ಡ್ರೈಪೆಟೆಸ್ ಪೋರ್ಟೆರಿ (Gamble) Pax & Hoffm. - ಯೂಫೊರ್ಬಿಯೇಸಿ

Synonym : ಹೆಮಿಸೈಕ್ಲಿಯ ಪೋರ್ಟೆರಿ Gamble

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ದೊಡ್ಡ ಚಕ್ಕೆಗಳ ರೂಪದಲ್ಲಿ ಸುಲಿಯುವ ಮಾದರಿಯಲ್ಲಿರುತ್ತವೆ; ಕಚ್ಚು ಮಾಡಿದ ಜಾಗ ತೆಳು ಕಿತ್ತಳೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಕಂದು ಅಥವಾ ಬೂದು ಬಣ್ಣದಲ್ಲಿದ್ದು ದುಂಡಾಗಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬಸಾಲಿನಲ್ಲಿರುತ್ತವೆ;ಕಾವಿನೆಲೆಗಳು ಅಂಡವೃತ್ತದಿಂದ ಅಂಡಾಕಾರದವರೆಗಿನ ಕಾರದ್ದಲ್ಲಿದ್ದು 0.3 – 0.8 ಸೆಂಮೀ.ಉದುರಿ ಹೋಗುತ್ತವೆ; ಪತ್ರಗಳು 5 - 9 X 2 – 4 ಸೆಂ. ಮೀ. ಗಾತ್ರ, ಅಂಡವೃತ್ತ ದಿಂದ ಅಂಡಾಕಾರದವರೆಗಿನ ಆಕಾರ ಹೊಂದಿರುತ್ತವೆ; ಪತ್ರಗಳ ತುದಿ ಮೊಂಡಾಗ್ರವುಳ್ಳ , ಕ್ರಮೇಣವಾಗಿ ಚೂಪಾಗುವ ಮಾದರಿಯಲ್ಲಿದ್ದು ಬುಡ ಅಸಮವಾಗಿರುತ್ತದೆ. ಅಂಚು ನಯವಾಗಿರುತ್ತದೆ ;ಮೇಲ್ಮೈ ತೆಳು ತೊಗಲನ್ನೋಲುವ ಮಾದರಿಯಲ್ಲಿರುತ್ತದೆ ಮತ್ತು ರೋಮರಹಿತವಾಗಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 5-7 ಜೋಡಿಗಳಿದ್ದುರುತ್ತವೆ ಕೆಲವು ವೇಳೆ ಕೊನೇ ಪಕ್ಷ ತೀರಾ ತಳದಲ್ಲಿರುವ 1 ಅಥವಾ 2 ನಾಳಗಳ ಅಕ್ಷಾಕಂಕುಳಿನಲ್ಲಿಯಾದರೂ ರೋಮಗಳನ್ನುಳ್ಳ ಸಹಜೀವಿ ಗೂಡುಗಳನ್ನು ಹೊಂದಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲ ಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿರುತ್ತವೆ ಮತ್ತು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿದ್ದು ಅಕ್ಷಾಕಂಕುಳಿನಲ್ಲಿನ ಗುಚ್ಛಗಳಲ್ಲಿರುತ್ತವೆ .
ಕಾಯಿ /ಬೀಜ : ಡ್ರೂಪ್ ಫಲಗಳು ದಟ್ಟವಾದ ಕೆಂಗಂದು ಬಣ್ಣದ ಒರಟು ರೋಮಗಳಿಂದ ಕೂಡಿರುತ್ತವೆ ಮತ್ತು 2 ಬೀಜಗಳನ್ನು ಹೊಂದಿರುತ್ತವೆ.

ಜೀವಪರಿಸ್ಥಿತಿ :

ಒಣ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಒಳಛಾವಣಿ ಮರಗಳಾಗಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಬಹುತೇಕವಾಗಿ ವರುಶುನಾಡು ಬೆಟ್ಟ ಪ್ರದೇಶದಲ್ಲಿ ಕಂಡುಬರುತ್ತದೆ ಮತ್ತು ಅಪರೂಪವಾಗಿ ಅಗಸ್ತ್ಯಮಲೆ ಬೆಟ್ಟದ ಗಾಳಿಮರೆಯ ಪಕ್ಕದ ದಿಕ್ಕಿನಿಂದ ಪ್ರಭೇದವನ್ನು ದಾಖಲಿಸಲಾಗಿದೆ.

ಗ್ರಂಥ ಸೂಚಿ :

Engler,Pflazenr. 81.268.1922;Gamble, Fl.Madras 2:1300.1993 (rep.ed.)

Top of the Page