ಹೋಲಿಗಾರ್ನ ಬೆಡ್ಡೋಮಿಯೈ J.Hk. - ಅನಕಾರ್ಡಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡದಾದ ಈ ಮರಗಳು 35 ಮೀ ಎತ್ತರದವರೆವಿಗೆ ಬೆಳೆಯುತ್ತವೆ.
ಕಾಂಡ ಮತ್ತು ತೊಗಟೆ : ತೊಗಟೆಯ ಮೇಲ್ಮೈ ನಯವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಬಲಿಷ್ಟವಾಗಿದ್ದು,ಗುಂಡಾಕೃತಿಯಲ್ಲಿರುತ್ತವೆ.
ಜಿನುಗು ದ್ರವ : ಸಸ್ಯಕ್ಷೀರ ಕಪ್ಪುಬಣ್ಣವುಳ್ಳದಾಗಿರುತ್ತದೆ
ಎಲೆಗಳು : ಎಲೆಗಳು ಸರಳ, ಪರ್ಯಾಯ – ಸುತ್ತು ಜೋಡನಾ ವ್ಯವಸ್ಥೆಯಲ್ಲಿ ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ.ಎಲೆತೊಟ್ಟು 3.8 ಸೆಂ.ಮಿ.ಉದ್ದವಾಗಿದ್ದು, ಕಾಲುವೆ ಆಕಾರದ ಗೆರೆಗಳನ್ನು ಹೊಂದಿದ್ದು, ತುಕ್ಕಿನ ಬಣ್ಣದ, ದಟ್ಟವಾದ ಮೃದುತುಪ್ಪಳದಿಂದ ಕೂಡಿರುತ್ತದೆ. ಚಾಚುಚೀಲಗಳು 1 ರಿಂದ 2 ಜೋಡಿಗಳಿದ್ದು , ಕಂದು ಬಣ್ಣದ ಮೃದುರೋಮಗಳಿಂದ ಆವೃತ್ತವಾಗಿದ್ದು, ದೃಢವಾಗಿರುತ್ತದೆ.ಎಲೆಪತ್ರ 19 – 44 x 7-20 ಸೆಂ.ಮಿ.ಗಾತ್ರದಲ್ಲಿದ್ದು,ಬುಗುರಿ-ಈಟಿ ಸಮ್ಮಿಶ್ರಾಕಾರವನ್ನು ಹೊಂದಿರುತ್ತದೆ; ಪತ್ರದ ಮೇಲಿನ ಅರ್ಧ ಭಾಗ ವಿಶಾಲವಾದ ಗುಂಡಾಕಾರ ಅಥವಾ ತ್ರಿಕೋನಾಕಾರವಾಗಿದ್ದು,ಉಪ-ಕ್ರಮೇಣವಾಗಿ ಚೂಪಾಗುವ ತುದಿಯನ್ನೂ, ಕೆಳಗಿನ ಅರ್ಧ ಭಾಗ ಬೆಣೆಯಾಕಾರದದಿಂದ ಹಿಡಿದು ಚೂಪಾಗುವ ಬುಡಭಾಗವನ್ನೂ ಹೊಂದಿರುತ್ತವೆ; ಅಂಚು ಕೂದಲುಯುಕ್ತವಾಗಿದ್ದು, ಮೇಲ್ಮೈ ತೊಗಲಿನ ತರಹವಿರುತ್ತದೆ. ಪತ್ರಗಳ ಎಳೆಯದಾಗಿದ್ದಗ ತುಕ್ಕಿನಬಣ್ಣ, ದಟ್ಟ ಮೃದುತುಪ್ಪಳದಿಂದ ಕೂಡಿರುತ್ತದೆ.ಬಲಿತ ಪತ್ರಗಳ ತಳಭಾಗ ಮೃದುತುಪ್ಪಳ ಸಹಿತವಾಗಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗ ಚಪ್ಪಟೆಯಾಗಿದ್ದು, ಕೂದಲು ಸಹಿತವಾಗಿರುತ್ತದೆ; ಪತ್ರದಲ್ಲಿ ಸುಮಾರು 30 ಜೋಡಿ ಎರಡನೇ ದರ್ಜೆ ನಾಳಗಳಿದ್ದು ಮೂರನೇ ದರ್ಜೆ ನಾಳಗಳು ಜಾಲಬಂಧ ವಿನ್ಯಾಸ ಹೊಂದಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಸಂಕೀರ್ಣಲಿಂಗಿಗಳಾಗಿದ್ದು ಅಕ್ಷಾಕಂಕುಳಿನ ಅಥವಾ ತುದಿಯಲ್ಲಿನ ಪುನರಾವೃತ್ತಿಯಾಗಿ ಕವಲೊಡೆದ ಪುಷ್ಪಮಂಜರಿಯಲ್ಲಿರುತ್ತವೆ
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯವು ಹಾಗೂ ಒಂದು ಬೀಜವನ್ನು ಒಳಗೊಂಡಿದ್ದು ಅರ್ಧದಷ್ಟು ಭಾಗ ಹೈಪೋಕಾರ್ಪಿನಲ್ಲಿ ಹುದುಗಿಕೊಂಡಿರುತ್ತದೆ.

ಜೀವಪರಿಸ್ಥಿತಿ :

ಸಮುದ್ರಮಟ್ಟಕ್ಕಿಂತ 600 ಮೀ ವರೆವಿಗಿನ ಅರೆನಿತ್ಯ ಹರಿದ್ವರ್ಣ ರೀತಿಯ ಕಾಡುಗಳ ಮೇಲ್ಛಾವಣಿ ಮರಗಳಾಗಿ ಬೆಳೆಯುತ್ತವೆ.

ವ್ಯಾಪನೆ :

ದಕ್ಷಿಣ ಮಲಬಾರದಿಂದ ಉತ್ತರ ಕನ್ನಡ ಕರಾವಳಿ ಮತ್ತು ದಕ್ಷಿಣ ಸಹ್ಯಾದ್ರಿಯಿಂದ ಮಧ್ಯ ಸಹ್ಯಾದ್ರಿ ನಡುವಣ ಪ್ರದೇಶಗಳಲ್ಲಿ ಅಪರೂಪವಾಗಿಯೂ ಮತ್ತು ವ್ಯಾಪಕವಾಗಿಯೂ ಬೆಳೆಯುವ ಈ ಪ್ರಭೇಧ ಪಶ್ಚಿಮ ಘಟ್ಟಕ್ಕೆ ಸೀಮಿತ.

ಸ್ಥಿತಿ :

ದುರ್ಬಲ ಸ್ಥಿತಿಯಲ್ಲಿರುವ ಪ್ರಭೇಧ.

ಗ್ರಂಥ ಸೂಚಿ :

Hooker, Fl. Brit. Ind. 2: 38. 1876; Gamble, Fl. Madras 1: 269. 1997 (re. ed); Sasidharan, Biodiversity documentation for Kerala- Flowering Plants, part 6: 111. 2004.

Top of the Page