ಗ್ಲೊಖಿಡಿಯಾನ್ ಹೇನಿಯಾನಮ್ (Wt. & Arn.) Wt. - ಯೂಫೊರ್ಬಿಯೇಸಿ

ಪರ್ಯಾಯ ನಾಮ : ಗ್ಲೊಖಿಡಿಯಾನ್ ವೆಲ್ಯುಟಿನಮ್ Wt.

Vernacular names : Tamil: ಕೈರ, ಕಯರMalayalam: ಕೊಯಿನೆ, ಸಾಲಿ ಮರ,ಸೊಟ್ಟು ಕೊಯಿನೆ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು, ಬಲಿತಾಗ ಚಕ್ಕೆ ಮಾದರಿಯಲ್ಲಿರುತ್ತದೆ;ಕಚ್ಚು ಮಾಡಿದ ನಸುಗೆಂಪು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು, ದಟ್ಟ ಮೃದು ತುಪ್ಪಳ ಸಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ಕಾವಿನೆಲೆಗಳು ಉದುರಿ ಗುರುತುಗಳನ್ನು ಉಳಿಸುತ್ತವೆ;ತೊಟ್ಟುಗಳು 0.5 ಸೆಂ.ಮೀ. ವರೆಗಿನ ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತವೆ,ದಟ್ಟ ಮೃದುಪ್ಪಳ ಸಹಿತವಾಗಿರುತ್ತವೆ;ಪತ್ರಗಳು 14.5 X 5 ಸೆಂ.ಮೀ. ಗಾತ್ರ ಹೊಂದಿದ್ದು ಅಂಡಕಾರದಿಂದ ಅಥವಾ ಅಂಡವೃತ್ತ- ಚತುರಸ್ರದ ಆಕಾರ ಹೊಂದಿದ್ದು,ಪಾಶ್ವಗಳು ಅಸಮವಾಗಿದ್ದು, ಅಗ್ರದಲ್ಲಿ ಮೊನಚುಮುಳ್ಳನ್ನು ಹೊಂದಿದ ಚೂಪಾದ ತುದಿ, ಅಸಮ್ಮಿತಿಯಾದ ಬುಡ, ನಯವಾದ ಅಂಚು ಹೊಂದಿದ್ದು ತಳಭಾಗದಲ್ಲಿ ದಟ್ಟ ಮೃದುತುಪ್ಪಳ ಸಮೇತವಿರುತ್ತವೆ; ಎರಡನೇ ದರ್ಜೆಯ ನಾಳಗಳು 6 ರಿಂದ 8 ಜೋಡಿಗಳಿರುತ್ತವೆ, ಪತ್ರಗಳ ಎರಡೂ ಬದಿಯ ನಾಳಗಳು ರೋಮಸಹಿತವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಲಂಬ ರೇಖೆಗೆ ಸಮಕೋನದಲ್ಲಿದ್ದು, ಎಲೆಯ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿನ ಗುಚ್ಛಗಳಾಗಿದ್ದು, ದಟ್ಟ ಮೃದುತುಪ್ಪಳ ಸಹಿತವಾಗಿರುತ್ತವೆ; ಹೂಗಳು ಏಕಲಿಂಗಿಗಳಾಗಿದ್ದು ಹೆಣ್ಣು ಮತ್ತು ಗಂಡು ಹೂಗಳು ಒಂದೇ ಸಸ್ಯದಲ್ಲಿರುತ್ತವೆ.
ಕಾಯಿ / ಬೀಜ : ಸಂಪುಟ ಫಲಗಳು ಅದುಮಿದಂತಿದ್ದು, 3 ರಿಂದ 6 ಕೋಶಗಳನ್ನೊಳಗೊಂಡಿದ್ದು, ಹಾಲೆಗಳ ಸಮೇತವಿರುತ್ತವೆ.

ಜೀವಪರಿಸ್ಥಿತಿ :

600 ಮತ್ತು 2000 ಮೀ. ನಡುವಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಭಾರತ,ಬಾಂಗ್ಲದೇಶ ಮತ್ತು ಮ್ಯಾನ್ಮಾರ್ ;ಪಶ್ಚಿಮ ಘಟ್ಟ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Wt., Icon. Pl. Ind. Or. 1907. 1852; Chakrabarty and Ganopadhyay, JETB 19 205. 1995; Gamble, Fl. Madras 21307.1993; Sasidharan, Biodiversity documentation for Kerala- Flowering Plants, part 6 420. 2004; Saldanha, Fl. Karnataka 2 146.1996.

Top of the Page