ಫೈಕಸ್ ಹಿಸ್ಪಿಡ L.f. - ಮೊರೇಸಿ

ಪರ್ಯಾಯ ನಾಮ : ಪೈಕಸ್ ಆಪೋಸಿಟಿಪೂಲಿಯ Roxb.

Vernacular names : Tamil: ಎರಮನಕ್ಕು;ಕಾಟ್ಟತ್ತಿ;ಪರಕಂ;ತೊಂಡಿತೇರಕಂ;ಪವಕೋಮ್;ಪೇಯ್ ಅತ್ತಿ;ಪೆರಿಮ್ ತೇರಗಂ;ಪೇಯಟ್ಟಿ ಪೆರಕ;ವಳ್ಳಿತೇರಗಂ.Malayalam: ಕಾಡತ್ತಿ;ಪಾರೆಮರ.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ. ಎತ್ತರದವರೆಗಿನ ಪೊದೆಗಳು ಅಥವಾ ಮಧ್ಯಮ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ಸೂಕ್ಷ್ಮ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ; ಕಚ್ಚು ಮಾಡಿದ ಜಾಗ ನಸುಗೆಂಪಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಟೊಳ್ಳಾಗಿರುವ ಅಂತರ ಗಿಣ್ಣನ್ನು ಹೊಂದಿರುತ್ತವೆ ಹಾಗೂ ಕಂದು ಅಥವಾ ಬೂದು ಬಣ್ಣದ ಬಿರುಗೂದಲುಗಳಿಂದ ದಟ್ಟವಾಗಿ ಆವೃತಗೊಂಡಿರುತ್ತವೆ ಮತ್ತು ಸೂಕ್ಷ್ಮ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ.
ಜಿನುಗು ದ್ರವ : ಜಿನುಗು ದ್ರವ ಕೆನೆ ಬಿಳಿಯ ಬಣ್ಣ ಹೊಂದಿದ್ದು ವಿಫುಲವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು 2.5 X 1 ಸೆಂ.ಮೀ. ಉದ್ದ ಹೊಂದಿದ್ದು ವಲಯಾಕಾರದ ಗುರುತುಗಳನ್ನುಳಿಸಿ ಉದುರಿ ಹೋಗುತ್ತವೆ;ತೊಟ್ಟುಗಳು 1 – 10 ಸೆಂ.ಮೀ. ಉದ್ದ ಹೊಂದಿದ್ದು ಕಾಲುವೆಗೆರೆ ಸಮೇತವಾಗಿರುತ್ತವೆ ಮತ್ತು ಬಿರುಗೂದಲುಗಳಿಂದ ಆವೃತವಾಗಿರುತ್ತವೆ;ಪತ್ರಗಳು 7– 35 X 3 – 16 ಸೆಂ.ಮೀ. (ಸಸಿಗಳಲ್ಲಿ 40 X18 ಸೆಂ.ಮೀ.)ಗಾತ್ರವಿದ್ದು ಅಂಡವೃತ್ತ- ಚತುರಸ್ರ,ಸಂಕುಚಿತ ಅಂಡ,ಸಂಕುಚಿತ ಬುಗುರಿಯ ಆಕಾರ ಹೊಂದಿದ್ದು, ಬಾಲರೂಪಿ - ಕ್ರಮೇಣ ಚೂಪಾಗುವ ತುದಿ, ದುಂಡಾದ ಅಥವಾ ಉಪ-ಹೃದಯಾಕಾರದ ಅಥವಾ ಛಿನ್ನಾಗ್ರ - ಉಪ-ಹೃದಯಾಕಾರದ ಬುಡ, ನಯವಾದ ಅಥವಾ ದಂತಿತವಾದ ಕೆಲವು ವೇಳೆ ಅನಿಯತವಾಗಿ ದಂತಿತಗೊಂಡ ಅಂಚು ಹೊಂದಿರುತ್ತವೆ, ಪತ್ರಗಳ ಎರಡೂ ಬದಿಗಳು ಒರಟು ರೋಮಗಳಿಂದ ಕೂಡಿರುತ್ತವೆ; ಮಧ್ಯ ನಾಳ ಮೇಲ್ಭಾಗದಲ್ಲಿ ಕೊಂಚ ಮೇಲೆದ್ದಿರುತ್ತದೆ ಪತ್ರಗಳ ಬುಡದಲ್ಲಿ 3 ಆಧಾರ ನಾಳಗಳಿರುತ್ತವೆ; ; ಎರಡನೇ ದರ್ಜೆಯ ನಾಳಗಳು 4- 9 ಜೋಡಿಗಳಿದ್ದು ಸಾಮಾನ್ಯವಾಗಿ ಕವಲುಗೊಂಡಿರುತ್ತವೆ ಮತ್ತು ಆರೋಹಣ ಮಾದರಿಯಲ್ಲಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲ ಬಂಧ ನಾಳ ವಿನ್ಯಾಸದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಸೈಕೋನಿಯ ರೀತಿಯವುಗಳಾಗಿದ್ದು ಮುಖ್ಯ ಕಾಂಡ,ಹಳೆಯ ಕೊಂಬೆಗಳಲ್ಲಿನ ಗುಬುಟುಗಳ ಮೇಲಿನ ಗುಛ್ಛಗಳಲ್ಲಿರುತ್ತವೆ ಮತ್ತು ಕೆಲವು ವೇಳೆ ತೂಗಾಡುವ ಎಲೆರಹಿತ ಕೊಂಬೆಗಳ ಮೇಲಿರುತ್ತವೆ;ಹೂಗಳು ಏಕ ಲಿಂಗಿಗಳು.
ಕಾಯಿ / ಬೀಜ : ಸೈಕೋನಿಯ (ಸಂಯುಕ್ತ ಫಲ) ಗೋಳಾಕಾರದಲ್ಲಿದ್ದು 2.5 ಸೆಂ.ಮೀ.ವರೆಗಿನ ಅಡ್ಡಗಲತೆಯನ್ನು ಹೊಂದಿರುತ್ತದೆ.

ಜೀವಪರಿಸ್ಥಿತಿ :

1200 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ಭಗ್ನಗೊಂಡ ನಿತ್ಯ ಹರಿದ್ವರ್ಣ ದಿಂದ ಅರೆ ನಿತ್ಯ ಹರಿದ್ವರ್ಣವರೆಗಿನ ಕಾಡುಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಇಂಡೋಮಲೇಸಿಯದಿಂದ ಆಸ್ಟ್ರೇಲಿಯ;ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ಗ್ರಂಥ ಸೂಚಿ :

Suppl. Pl. 442. 1781;Gamble, Fl. Madras 3:1367.1998(rep.ed.); Sasidharan, Biodiversity documentation for Kerala- Flowering Plants, part 6:440.2004.

Top of the Page