ಗ್ರೀವಿಯ ಪ್ಯಾನ್ಡೈಕ Drumm. ex Dunn - ಟೀಲಿಯೇಸಿ

:

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ. ಎತ್ತರದವರೆಗಿನ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು, ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು, ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ಕಾವಿನೆಲೆಗಳು ಪಾರ್ಶ್ವದಲ್ಲಿದ್ದು ಮೃದುತುಪ್ಪಳದಿಂದ ಕೂಡಿರುತ್ತವೆ,ಉದುರಿ ಹೋದ ನಂತರ ಗುರುತುಗಳನ್ನು ಉಳಿಸುತ್ತವೆ; ತೊಟ್ಟುಗಳು 0.3-1 ಸೆಂ.ಮೀ. ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತವೆ ಮತ್ತು ಮೃದುತುಪ್ಪಳದಿಂದ ಕೂಡಿರುತ್ತವೆ; ಪತ್ರಗಳು 4 – 8.5 X2.5-4.5 ಸೆಂ.ಮೀ. ಗಾತ್ರ, ಅಂಡ- ಭರ್ಜಿ ಅಥವಾ ಅಂಡವೃತ್ತ-ಚತುರಸ್ರದ ಆಕಾರ ಹೊಂದಿದ್ದು,ಬಾಲರೂಪಿ-ಕ್ರಮೇಣ ಚೂಪಾಗುವ ತುದಿ,ಅಸಮ್ಮಿತಿ ಮಾದರಿಯಿಂದ ಚೂಪಲ್ಲದ ಅಥವಾ ದುಂಡಾಗಿರುವವರೆಗಿನ ರೀತಿಯ ಬುಡ, ಅನಿಯತವಾಗಿ ದುಂಡೇಣು ದಂತಿತ - ಗರಗಸ ದಂತಿತವಾದ ಅಂಚು ಹೊಂದಿದ್ದು ಪತ್ರದ ತಳಭಾಗದ ನಾಳಗಳ ಮೇಲಾದರೂ ಮೃದುತುಪ್ಪಳ ಮತ್ತು ನಕ್ಷತ್ರ ರೂಪದ ರೋಮಗಳಿಂದ ಕೂಡಿರುತ್ತವೆ;ಪತ್ರಗಳ ಬುಡದಲ್ಲಿ 3-5 ನಾಳಗಳಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು 3 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಲಂಬ ರೇಖೆಗೆ ಸಮಕೋನಲ್ಲಿದ್ದು ವಿಶಾಲ ಜಾಲಬಂಧ ನಾಳ ವಿನ್ಯಾಸದವುಗಳಾಗಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಮಧ್ಯಾರಂಭಿ ಮಾದರಿಯವು;ತೊಟ್ಟು ಅಂದಾಜು 0.5 ಸೆಂ.ಮೀ.ಉದ್ದವಿರುತ್ತದೆ.
ಕಾಯಿ / ಬೀಜ : ಫಲಗಳು ಡ್ರೂಪ್ ಮಾದರಿಯವು.

ಜೀವಪರಿಸ್ಥಿತಿ :

ಅಂದಾಜು 800 ಮೀ. ಎತ್ತರದಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಬೆಳೆಯುವ ಮರಗಳು.

ವ್ಯಾಪನೆ :

ನೈರುತ್ಯ ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಅಗಸ್ತ್ಯಮಲೈ ನಲ್ಲಿ ಕಂಡುಬರುತ್ತದೆ.

ಸ್ಥಿತಿ :

ಅಪರೂಪ ಮತ್ತು ನಶಿಸಿಹೋಗುವ ಭೀತಿಯಲ್ಲಿನ ಸ್ಥಿತಿ(Ahmedulla & Nayar,1987)

ಗ್ರಂಥ ಸೂಚಿ :

Gamble, Fl. Madras 85. 1967; Gamble, Fl. Madras 1: 119. 1997 (re. ed); Sasidharan, Biodiversity documentation for Kerala- Flowering Plants, part 6:63. 2004

Top of the Page