ಫೈಕಸ್ ಜಹೇಲ Burm.f - ಮೊರೇಸಿ

ಪರ್ಯಾಯ ನಾಮ : ಫೈಕಸ್ ಜಕೇಲ Burm.

Vernacular names : Tamil: ಚೇಲ,ಕರ,ಕರ್-ಅಲ್Malayalam: ಕರಿಬಸರಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ. ಎತ್ತರದವರೆಗಿನ ಎಲೆಯುದುರು ಮಾದರಿಯ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ದಟ್ಟ ಕಂದು ಬಣ್ಣದಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಜಿನುಗು ದ್ರವ : ಜಿನುಗು ದ್ರವ ಬಿಳಿಯಾಗಿದ್ದು ವಿಫುಲವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಎಲೆಗಳಂತಿದ್ದು 0.7 ಸೆಂ.ಮೀ.ವರೆಗಿನ ಉದ್ದ ಹೊಂದಿದ್ದು ವಲಯಾಕಾರದ ಗುರುತುಗಳನ್ನುಳಿಸಿ ಉದುರಿ ಹೋಗುತ್ತವೆ;ತೊಟ್ಟುಗಳು ಅಂದಾಜು 6 ಸೆಂ.ಮೀ. ಉದ್ದ ಹೊಂದಿದ್ದು ಕಾಲುವೆಗೆರೆ ಸಮೇತವಾಗಿರುತ್ತವೆ ಮತ್ತು ರೊಮರಹಿತವಾಗಿರುತ್ತವೆ;ಪತ್ರಗಳು 20 X 8 ಸೆಂ.ಮೀ.ವರೆಗಿನ ಗಾತ್ರವಿದ್ದು ಅಂಡವೃತ್ತ – ಚತುರಸ್ರ ದ ಆಕಾರ ಹೊಂದಿದ್ದು, ಕ್ರಮೇಣ ಚೂಪಾಗುವುವ ತುದಿ, ದುಂಡಾದ ಬುಡ, ತೊಗಲನ್ನೋಲುವ ಮೇಲ್ಮೈ ,ನಯವಾದ ಅಂಚು ಹೊಂದಿರುತ್ತವೆ ,ಪತ್ರಗಳು ರೋಮರಹಿತವಾಗಿದ್ದು ಹೊಳಪಿನಿಂದ ಕೂಡಿರುತ್ತವೆ; 3 ಆಧಾರ ನಾಳಗಳು ಪತ್ರಗಳ ಬುಡದಲ್ಲಿರುತ್ತವೆ ;ಮಧ್ಯ ನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ ; ಎರಡನೇ ದರ್ಜೆಯ ನಾಳಗಳು 6- 10 ಜೋಡಿಗಳಿದ್ದು ಪ್ರಮುಖವಾಗಿರುತ್ತವೆ ಮತ್ತು ಸಮಾನಂತರದಲ್ಲಿರುತ್ತವೆ ಹಾಗೂ ಅಂಚಿನ ಬಳಿ ಕುಣಿಕೆಗೊಂಡಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಸೈಕೋನಿಯ ರೀತಿಯವುಗಳಾಗಿದ್ದು,ತೊಟ್ಟುರಹಿತವಾಗಿರುತ್ತವೆ, ಅದುಮಿದ ಗೋಳಾಕಾರದಲ್ಲಿರುತ್ತವೆ ಮತ್ತು ಎಲೆಗಳ ಅಕ್ಷಾಕಂಕುಳಿನಲ್ಲಿ ದಟ್ಟವಾಗಿ ಸಂದಣಿಗೊಂಡ,ಕಿರು ಗಾತ್ರದ ಗುಬುಟುಗಳ ಮೇಲೆ ಅಥವಾ ಹೆಚ್ಚು ಸಂಧರ್ಭಗಳಲ್ಲಿ ಎಲೆಯುದುರು ಗುರುತುಗಳಲ್ಲಿರುತ್ತವೆ; ಆಕಾರದಲ್ಲಿ; ಹೂಗಳು ಏಕ ಲಿಂಗಿಗಳು.
ಕಾಯಿ / ಬೀಜ : ಸೈಕೋನಿಯ (ಸಂಯುಕ್ತ ಫಲ) ಗೋಳಾಕಾರದಲ್ಲಿದ್ದು ಅಂದಾಜು 0.5 ಸೆಂ.ಮೀ. ಅಡ್ಡಗಲತೆಯನ್ನು ಹೊಂದಿದ್ದು ತೊಟ್ಟುರಹಿತವಾಗಿರುತ್ತವೆ ಮತ್ತು ಹಸಿರು ಬಣ್ಣ ಹೊಂದಿರುತ್ತವೆ;ಅಖೀನುಗಳು ನಯವಾಗಿರುತ್ತವೆ.

ಜೀವಪರಿಸ್ಥಿತಿ :

1100 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ಅರೆನಿತ್ಯ ಹರಿದ್ವರ್ಣ ಕಾಡುಗಳಿಂದ ಎಲೆಯುದುರು ಕಾಡುಗಳಲ್ಲಿ ಸಾಮಾನ್ಯವಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ ಮತ್ತು ಶ್ರೀಲಂಕಾ;ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ಗ್ರಂಥ ಸೂಚಿ :

Burm.f., Fl. India 227.1768;Gamble, Fl. Madras 3:1362.1998(rep.ed.); Sasidharan, Biodiversity documentation for Kerala- Flowering Plants, part 6:441.2004.

Top of the Page