ಗ್ಲಿಪ್ಟೋಪೆಟಾಲಮ್ ಲಾಸೋನಿಯೈ Gamble - ಸೆಲಾಸ್ಟ್ರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಪೊದೆಗಳು ಅಥವಾ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ರೋಮರಹಿತ ಹಾಗೂ ದುಂಡಾಗಿರುತ್ತವೆ;, ಎಳೆಯದಾದ ಕೊಂಬೆಗಳು ಚಪ್ಪಟೆಯಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಎಲೆತೊಟ್ಟುಗಳು 0.5 ಸೆಂ.ಮೀ ಉದ್ದ;ಪತ್ರಗಳು 5- 7.5 -8.5 X 2.7 -3.5 ಸೆಂ.ಮೀ ಗಾತ್ರವಿದ್ದು,ಅಂಡವೃತ್ತ-ಬುಗುರಿ ಆಕಾರದಲ್ಲಿದ್ದು, ಚೂಪಲ್ಲದ ತುದಿ, ಬೆಣೆಯಾಕಾರದ ಬುಡವನ್ನು ಹೊಂದಿದ್ದು,ತೊಗಲನ್ನು ಹೋಲುವ ಮೇಲ್ಮೈ ಹೊಂದಿರುತ್ತವೆ;ಪತ್ರದ ಅಂಚು ನಯ ಅಥವಾ ಎಲೆತುದಿಯ ಬಳಿ ಕೆಲವು ದಂತಗಳನ್ನು ಹೊಂದಿರುತ್ತದೆ;ಮಧ್ಯನಾಳ ಕೊಂಚ ಮಟ್ಟಿಗೆ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು 7 ರಿಂದ 9 ಜೋಡಿಗಳಿದ್ದು ಸ್ಪಷ್ಟವಾಗಿ ಕಾಣುವಂತಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿರುವ ಮಧ್ಯಾರಂಭಿ ಅಥವಾಅಗ್ರ ಅಕ್ಷಸ್ಥ ರೀತಿಯಲ್ಲಿದ್ದು 6 ರಿಂದ 7 ಹೂಗಳನ್ನು ಒಳಗೊಂಡಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು ಗೋಳಾಕಾರದಲ್ಲಿದ್ದು 1 ರಿಂದ 2 ಸೆಂ.ಮೀ ಸುತ್ತಳತೆಯಲ್ಲಿದ್ದು ಉಪಗೋಳಾಕಾರದ ಹಾಗೂ ಪತ್ರೆ(ಏರಿಲ್) ಸಮೇತವಿರುವ ಬೀಜಗಳನ್ನೊಳಗೊಡಿರುತ್ತವೆ.

ಜೀವಪರಿಸ್ಥಿತಿ :

ಅಪರೂಪವಾಗಿ ಒಳಛಾವಣಿಯ ಮರಗಳಾಗಿ 800 ರಿಂದ 1500 ಮೀ ಎತ್ತರದವರೆಗಿನ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತ- ತಮಿಳುನಾಡಿನ ಮುಖ್ಯವಾಗಿ ಪೆರಿಯಾರ್ ಪ್ರದೇಶದ ಪೂರ್ವ ಇಳಿಜಾರು ಪ್ರದೇಶ, ವರಶುನಾಡು ಪಳನಿ, ಪಾಲಕ್ಕಾಡು ಮತ್ತು ನೀಲಗಿರಿ.

ಸ್ಥಿತಿ :

ದುರ್ಬಲ ಸ್ಥಿತಿ (IUCN 2000)

ಗ್ರಂಥ ಸೂಚಿ :

Kew Bull. 1916: 131; Gamble, Fl. Madras 1: 204. 1997 (re. ed); Sasidharan, Biodiversity documentation for Kerala- Flowering Plants, part 6: 96. 2004.

Top of the Page