ಹೋಪಿಯ ಪೊಂಗ (Dennst.) Mabberly - ಡಿಪ್ಟೆರೋಕಾರ್ಪೇಸಿ

Synonym : ಆರ್ಟೋಕಾರ್ಪಸ್ ಪೊಂಗ Dennst.;ಹೋಪಿಯ ವೈಟಿಯಾನ Wall.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 18 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ತೆಳು ಹಾಗೂ ನಯವಾಗಿದ್ದು ಚಕ್ಕೆಯುಕ್ತವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಜೋತಾಡುವಂತಿದ್ದು ದುಂಡಾಕಾರದಲ್ಲಿದ್ದು, ದಟ್ಟ ಮೃದುತುಪ್ಪಳ ಸಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಕಾವಿನೆಲೆಗಳು ಉದುರಿಹೋಗುವಂತಹವು;ತೊಟ್ಟುಗಳು ದೃಢ ಹಾಗೂ ದುಂಡಾಗಿದ್ದು 1.3 ಸೆಂ.ಮೀ ಉದ್ದವಿರುತ್ತವೆ ಮತ್ತು ಮತ್ತು ದಟ್ಟವಾದ ಬಿಳಿ ಮೃದು ತುಪ್ಪಳದಿಂದ ಕೂಡಿರುತ್ತವೆ,ಪತ್ರಗಳು 11 - 31 X 2.5 – 7.5 ಸೆಂ.ಮೀ ಗಾತ್ರ, ಸಂಕುಚಿತ ಚತುರಸ್ರಾಕಾರದಿಂದ ಹಿಡಿದು ಚತುರಸ್ರಾಕಾರದವರೆಗಿನ ಆಕಾರ ಹೊಂದಿದ್ದು ಮೊಂಡು ಚೂಪು ಅಥವಾ ಕ್ರಮೇಣ ಚೂಪಾಗುವ ಇಲ್ಲವೆ ಕೆಲವು ವೇಳೆ ದುಂಡಾದ ತುದಿ,ದುಂಡಾದ ಅಥವಾ ಉಪ-ಹೃದಯಾಕಾರದ ಬುಡ, ತೊಗಲು ಅಥವಾ ಉಪ-ತೊಗಲಿನ ಮಾದರಿಯ ಮೇಲ್ಮೈ ಹೊಂದಿರುತ್ತವೆ;ಎರಡನೇ ದರ್ಜೆಯ ನಾಳಗಳು 7-12 ಜೋಡಿಗಳಿದ್ದು ಕ್ರಮೇಣ ಬಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾಭಿಸರ ಮಾದರಿಯಲ್ಲಿದ್ದು ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ;ಹೂಗಳು ಬಿಳಿ ಬಣ್ಣದವು.
ಕಾಯಿ /ಬೀಜ : ಕಾಯಿಗಳು ಕರಟ ಮಾದರಿಯಲ್ಲಿದ್ದು ವೃಧ್ದಿಸಿದ 3 ಕಿರಿದಾದ ಹಾಗೂ 2 ಹಿರಿದಾದ ಪುಷ್ಪಪಾತ್ರೆಯ ಹಾಲೆಗಳ ಸಮೇತವಾಗಿರುತ್ತವೆ ಹಾಗೂ ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

900ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಮರಗಳಾಗಿ ಈ ಸಸ್ಯ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ದಕ್ಷಿಣ ಸಹ್ಯಾದ್ರಿ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Taxon 28: 587. 1979;Gamble, Fl.Madras 1:82.1997(re.ed.)Sasidharan, Biodiversity documentation for Kerala- Flowering Plants, part 6:45.2004. Saldanha,Fl. Karnataka 1: 194.1996.

Top of the Page