ಎರಿತ್ರೋಸೈಲಾನ್ ಒಬ್ಟ್ಯೂಸಿಫೋಲಿಯಮ್ (Wt.) Walp. - ಎರಿತ್ರೋಸೈಲೇಸಿ

Synonym : ಸೆತಿಯ ಲ್ಯಾನ್ಸಿಯೋಲೇಟ Wt. var. ಒಬ್ಟ್ಯೂಸಿಫೋಲಿಯ Wt.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ಎತ್ತರದವರೆಗೆ ಬೆಳೆಯುವ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದುಬಣ್ಣದಲ್ಲಿದ್ದು ತೆಳು ಹಾಗೂ ಚಪ್ಪಟೆಯಾಗಿರುತ್ತವೆ.
ಕಾಂಡ ಮತ್ತು ತೊಗಟೆ : ತೊಗಟೆ ಬೂದುಬಣ್ಣದಲ್ಲಿದ್ದು ತೆಳು ಹಾಗೂ ಚಪ್ಪಟೆಯಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ಕಾವಿನೆಲೆಗಳು0.3 ಸೆಂ. ಮೀ. ಉದ್ದವಿದ್ದು ಜೋಡಿಯಾಗಿರುತ್ತವೆ ಹಾಗೂ ಭರ್ಜಿಯ ಆಕಾರದಲ್ಲಿದ್ದು, ಉದುರಿಹೋಗುವಂತವು, ಉದುರಿದ ಜಾಗದಲ್ಲಿ ಗುರುತುಗಳನ್ನು ಶೇಷವಾಗಿರಿಸುತ್ತವೆ; ತೊಟ್ಟುಗಳು 0. 2 - 0.4 ಸೆಂ.ಮೀ.ವರೆಗಿನ ಉದ್ದಹೊಂದಿದ್ದು ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತವೆ; ಪತ್ರಗಳು 4 – 8 X 1.5 – 3 ಸೆಂ ಮೀ. ಗಾತ್ರ, ಅಂಡವೃತ್ತ ಮಾದರಿಯ ಆಕಾರ,ಚೂಪಲ್ಲದುದರಿಂದ ಮೊಂಡಾಗ್ರವುಳ್ಳ ,ಕೊಂಚ ಕ್ರಮೇಣ ಚೂಪಾಗುವ ತುದಿ, ಚೂಪಾದ ಬುಡ,ನಯವಾದ ಅಂಚು,ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ ಹಾಗೂ ತಳಭಾಗದಲ್ಲಿ ಮಾಸಲು ಬೂದು ಬಣ್ಣ ಹೊಂದಿರುತ್ತವೆ; ಮಧ್ಯ ನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ; ಎರಡನೇ ದರ್ಜೆಯ ನಾಳಗಳು ಮಸುಕಾಗಿ ಕಾಣುವಂತಹವು; ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ / ಹೂಗಳು : ಹೂಗಳು ಒಂಟಿಯಾಗಿದ್ದು ಅಕ್ಷಾಕಂಕುಳಿನಲ್ಲಿರುತ್ತವೆ;ಪುಷ್ಪದ ದಳಗಳು ಹಳದಿಯಿಂದ ಬಿಳಿವರೆಗಿನ ಬಣ್ಣಹೊಂದಿರುತ್ತವೆ;ಪರಾಗಾಶಯಗಳುಹೊರಚಾಚಿಕೊಂಡಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಒಂದು ಬೀಜವನ್ನೊಳಗೊಂಡಿದ್ದು ಸಂಕುಚಿತ ಅಂಡಾಕಾರದಲ್ಲಿರುತ್ತವೆ.

ಜೀವಪರಿಸ್ಥಿತಿ :

1800 ಮೀ. ಎತ್ತರವರೆಗಿನ ಒಣ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿ ಮರಗಳಾಗಿ ಬೆಳೆಯುವ ಈ ಪ್ರಭೇದ ಅಪರೂಪವಾಗಿ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟ ಮತ್ತು ಶ್ರೀಲಂಕಾ: ಪಶ್ಚಿಮ ಘಟ್ಟದಲ್ಲಿ ಸಾಮಾನ್ಯವಾಗಿ ದಕ್ಷಿಣ ಸಹ್ಯಾದ್ರಿಯ ಬೆಟ್ಟದ ಗಾಳಿ-ಮರೆಯ ದಿಕ್ಕಿನಲ್ಲಿಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Bull. Inst. Bot. Buitenzorg 22: 54. 1905; Gamble, Fl. Madras 1: 127. 1997 (re. ed); Sasidharan, Biodiversity documentation for Kerala- Flowering Plants, part 6: 66. 2004.

Top of the Page