ಹೋಪಿಯ ಪಾರ್ವಿಫ್ಲೋರ Bedd. - ಡಿಪ್ಟೆರೋಕಾರ್ಪೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 35 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣಹೊಂದಿದ್ದು ಶಲ್ಕಾಯುಕ್ತವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಗಿದ್ದು, ಎಳೆಯದಾಗಿದ್ದಾಗ ಮೃದುತುಪ್ಪಳ ಸಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಉದುರಿಹೋಗುತ್ತವೆ;ತೊಟ್ಟುಗಳು ಅಂದಾಜು 0.6 ಸೆಂ.ಮೀ.ಉದ್ದವಿರುತ್ತವೆ ಹಾಗೂ ಕೊಂಚ ಕಾಲುವೆಗೆರೆ ಸಮೇತವಾಗಿರುತ್ತವೆ,ಎಳೆಯದಾಗಿದ್ದಾಗ ಮೃದುತುಪ್ಪಳ ಸಹಿತವಾಗಿರುತ್ತವೆ;ಪತ್ರಗಳು 4.5-10 X1.5-3.5 ಸೆಂ.ಮೀ ಗಾತ್ರ, ಭರ್ಜಿ ಅಥವಾ ಸಂಕುಚಿತ ಅಂಡದ ಆಕಾರ,ಸಂಕುಚಿತ-ಚೂಪಾದುದರಿಂದ ಕ್ರಮೇಣ ಚೂಪಾಗುವ ತುದಿ,ದುಂಡಾದುದರಿಂದ ಹಿಡಿದುಉಪ-ಹೃದಯಾಕಾರದ ಬುಡ ಹೊಂದಿದ್ದು ನಯವಾದ ಅಂಚನ್ನು ಹೊಂದಿದ್ದು ತೊಗಲನ್ನೋಲುವ ರೀತಿಯಲ್ಲಿರುತ್ತವೆ, ಅಂಚಿನಲ್ಲಿ ಮತ್ತು ಪತ್ರದ ತಳಭಾಗದಲ್ಲಿನ ಮಧ್ಯನಾಳದ ಮೇಲೆ ಕೆಲವು ಚದುರಿದ ರೋಮಗಳನ್ನು ಹೊರತು ಪಡಿಸಿದರೆ ಪತ್ರಗಳು ರೋಮರಹಿತವಾಗಿರುತ್ತವೆ;ಸಹಜೀವಿ ಗೂಡುಗಳು ಎರಡನೇ ದರ್ಜೆಯ ನಾಳಗಳ ಅಕ್ಷದಲ್ಲಿರುತ್ತವೆ, ಆದರೆ ಎಲ್ಲಾ ಎಲೆಗಳಲ್ಲಿ ಇರುವುದಿಲ್ಲ; ಮಧ್ಯನಾಳಗಳು ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತವೆ ;ಎರಡನೇ ದರ್ಜೆಯ ನಾಳಗಳು 5-12 ಜೋಡಿಗಳಿದ್ದು ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತವೆ,ತಳಗಿನ ಜೋಡಿ ಅಭಿಮುಖವಾಗಿದ್ದು ನೆರೆಯ ಎರಡನೇ ನಾಳಕ್ಕೆ ಸನಿಹವಾಗಿರುತ್ತದೆ; ಮೂರನೇ ದರ್ಜೆಯ ನಾಳಗಳು ಲಂಬರೇಖೆಗೆ ಸಮಕೋನದಲ್ಲಿದ್ದು, ಸನಿಹವಾಗಿ ಎಲೆದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯಲ್ಲಿದ್ದು ಮೃದುತುಪ್ಪಳದಿಂದ ಕೂಡಿರುತ್ತವೆ;ಹೂಗಳು ಬಿಳಿ ಬಣ್ಣದವು.
ಕಾಯಿ /ಬೀಜ : ಕಾಯಿಗಳು ಕರಟ ಮಾದರಿಯಲ್ಲಿದ್ದು ವೃಧ್ದಿಸಿದ ಪುಷ್ಪಪಾತ್ರೆ ಸಮೇತವಿರುತ್ತವೆ ಹಾಗೂ ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

900ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಹೊರಹೊಮ್ಮಿ ಕಾಣುವುದರಿಂದ ಹಿಡಿದು ಮೇಲ್ಛಾವಣಿ ರೀತಿಯ ಮರಗಳವರೆಗೆ ಈ ಈ ಸಸ್ಯ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ದಕ್ಷಿಣ ಸಹ್ಯಾದ್ರಿ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Beddome, Fl. Sylv. 7.1869; Gamble, Fl.Madras 1:82.1997(re.ed.)Sasidharan, Biodiversity documentation for Kerala- Flowering Plants, part 6:44.2004. Saldanha, Fl. Karnataka 1: 194.1996.

Top of the Page