ಯೂಜೀನಿಯ ಟೊಡ್ಡೇಲಿಯಾಯ್ಡಿಸ್ Wt. - ಮಿರ್ಟೇಸಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣ ಹೊಂದಿದ್ದು ಅನಿಯತವಾಗಿ ಚಕ್ಕೆಯೇಳುತ್ತವೆ;ಕಚ್ಚು ಮಾಡಿದ ಜಾಗ ಕೆಂಪು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಉಪ-ದುಂಡಾಗಿದ್ದು,ತೆಳುವಾಗಿರುತ್ತವೆ ಮತ್ತು ರೋಮರಹಿತ -ವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ ; ಎಲೆತೊಟ್ಟುಗಳು ಅಂದಾಜು 0.3 ಸೆಂ.ಮೀ.ಉದ್ದವಿದ್ದು ,ಕಾಲುವೆ ಗೆರೆಯನ್ನು ಹೊಂದಿರುತ್ತವೆ ಮತ್ತು ರೋಮರಹಿತವಾಗಿರುತ್ತದೆ; ಪತ್ರಗಳು 6-8.5 X 2-3 ಸೆಂ.ಮೀ. ಗಾತ್ರ, ಭರ್ಜಿಯ ಆಕಾರ,ಬಾಲರೂಪಿ ತುದಿ,ಒಳಬಾಗಿದ ಬುಡ,ನಯವಾದ ಅಂಚು, ಪ್ರಕಾಶ ಭೇಧ್ಯ ಪಾರದರ್ಶಕವಾದ ಚುಕ್ಕೆಗಳಿಂದ ಕೂಡಿದ್ದು ರೋಮರಹಿತವಾಗಿರುತ್ತವೆ ಮತ್ತು ತಳಬಾಗದಲ್ಲಿ ತೆಳು ಬಣ್ಣ ಹೊಂದಿರುತ್ತವೆ;ಮಧ್ಯನಾಳ ಕೊಂಚವಾಗಿ ಕಾಲುವೆ ಗೆರೆಯನ್ನು ಹೊಂದಿರುತ್ತದೆ;ಅಂತರ ಅಂಚಿನ ನಾಳಗಳು ಇರುತ್ತವೆ;ಎರಡನೇ ದರ್ಜೆಯ ನಾಳಗಳು ಅಂದಾಜು 12 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳ ಕವಲುಗಳು ಎಲೆಯ ಅಕ್ಷದ ಕಡೆಗಿರುತ್ತವೆ. ಪತ್ರದ ಬುಡದಲ್ಲಿ 5-7 ನಾಳಗಳು ಇರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಅಥವಾ ಹೊರಅಕ್ಷಸ್ಥದಲ್ಲಿನ ಕವಲೊಡೆದ ಮಧ್ಯಾರಂಭಿ ಮಾದರಿಯವುಗಳಾಗಿರುತ್ತವೆ.
ಕಾಯಿ / ಬೀಜ : ಫಲಗಳು ಬೆರ್ರಿ ಮಾದರಿಯವು; ಬೀಜ ಒಂದು.

ಜೀವಪರಿಸ್ಥಿತಿ :

ಹೊಳೆಗಳ ಅಂಚಿನಲ್ಲಿನ ಮರಗಳು.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಉತ್ತರ ಮಲೆನಾಡಿನ ಬೆಳಗಾವಿ ಪ್ರದೇಶದಲ್ಲಿ ಕಂಡು ಬರುತ್ತವೆ( ಕುಂಬಾರವಾಡ ಮತ್ತು ಕ್ಯಾಸೆಲ್ ರಾಕ್ ನಿಂದ ಈ ಪ್ರಬೇದವನ್ನು ದಾಖಲಿಸಲಾಗಿದೆ).

ಗ್ರಂಥ ಸೂಚಿ :

Wight, Ill.. v. 2.p.16;Cooke, Fl. Pres. Bombay 1: 489.1903.

Top of the Page