English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
ಪ್ರಕೃತಿ : | 30 ಮೀ. ಎತ್ತರದವರೆಗೆ ಬೆಳೆಯುವ ದೊಡ್ಡ ಗಾತ್ರದ ಮರಗಳು. |
ಕಾಂಡ ಮತ್ತು ತೊಗಟೆ : | ತೊಗಟೆ ತೆಳು ಕಂದು ಬಣ್ಣದಲ್ಲಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಹಳದಿ ಬಣ್ಣದಲ್ಲಿರುತ್ತದೆ. |
ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ಉಪ-ದುಂಡಾಗಿರುತ್ತವೆ ಮತ್ತು ಸೂಕ್ಷ್ಮವಾದ ರೋಮಗಳಿಂದ ಕೂಡಿರುತ್ತವೆ. |
ಎಲೆಗಳು : | ಎಲೆಗಳು ಸಂಯುಕ್ತ, ಅಸಮ ಗರಿ ರೂಪಿಗಳಾಗಿದ್ದು 18(-22) ಸೆಂ.ಮೀ.ವರೆಗಿನ ಉದ್ದವಿರುತ್ತವೆ, ಜೋಡನೆಯಲ್ಲಿ ಪರ್ಯಾಯ ಮತ್ತು ಸುತ್ತು ವ್ಯವಸ್ಥೆ ಮಾದರಿಯಲ್ಲಿದ್ದು ಉಬ್ಬಿದ ಎಲೆ ಬುಡವನ್ನು ಹೊಂದಿರುತ್ತವೆ; ನಡುಕಾಂಡ 12 ಸೆಂ.ಮೀ. ಉದ್ದ ವಿದ್ದು ತ್ರಿಕೋನಯುಕ್ತವಾಗಿರುತ್ತದೆ; ಕಿರು ತೊಟ್ಟುಗಳು ಅಂದಾಜು 0.4-1 ಸೆಂ.ಮೀ. ಉದ್ದವಿರುತ್ತವೆ;ಕಿರುಪತ್ರಗಳು 3-4 ಜೋಡಿಗಳಿದ್ದು ಉಪ-ಅಭಿಮುಖಿ ಅಥವಾ ಪರ್ಯಾಯ ರೀತಿಯಲ್ಲಿ ಜೋಡಿತಗೊಂಡಿರುತ್ತವೆ ಮತ್ತು 7 -15 X 3- 6 ಸೆಂ. ಮೀ. ಗಾತ್ರ,ಸಂಕುಚಿತ -ಚತುರಸ್ರದ ಆಕಾರ, ಕ್ರಮೇಣ ಚೂಪಾಗುವ ತುದಿ,ಅಸಮವಾದ ಮತ್ತು ಒಳಬಾಗಿದ ಬುಡ,ನಯವಾದ ಅಂಚು,ತೆಳುವಾದ ಚರ್ಮದ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 8 ರಿಂದ 13 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ. |
ಪುಷ್ಪಮಂಜರಿ / ಹೂಗಳು : | ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿರುವ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯಲ್ಲಿರುತ್ತವೆ;ಹೂಗಳು ಬಿಳಿ ಬಣ್ಣದವು. |
ಕಾಯಿ / ಬೀಜ : | ಸಂಪುಟ ಫಲ ಬುಗುರಿಯಾಕಾರದಲ್ಲಿದ್ದು5.5 X4. 5 ಸೆಂ.ಮೀ. ಗಾತ್ರವಿದ್ದು ಕಳಿತಾಗ ಕೆಂಪು ಬಣ್ಣದಲ್ಲಿರುತ್ತದೆ; ಬೀಜಗಳು 4 ಇದ್ದು ಕಡು ಕೆನ್ನೀಲಿ ಬಣ್ಣ ಹೊಂದಿದ್ದು ಬಿಳಿ ಪತ್ರೆ ಸಮೇತವಾಗಿರುತ್ತದೆ. |