ಡಯೋಸ್ಪೈರಾಸ್ ಸಿಲ್ವಾಟಿಕ Roxb. - ಎಬೆನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 35 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮಿಶ್ರಿತ ಕಂದು ಬಣ್ಣದಲ್ಲಿದ್ದು ನಯವಾಗಿರುತ್ತದೆ; ಕಚ್ಚು ಮಾಡಿದ ಜಾಗ ಕೆಂಪು ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳುವಾಗಿದ್ದು,ದುಂಡಾಗಿರುತ್ತವೆ. ಕಿರುಕೊಂಬೆಗಳು ಅಪ್ಪು-ರೋಮಗಳನ್ನು ಹೊರತು ಪಡಿಸಿದರೆ ಉಳಿದಂತೆ ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು 0.3 – .2 ಸೆಂ. ಮೀ.ಉದ್ದವಿದ್ದು ಪತ್ರದ ಮೇಲಭಾಗದಲ್ಲಿ ಚಪ್ಪಟೆಯಾಗಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ; ಪತ್ರಗಳು 6 – 15 X 3 – 6 ಸೆಂ.ಮೀ. ಗಾತ್ರ, ಅಂಡವೃತ್ತ ಮಾದರಿಯಿಂದ ಸಂಕುಚಿತ ಅಂಡವೃತ್ತ ಮಾದರಿವರೆಗಿನ ಆಕಾರ ಹೊಂದಿದ್ದು ತಿರುಚಿದ ಮತ್ತು ಕ್ರಮೇಣ ಚೂಪಾಗುವ ತುದಿ , ಚೂಪಾದ ಅಥವಾ ಸ್ವಲ್ಪ ಮಟ್ಟಿಗೆ ಒಳಬಾಗಿದ ಮಾದರಿಯ ಬುಡ,ಕಾಗದವನ್ನೋಲುವ ಅಥವಾ ಉಪ-ತೊಗಲ್ಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ ಮತ್ತು ಒಣಗಿದಾಗ ಕಪ್ಪಾಗಿರುತ್ತವೆ; ಮಧ್ಯನಾಳ ಚಪ್ಪಟೆಯಾಗಿ ಅಥವಾ ಸ್ವಲ್ಪಮಟ್ಟಿಗೆ ಅಚ್ಚೊತ್ತಿದಂತಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 7 ರಿಂದ 9 ತೆಳುವಾಗಿರುವ ಜೋಡಿಗಳಿರುತ್ತವೆ ; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸ ಹೊಂದಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ/ಹೂಗಳು : ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ ಅಥವಾ ಸಂಕೀರ್ಣ ಲಿಂಗಿಗಳಾಗಿರುತ್ತವೆ; ಗಂಡು ಹೂಗಳು ಹಸಿರು ಬಣ್ಣ ಹೊಂದಿದ್ದು ಎರಡು ಬದಿಯಲ್ಲಿ ಕವಲೊಡೆಯುವ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ; ಹೆಣ್ಣು ಹೂಗಳು ಒಂಟಿಯಾಗಿರುತ್ತವೆ ಅಥವಾ 3 ಹೂಗಳನ್ನುಳ್ಳ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ
ಕಾಯಿ /ಬೀಜ : ಬೆರ್ರಿಗಳು 2 ಸೆಂ.ಮೀ ವರೆಗಿನ ಅಡ್ಡಗಲದ ಗಾತ್ರ ಹೊಂದಿದ್ದುಗೋಳಾಕಾರದಲ್ಲಿದ್ದು ರೋಮರಹಿತವಾಗಿರುತ್ತವೆ; ಕಾಯಿಗಳ ಪುಷ್ಪಪಾತ್ರೆಯ ದಳಗಳು ಹಿಂಬಾಗಿರುತ್ತವೆ;ಬೀಜಗಳು 2 - 8

ಜೀವಪರಿಸ್ಥಿತಿ :

1400 ಮೀ.ವರೆಗಿನ ಎತ್ತರದ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಚಾವಣಿಯಲ್ಲಿ ಈ ಸಾಮಾನ್ಯವಾಗಿ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Roxb., Pl. Cor. T.47.1795;Gamble, Fl. Madras 2:773.1997 (rep.ed..) ;Sasidharan, Biodiversity documentation for Kerala-Flowering Plants,part 6.272..2004;Singh, Monograph on Indian Diospyros L.(Persimmon, Ebony)Ebenaceae 231. 2005; Saldanha, Fl.Karnataka 1:341.1996.

Top of the Page