Oliver - ಸಿಸಾಲ್ಪಿನಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮಿಶ್ರಿತ ಶ್ವೇತ ವರ್ಣದಲ್ಲಿದ್ದು ಕಚ್ಚು ಮಾಡಿದ ಜಾಗ ಕಂದು ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಕೃತಿಯಲ್ಲಿದ್ದು ಎಳೆಯದಾಗಿರುವಾಗ ಮೃದು ತುಪ್ಪಳದಿಂದ ಆವೃತಗೊಂಡಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ ಗರಿರೂಪಿ ಮಾದರಿಯಲ್ಲಿದ್ದು, ಪರ್ಯಾಯ ಜೋಡನಾ ವ್ಯವಸ್ಥೆ ಹೊಂದಿದ್ದು ಕಾಂಡದ ಎರಡೂ ಕಡೆಯ ಎದುರು ಬದುರಿನ ಲಂಬ ಸಾಲಿನಲ್ಲಿರುತ್ತವೆ, ಹಾಗೂ ಉಬ್ಬಿದ ಎಲೆಬುಡ ಹೊಂದಿರುತ್ತವೆ; ಅಕ್ಷದಿಂಡು 30 ಸೆ.ಮೀ.ಗೂ ಹೆಚ್ಚಿನ ಉದ್ದ ಹೊಂದಿದ್ದು ಪ್ರಾಮುಖ್ಯವಾಗಿ ರೆಕ್ಕೆಯುಕ್ತವಾಗಿರುತ್ತದೆ; ರೆಕ್ಕೆಗಳು ತಲೆಕೆಳಗೊಂಡ ಹೃದಯಾಕಾರದವು; ಕಾವಿನೆಲೆಗಳು ಜೋಡಿಯಾಗಿದ್ದು, ಎಲೆಪತ್ರವನ್ನು ಹೋಲುವಂತಿದ್ದು 7 ಸೆಂ. ಮೀ ಉದ್ದ (ತುದಿಯನ್ನು ಸೇರಿ) ಹಾಗೂ 2 ಸೆ.ಮೀ.ಅಗಲವುಳ್ಳ ಗಾತ್ರವನ್ನು ಹೊಂದಿದ್ದು, ಭರ್ಜಿಯಾಕಾರದಲ್ಲಿದ್ದು ಬಾಲರೂಪಿ ತುದಿಯನ್ನು ಹೊಂದಿರುತ್ತವೆ; ಕಾವಿನೆಲೆಗಳ ಬುಡದಲ್ಲಿರುವ ಉಪಾಂಗ ಬುಗುರಿ-ಭರ್ಜಿ ಸಮ್ಮಿಶ್ರದ ಅಥವಾ ಮೂತ್ರಕೋಶವನ್ನು ಹೋಲುವ ಆಕಾರದಲ್ಲಿದ್ದು 4x5 ಸೆ.ಮೀ. ಗಾತ್ರವನ್ನು ಹೊಂದಿರುತ್ತದೆ; ಕಿರು ಎಲೆಗಳು 4 ರಿಂದ 6 ಜೋಡಿಗಳಿದ್ದು ತೊಟ್ಟು ರಹಿತವಾಗಿದ್ದು ನಸುಗೆಂಪು ಅಥವಾ ಶ್ವೇತ ವರ್ಣ ಹೊಂದಿರುತ್ತವೆ ಮತ್ತು ಎಳೆಯದಾಗಿದ್ದಾಗ ಜೋತಾಡುತ್ತಿರುತ್ತವೆ, ಪತ್ರಗಳು 12 - 32 x 6 - 10 ಸೆ.ಮೀ. ಗಾತ್ರ, ಚತುರಸ್ರಾಕಾರ - ಭರ್ಜಿಯ ಆಕಾರ ಹೊಂದಿರುತ್ತವೆ, ತೀರಾ ಕೆಳಗಿನ ಜೋಡಿಗಳು ಸಾಮಾನ್ಯವಾಗಿ ಸಂಕುಚಿದವಾದ ಅಂಡಾಕಾರ ಹೊಂದಿರುತ್ತವೆ, ಪತ್ರದ ತುದಿ ಬಾಲರೂಪಿ, ಪತ್ರದ ಬುಡ ದುಂಡಾಗಿ ಅಥವಾ ಉಪ-ಹೃದಯಾಕಾರದಲ್ಲಿರುತ್ತದೆ. ಪತ್ರಗಳು ಉಪ-ತೊಗಲನ್ನು ಹೋಲುವಂತಿದ್ದು ನಯವಾದ ಅಂಚನ್ನು ಹೊಂದಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಅಚ್ಚೊತ್ತಿದಂತಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 12 ಜೋಡಿಗಳಿದ್ದು ಕುಣಿಕೆಗೊಂಡಿರುತ್ತವೆ; ತೃತೀಯ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿರುವ ಸಣ್ಣ ಗಾತ್ರದ ಮಧ್ಯಾಭಿಸರ ಮಾದರಿಯ ಮಂಜರಿಯಲ್ಲಿ ಅಥವಾ ಅತಿಬಲಿತ ಕೊಂಬೆಗಳ ಮೇಲಿರುತ್ತವೆ.
ಕಾಯಿ /ಬೀಜ : ಪಾಡುಗಳು ತೆಳುವಾಗಿದ್ದು, ಕಂದು ಬಣ್ಣ ಹೊಂದಿದ್ದು ದಟ್ಟ ಮೃದು ತುಪ್ಪಳ ಸಮೇತವಿದ್ದು 5x2.8 ಸೆ.ಮೀ. ಗಾತ್ರ ಹೊಂದಿರುತ್ತವೆ; ಬೀಜಗಳು 2 ರಿಂದ 3 ಇದ್ದು ಗುಂಡಾಗಿ ಹಾಗೂ ಚಪ್ಪಟೆಯಾಗಿರುತ್ತವೆ.

ಜೀವಪರಿಸ್ಥಿತಿ :

ಕಡಿಮೆ ಎತ್ತರದ (200 ರಿಂದ 800 ಮೀ.) ಪ್ರದೇಶಗಳ ತೇವಾಂಶವುಳ್ಳ ನಿತ್ಯಹರಿದ್ವರ್ಣ ಕಾಡುಗಳಲ್ಲಿನ ಒಳಛಾವಣಿಯಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತ - ಅಗಸ್ತ್ಯಮಲೈನ ಶೆಂದುರುನಿ ಪ್ರದೇಶದಲ್ಲಿ ಸಾಮಾನ್ಯವಾಗಿಯೂ, ದಕ್ಷಿಣ ಸಹ್ಯಾದ್ರಿಯ ಏಲಮಲೈ ಮತ್ತು ಅಣ್ಣಾಮಲೈ ಪ್ರದೇಶಗಳಲ್ಲಿ ಅಪರೂಪವಾಗಿಯೂ ಪ್ರಭೇದ ಕಾಣ ಸಿಗುತ್ತದೆ.

ಸ್ಥಿತಿ :

ಅಳಿವಿನಂಚಿನ ಕಡಿಮೆ ಅಪಾಯದ ಸಂಭವ ಸ್ಥಿತಿ : ನಶಿಸಿಹೋಗುವ ಭೀತಿಗೆ ಹತ್ತಿರವಾದ ಸ್ಥಿತಿ (IUCN 2000)

ಗ್ರಂಥ ಸೂಚಿ :

Hooker, Icon. Pl. 2368. 1895; Gamble, Fl. Madras 1: 411. 1997 (re. ed); Sasidharan, Biodiversity documentation for Kerala- Flowering Plants, part 6: 155. 2004.

Top of the Page