ಡಯೋಸ್ಪೈರಾಸ್ ಪೆರೆಗ್ರೈನ (Gaertn.) Gurke - ಎಬೆನೇಸಿ

Synonym : ಡಯೋಸ್ಪೈರಾಸ್ ಮಲಬಾರಿಕ (Desr.) Kostel

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮಿಶ್ರಿತ ಕಪ್ಪು ಬಣ್ಣದಲ್ಲಿದ್ದು, ಚಕ್ಕೆ ರೂಪದಲ್ಲಿರುತ್ತದೆ; ಕಚ್ಚು ಮಾಡಿದ ಜಾಗ ಮಬ್ಬಾದ ಕೆಂಪು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ರೋಮರಹಿತವಾಗಿದ್ದು ಆಕಾರದಲ್ಲಿ ದುಂಡಾಗಿರುವುದರಿಂದ ಹಿಡಿದು ಸ್ವಲ್ಪ ಮಟ್ಟಿಗೆ ಕೋನಯುಕ್ತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು 1.5 ಸೆಂಮೀ.ವರೆಗಿನ ಉದ್ದವಿದ್ದು, ಕಾಲುವೆಗೆರೆ ಸಮೇತವಿದ್ದು ರೋಮರಹಿತವಾಗಿರುತ್ತವೆ; ಪತ್ರಗಳು 19 X 6.5 ಸೆಂ.ಮೀ. ಗಾತ್ರ, ಚತುರಸ್ರ- ಭರ್ಜಿಯ ಆಕಾರ ಹೊಂದಿದ್ದು, ಚೂಪಾದುದರಿಂದ ಹಿಡಿದು ಒಳಬಾಗಿದ ತುದಿ; ಚೂಪಾದುದರಿಂದ ಹಿಡಿದು ಚೂಪಲ್ಲದ ಬುಡ, ನಯವಾದ ಅಂಚು, ತೊಗಲವನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ;ಎಲೆಗಳ ಎರಡೂ ಬದಿಯಲ್ಲಿ ದೃಢವಾದ ಜಾಲಬಂಧ ವಿನ್ಯಾಸದ ನಾಳಗಳಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ ; ಎರಡನೇ ದರ್ಜೆಯ ನಾಳಗಳು ಅಂದಾಜು 8 ಜೋಡಿಗಳಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕ ಲಿಂಗಿಗಳಾಗಿರುತ್ತವೆ; ಗಂಡು ಹೂಗಳು ಅಕ್ಷಾಕಂಕುಳಿನಲ್ಲಿನ 3 ರಿಂದ 7 ಹೂಗಳನ್ನೊಳಗೊಂಡ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ; ಹೆಣ್ಣು ಹೂಗಳು ಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಗೋಳಾಕಾರದಲ್ಲಿದ್ದು 4 ಸೆಂ. ಮೀ. ಅಡ್ಡಗಲದಳತೆಯನ್ನು ಹೊಂದಿರುತ್ತವೆ ಹಾಗೂ ಕೆಂಪು ಮಖಮಲ್ಲಿನ ಸಮೇತವಿರುತ್ತವೆ; ಕಾಯಿಗಳ ಪುಷ್ಪಪಾತ್ರೆ ದೊಡ್ಡದ್ದಾಗಿದ್ದು ಹಿಂಚಾಚಿಕೊಂಡಿರುತ್ತದೆ; ಬೀಜಗಳು 4 ರಿಂದ 8 ಇದ್ದು ನಯವಾಗಿರುತ್ತವೆ;ಬೀಜಗಳ ತಿರುಳು ಜಿಗುಟಾಗಿರುತ್ತದೆ ಹಾಗೂ ಹೊರವಾತಾವರಣಕ್ಕೆ ಒಡ್ಡಿದಾಗ ಕಪ್ಪಾಗುತ್ತದೆ.

ಜೀವಪರಿಸ್ಥಿತಿ :

ನದಿಗಳ ಅಂಚಿನಲ್ಲಿ ಈ ಪ್ರಬೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಶಿಯ; ಪಶ್ಚಿಮ ಘಟ್ಟದ ಉದ್ದಗಲಕ್ಕೂ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Engl. & Prantl. , Nat. Planzenfam. 4: 164. T.87.1891;Gamble, Fl. Madras 2:777.1997(rep.ed.);Sasidharan, Biodiversity documentation for Kerala-Flowering Plants,part 6.271..2004;Singh, Monograph on Indian Diospyros L. (Persimmon, Ebony)Ebenaceae 193. 2005.

Top of the Page