ಡೊಡೋನಿಯ ವಿಸ್ಕೋಸ (L.) Jacq. - ಸ್ಯಾಪಿಂಡೇಸಿ

:

Vernacular names : Tamil: ವಿರಲಿ,ಕ್ರಲಿ,ಉನ್ನತುರುವಿMalayalam: ಬಂದರೆ,ಅಂದರ ಬರಲು,ಅಂಗಾರಕ,ಬಂದರಿಕೆ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ 5 ಮೀ ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಮಿಶ್ರಿತ ಬೂದು ಸೀಳಿಕಾ ಮಾದರಿಯಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಕೋನಯುಕ್ತದಿಂದ ಉಪ-ದುಂಡಾದವರೆಗಿನ ಆಕಾರ ಹೊಂದಿದ್ದು ಸೂಕ್ಷ್ಮ ಹಗರು ಮೃದುತುಪ್ಪಳವನ್ನು ಹೊಂದಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ ಮತ್ತು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ತೊಟ್ಟುಗಳು ಅಂದಾಜು 0.2 ಸೆಂ.ಮೀ. ಉದ್ದವಿದ್ದು ದೃಢವಾಗಿದ್ದು ಉಬ್ಬಿದ ತಳಬಾಗದ ಸಮೇತವಿರುತ್ತವೆ,ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತವೆ;ಪತ್ರಗಳು 2.5 – 6.5 X 0.5-1.2 ಸೆಂ.ಮೀ. ಗಾತ್ರ, ಸಂಕುಚಿತ ಅಂಡವೃತ್ತದಿಂದ ಭರ್ಜಿ-ಬುಗುರಿವರೆಗಿನ ಮಾದರಿಯ ಆಕಾರ,ಕ್ರಮೇಣ ಚೂಪಾಗುವುದರಿಂದ ಅಗ್ರದಲ್ಲಿ ಮೊನಚು ಮುಳ್ಳನ್ನೊಳಗೊಂಡು ಚೂಪಾದವರೆಗಿನ ತುದಿ,ತಳಬಾಗಕ್ಕೆ ವಿಸ್ತರಿಸಿದ ಬುಡ,ನಯವಾದ ಮತ್ತು ಹಿಂಸುರುಳಿ -ಗೊಂಡ ಅಂಚು, ಹೊಳಪುಳ್ಳ ಮೇಲ್ಭಾಗ ಹೊಂದಿದ್ದು ರೋಮರಹಿತವಾಗಿರುತ್ತದೆ ಮತ್ತು ಅಂಟು ರಸಗ್ರಂಥಿಗಳ ಸಮೇತವಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 16 ಜೋಡಿಗಳಿರುತ್ತವೆ ಮತ್ತು ಬಹುಮಟ್ಟಿಗೆ ಸಮಾಂತರದಲ್ಲಿರುತ್ತವೆ;ಮೂರನೇ ದರ್ಜೆಯ ನಾಳಗಳು ಕಡಿಮೆ ಅಂತರ ಹೊಂದಿದ್ದು ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಪುನರಾವೃತ್ತಿಯಾಗಿ ಕವಲೊಡೆದ ಮಧ್ಯಾರಂಭಿ ಮಾದರಿಯಲ್ಲಿದ್ದು,7 ಸೆಂ.ಮೀ.ವರೆಗಿನ ಉದ್ದ ಹೊಂದಿರುತ್ತವೆ ಹಾಗೂ ತುದಿಯಲ್ಲಿ ಅಥವಾ ಅಕ್ಷಾಕಂಕುಳಿನ -ಲ್ಲಿರುತ್ತವೆ; ಹೂಗಳು ಸಣ್ಣ ಗಾತ್ರದಲ್ಲಿದ್ದು,ಸಂಕೀರ್ಣ ಲಿಂಗಳಾಗಿರುತ್ತವೆ;ತೊಟ್ಟುಗಳು 0.5 ಸೆಂ.ಮೀ ವರೆಗಿನ ಉದ್ದ ಹೊಂದಿರುತ್ತವೆ.
ಕಾಯಿ / ಬೀಜ : ಸಂಪುಟ ಫಲ ತೆಳುವಾದ ಪದರದ ರೀತಿಯಲ್ಲಿದ್ದು,ಸಂಕುಚಿತವಾಗಿದ್ದು 3-ರೆಕ್ಕೆಗಳ ಸಮೇತವಿರುತ್ತವೆ;ಬೀಜಗಳ ಸಂಖ್ಯೆ 1 ರಿಂದ 2 ಇದ್ದು, ಕಪ್ಪು ಬಣ್ಣ ದಲ್ಲಿರುತ್ತವೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ ಈ ಸಸ್ಯ ಒಣ ಕುರುಚಲು ಪ್ರದೇಶಗಳಲ್ಲಿ ಪೊದೆಯಾಗಿ ಬೆಳೆಯುತ್ತವೆ; ಆದರೆ 2400 ಮೀ. ಅತಿಎತ್ತರದರೆಗಿನ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲೂ ಈ ಪ್ರಭೇದ ಮರಗಳಾಗಿ ಬೆಳೆಯುತ್ತದೆ.

ವ್ಯಾಪನೆ :

ಪ್ರಪಂಚದ ಎಲ್ಲಾ ಭಾಗಗಳು;ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳು.

ಗ್ರಂಥ ಸೂಚಿ :

Jack. Enum. Syst. Pl. 19. 1790;Gamble, Fl. Madras 1: 253. 1997 (re. ed); Sasidharan, Biodiversity documentation for Kerala- Flowering Plants, part 6: 108. 2004; Saldanha, Fl. Karnataka 2: 193. 1996; Cooke, Fl. Bombay 1:269. 1903; Almeida, Fl. Maharashtra 1:277. 1996.

Top of the Page