ಡೈಸೋಜೈಲಮ್ ಮಲಬಾರಿಕಂ Bedd. ex Hiern - ಮೀಲಿಯೇಸಿ

:

Vernacular names : Tamil: ಅಕಿಲ್; ಕರಕಿಲ್; ಪೂವಿಲ್ ಅಕಿಲ್

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ. ಎತ್ತರದವರೆಗೆ ಬೆಳೆಯುವ ಹಾಗೂ ಸ್ಪಷ್ಟವಾದ ಬುಡವುಳ್ಳ ದೊಡ್ಡ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ದೊಡ್ಡ ಗಾತ್ರದ ಬೆಂಡು ರೀತಿಯ ವಾಯು ವಿನಿಮಯ ರಂಧ್ರಗಳಿಂದ ದಟ್ಟವಾಗಿ ಆವರಿಸಿರುತ್ತದೆ ಹಾಗೂ;ಕಚ್ಚು ಮಾಡಿದ ಜಾಗ ಹಳದಿ ಮತ್ತು ಬಿಳಿ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಕೋನಯುಕ್ತವಾಗಿರುತ್ತವೆ ಮತ್ತು ಸೂಕ್ಷ್ಮವಾದ ರೋಮಗಳಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ, ಸಮಗರಿ ರೂಪಿಗಳಾಗಿದ್ದು 30(- 40 )ಸೆಂ.ಮೀ.ವರೆಗಿನ ಉದ್ದವಿರುತ್ತವೆ, ಜೋಡನೆಯಲ್ಲಿ ಪರ್ಯಾಯ ಮತ್ತು ಸುತ್ತು ವ್ಯವಸ್ಥೆ ಮಾದರಿಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ ಮತ್ತು ಉಬ್ಬಿದ ಎಲೆ ಬುಡವನ್ನು ಹೊಂದಿರುತ್ತವೆ; ನಡುಕಾಂಡ 17 ರಿಂದ 20 ಸೆಂ.ಮೀ. ಉದ್ದ ವಿದ್ದು ಕೋನಯುಕ್ತವಾಗಿರುತ್ತದೆ; ಕಿರುತೊಟ್ಟುಗಳು 0.5-0.9 ಸೆಂ.ಮೀ. ಉದ್ದವಿರುತ್ತವೆ;ಕಿರುಪತ್ರಗಳು 4 - 5 ಜೋಡಿಗಳಿದ್ದು ಪರ್ಯಾಯ ಅಥವಾ ಉಪ-ಅಭಿಮುಖಿ ರೀತಿಯಲ್ಲಿ ಜೋಡಿತಗೊಂಡಿರುತ್ತವೆ ಮತ್ತು 9 - 22 X 4 - 7 ಸೆಂ. ಮೀ. ಗಾತ್ರ,ಅಂಡವೃತ್ತ - ಈಟಿಯ ಆಕಾರ, ಕ್ರಮೇಣ ಚೂಪಾಗುವ ತುದಿ,ಅಸಮವಾದ ಬುಡ,ನಯವಾದ ಅಂಚು, ಚರ್ಮವನ್ನೋಲುವ ಮೇಲ್ಮೈ ಹೊಂದಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 12 ರಿಂದ 20 ಜೋಡಿಗಳಿದ್ದು ದೃಢವಾಗಿರುತ್ತವೆ ಹಾಗೂ ರೋಮಸಹಿತವಾದ ಅಕ್ಷಾಕಂಕುಳಿನಲ್ಲಿ ಸಹಸಜೀವಿ ಗೂಡುಗಳ ಸಮೇತವಿರುತ್ತದೆ;ಮೂರನೇ ದರ್ಜೆಯ ಅಸ್ಪಷ್ಟವಾಗಿ ಗೋಚರಿಸುವಂತಹವು ಮತ್ತು ಜಾಲಬಂಧ ನಾಳವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾಭಿಸರ ಮಾದರಿಯಲ್ಲಿದ್ದು ಎಲೆಗಳಿಗಿಂತ ಗಿಡ್ಡವಾಗಿರುತ್ತವೆ;ಹೂಗಳು ಹಸಿರು ಮಿಶ್ರಿತ ಹಳದಿ ಬಣ್ಣ ಹೊಂದಿದ್ದು ಸುವಾಸನಾಯುಕ್ತವಾಗಿರುತ್ತವೆ.
ಕಾಯಿ / ಬೀಜ : ಸಂಪುಟ ಫಲ ಪೇರು ಹಣ್ಣಿನ (ತೊಟ್ಟಿನ ಕಡೆಗೆ ಮೊನಚಾಗುತ್ತಾ ಹೋಗುವ ಆಕಾರ)ಆಕಾರದ ಹೊಂದಿದ್ದು ಗುಬುಟುಗಳ ಸಮೇತವಿದ್ದು 7.6 ಸೆಂ.ಮೀ. ಉದ್ದವಿದ್ದು ಕಳೆತಾಗ ಹಳದಿ ಬಣ್ಣದಲ್ಲಿರುತ್ತದೆ ಮತ್ತು 4 ಉದ್ದನೆಯ ಉತ್ತುಗೆರೆಗಳನ್ನು ಹೊಂದಿರುತ್ತದೆ; ಬೀಜಗಳು 3 ರಿಂದ 4 ಇದ್ದು ಕೆಂಪು ಮಿಶ್ರಿತ ಕಂದು ಬಣ್ಣ ಹೊಂದಿದ್ದು ಮೂರು ಕೋನಗಳ ಸಮೇತವಾಗಿರುತ್ತದೆ.

ಜೀವಪರಿಸ್ಥಿತಿ :

200 ಮತ್ತು 1200 ಮೀ. ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಮತ್ತು ಅರೆನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಮರಗಳಾಗಿ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟದ ದಕ್ಷಿಣ ಭಾಗಗಳಿಗೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Hooker, Fl. Brit. India 1:548.1875;Gamble, Fl. Madras178.1997(rep.ed.); Sasidharan, Biodiversity documentation for Kerala- Flowering Plants, part 6:89.2004.

Top of the Page