ಹೋಲಿಗಾರ್ನ ಗ್ರಹಾಮಿಯೈ (Wt.)Kurz. - ಅನಕಾರ್ಡಿಯೇಸಿ

Synonym : Semecarpus grahamii Wt.

ಕನ್ನಡದ ಪ್ರಾದೇಶಿಕ ಹೆಸರು : ದೊಡ್ಡೆಲೆ ಹೊಲೆಗಾರ, ಕಂಕಣಗಾಳ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡದಾದ ಈ ಮರಗಳು 35 ಮೀ ಎತ್ತರದವರೆವಿಗೆ ಬೆಳೆಯುತ್ತವೆ.
ಕಾಂಡ ಮತ್ತು ತೊಗಟೆ : ತೊಗಟೆಯ ಮೇಲ್ಮೈ ನಯವಾಗಿದ್ದು ಬೂದು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಬಲಿಷ್ಟವಾಗಿದ್ದು,ತುಕ್ಕಿನ ಬಣ್ಣವುಳ್ಳ ಮೃದುತುಪ್ಪಳದಿಂದ ಕೂಡಿರುತ್ತದೆ.
ಜಿನುಗು ದ್ರವ : ಸಸ್ಯಕ್ಷೀರ ಕಪ್ಪುಬಣ್ಣವುಳ್ಳದಾಗಿರುತ್ತದೆ
ಎಲೆಗಳು : ಎಲೆಗಳು ಸರಳ, ಪರ್ಯಾಯ – ಸುತ್ತು ಜೋಡನಾ ವ್ಯವಸ್ಥೆಯಲ್ಲಿ ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ಎಲೆತೊಟ್ಟು 2 ಸೆಂ.ಮೀ. ಉದ್ದವಾಗಿದ್ದು,ತುಕ್ಕು ಬಣ್ಣದ ಮೃದುತುಪ್ಪಳದಿಂದ ದಟ್ಟವಾಗಿ ಆವರಿಸಿದ್ದು,ಎರಡು ಜೋಡಿ ದೃಢವಾದ ಚಾಚು ಚೀಲಗಳ ಸಮೇತವಿರುತ್ತದೆ; ಎಲೆ ಪತ್ರ 15-44 x 10 -17ಸೆಂ.ಮೀ. ಗಾತ್ರವಿದ್ದು, ಬುಗುರಿ-ಈಟಿ ಸಮ್ಮಿಶ್ರಾಕಾರದ ಹೊಂದಿರುರುತ್ತದೆ;ಪತ್ರದ ಮೇಲಿನ ಅರ್ಧ ಭಾಗ ವಿಶಾಲವಾದ ತ್ರಿಕೋನಾಕಾರದಲ್ಲಿದ್ದು,ಉಪ-ಕ್ರಮೇಣವಾಗಿ ಚೂಪಾಗುವ ತುದಿಯನ್ನೂ ಕೆಳಗಿನ ಅರ್ಧ ಭಾಗ ಕಡಿಮೆ ಅಗಲದಲ್ಲಿದ್ದು ಬೆಣೆಯಾಕಾರದ ಬುಡಭಾಗವನ್ನೂ ಹೊಂದಿರುತ್ತವೆ; ಅಂಚು ನಯವಾಗಿದ್ದು,ಮೇಲ್ಮೈ ತೊಗಲಿನ ತರಹವಿರುತ್ತದೆ. ಪತ್ರಗಳ ತಳಭಾಗ ತುಕ್ಕಿನ ಬಣ್ಣದ, ದಟ್ಟ ಮೃದುತುಪ್ಪಳದಿಂದ ಕೂಡಿದ್ದು, ಮೇಲ್ಭಾಗ ರೋಮರಹಿತವಾಗಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟ್ಟೆಯಾಗಿದ್ದು ರೋಮರಹಿತವಾಗಿರುತ್ತದೆ,;ಪತ್ರದಲ್ಲಿ ಸುಮಾರು 22-32 ಜೋಡಿ ಎರಡನೇ ದರ್ಜೆ ನಾಳಗಳಿದ್ದು ಮೂರನೇ ದರ್ಜೆ ನಾಳಗಳು ವಿಶಾಲವಾದ ಜಾಲಬಂಧ ವಿನ್ಯಾಸ ಹೊಂದಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಶ್ವೇತ ಬಣ್ಣದವು ಹಾಗೂ ಸಂಕೀರ್ಣಲಿಂಗಿಗಳಾರುತ್ತವೆ ಹಾಗೂ ಕಂದು ಬಣ್ಣದ ದಟ್ಟ- ಮೃದುತುಪ್ಪಳದಿಂದ ಕೂಡಿದ, ತುದಿಯಲ್ಲಿರುವ, ಪುನರಾವೃತ್ತಿಯಾಗಿ ಕವಲೊಡೆದ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯವು; ಕಾಯಿಗಳು ಒಂದು ಬೀಜವನ್ನೊಳಗೊಂಡಿದ್ದು 2.2ಸೆಂ.ಮೀ ಉದ್ದವಿರುತ್ತವೆ ಹಾಗೂ ಪುಷ್ಪಪೀಠದಿಂದ ಕೊಂಚ ಮುಂಚಾಚಿಕೊಂಡಿರುತ್ತವೆ.ಕಾಯಿಗಳ ಮೇಲ್ಮೈ ತುಕ್ಕು ಬಣ್ಣದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತದೆ.

ಜೀವಪರಿಸ್ಥಿತಿ :

ಈ ಪ್ರಭೇಧವು ಕಡಿಮೆ ಎತ್ತರದ ಪ್ರದೇಶಗಳ( ಸಮುದ್ರ ಮಟ್ಟಕ್ಕಿಂತ 200ಮೀ ರಿಂದ 700ಮೀ)ಅರೆ-ನಿತ್ಯಹರಿದ್ವರ್ಣದಿಂದ ತೇವಾಂಶದಿಂದ ಕೂಡಿದ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತ; ದಕ್ಷಿಣ ಸಹ್ಯಾದ್ರಿಯಿಂದ ಮಧ್ಯ ಸಹ್ಯಾದ್ರಿಯ ಪ್ರದೇಶಗಳಲ್ಲಿ ಸಾಮಾನ್ಯವಾಗಿಯೂ ಉತ್ತರ ಸಹ್ಯಾದ್ರಿಯ ಪ್ರದೇಶಗಳಲ್ಲಿ ಅಪರೂಪವಾಗಿಯೂ ಕಾಣಸಿಗುತ್ತವೆ.

ಸ್ಥಿತಿ :

ಅಪರೂಪ (IUCN 2000)

ಗ್ರಂಥ ಸೂಚಿ :

J. As. Soc. Bengal 41: 306. 1872; Gamble, Fl. Madras 1: 268-269. 1997 (re. ed); Saldanha, Fl. Karnataka 2: 205. 1996; Sasidharan, Biodiversity documentation for Kerala- Flowering Plants, part 6: 112. 2004.

Top of the Page