ಇಯೋನಿಮಸ್ ಕ್ರೆನುಲೇಟಸ್ Wall. ex Wt. & Arn. - ಸೆಲಾಸ್ಟ್ರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 7 ಮೀ ಎತ್ತರದವರೆಗೆ ಬೆಳೆಯುವ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು ಕಚ್ಚು ಮಾಡಿದ ಜಾಗದಲ್ಲಿ ಬಿಳಿಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಅಪರೂಪವಾಗಿ ಸುತ್ತುಜೋಡನಾ ವ್ಯವಸ್ಥೆಯಲ್ಲಿ ಮೂರು ಎಲೆಗಳು ಇರುವಂತಹ ಮಾದರಿಯ ಲ್ಲಿರುತ್ತವೆ; ಕಾವಿನೆಲೆಗಳು ಸೂಕ್ಷ್ಮ ಗಾತ್ರದವು;ಎಲೆತೊಟ್ಟುಗಳು ಉದ್ದ0.3 ರಿಂದ 0.5 ಸೆಂ.ಮೀ ಗಾತ್ರ ಹೊಂದಿದ್ದು, ,ರೋಮರಹಿತವಾಗಿದ್ದು ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತವೆ; ಪತ್ರಗಳು 3- 7 X 1.4 -3 ಸೆಂ.ಮೀಗಾತ್ರವಿದ್ದು,ಅಂಡವೃತ್ತಾಕೃತಿ ಅಥವಾ ಸ್ವಲ್ಪಮಟ್ಟಿಗೆ ವಿಶಾಲವಾದ ಅಂಡವೃತ್ತಾಕೃತಿ ಹೊಂದಿದ್ದು, ಚೂಪಾಲ್ಲದುದರಿಂದ ಕ್ರಮೇಣ ಚೂಪಾಗುವ ಮಾದರಿಯ ತುದಿ ಹಾಗೂ ಚೂಪಾದ ಬುಡವನ್ನು ಹೊಂದಿರುತ್ತವೆ, ಪತ್ರದ ಅಂಚು ತುದಿಯ ಕಡೆಗೆ ಗರಗಸ ದಂತಿತ/ ಸೂಕ್ಷ್ಮ ದುಂಡೇಣಿನ ದಂತಗಳನ್ನು ಹೊಂದಿರುತ್ತದೆ ಹಾಗೂ ಕೆಲವು ವೇಳೆ ನಯವಾಗಿಯೂ ಇರುತ್ತದೆ,;ಮಧ್ಯನಾಳ ತೆಳುವಾಗಿದ್ದು ಮೇಲ್ಭಾಗದಲ್ಲಿ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು ಪತ್ರದ ಮೇಲ್ಭಾಗದಲ್ಲಿ ಕಾಣುವಂತಿದ್ದು ತಳಭಾಗದಲ್ಲಿ ಅಸ್ಪಷ್ಟವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ 3 ರಿಂದ 7 ಹೂಗಳುಳ್ಳ ಅಕ್ಷಾಕಂಕುಳಿನಲ್ಲಿರುವ ಮಧ್ಯಾರಂಭಿ ಮಾದರಿಯಲ್ಲಿರುತ್ತದೆ; ಹೂಗಳು ಕೆಂಪು ಬಣ್ಣದವು.
ಕಾಯಿ /ಬೀಜ : ಸಂಪುಟ ಫಲಗಳು ತಲೆಕೆಳಗಾದ ಹೃದಯಾಕಾರದಲ್ಲಿದ್ದು ಐದುಕೋನಗಳ ಸಮೇತವಿದ್ದು ಪ್ರತಿ ಹಾಲೆಯಲ್ಲಿ ಅರುಣ ವರ್ಣದ ಒಂದರಿಂದ ಎರಡು ಬೀಜಗಳನ್ನು ಹೊಂದಿರುತ್ತವೆ .

ಜೀವಪರಿಸ್ಥಿತಿ :

ಒಳಛಾವಣಿಯ ಮರಗಳಾಗಿ 900 ರಿಂದ 2400 ಮೀ ವರೆಗಿನ. ಮಧ್ಯಮ ಹಾಗೂ ಅತಿಎತ್ತರದ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತ- ದಕ್ಷಿಣ ಸಹ್ಯಾದ್ರಿ ಹಾಗೂ ನೀಲಗಿರಿಯಲ್ಲಿ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Wight & Arnot, Prod.161.1834; Gamble, Fl. Madras 1:203. 1997(re. ed..); Sasidharan, Biodiversity documentation for Kerala- Flowering Plants, part 6:96.2004.

Top of the Page