ಡಯೋಸ್ಪೈರಾಸ್ ಪ್ಯಾನಿಕ್ಯುಲೇಟ Dalz. - ಎಬೆನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 16 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಪ್ಪು ಬಣ್ಣದಲ್ಲಿದ್ದು, ನಯವಾಗಿರುತ್ತದೆ; ಕಚ್ಚು ಮಾಡಿದ ಜಾಗ ಮಬ್ಬಾದ ಕಿತ್ತಳೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ಕಪ್ಪು ಮಸಿ ಮಾದರಿಯ ರೋಮಗಳಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು 0.5 -1.1 ಸೆಂಮೀ.ಉದ್ದವಿದ್ದು, ಚಪ್ಪಟೆಯಾಗಿದ್ದು ರೊಮರಹಿತವಾಗಿರುತ್ತವೆ; ಪತ್ರಗಳು 9 – 27 X 3.5 – 8 ಸೆಂ.ಮೀ. ಗಾತ್ರ, ಸಾಮಾನ್ಯವಾಗಿ ಸಂಕುಚಿತ ಅಂಡವೃತ್ತ- ಚತುರಸ್ರದಿಂದ ಭರ್ಜಿವರೆಗಿನ ಆಕಾರ ಹೊಂದಿದ್ದು, ಚೂಪಾದುದರಿಂದ ಹಿಡಿದು ಮೊಂಡಾದ ಅಗ್ರವುಳ್ಳ ಚೂಪಾದ ಅಥವಾ ಕ್ರಮೇಣ ಚೂಪಾಗುವ ತುದಿ ; ಚೂಪಾದುದರಿಂದ ದುಂಡಾಕಾರದ ಬುಡ, ನಯವಾದ ಅಂಚು, ತೊಗಲವನ್ನೋಲುವ ಮೇಲ್ಮೈ ಹೊಂದಿದ್ದು, ಪತ್ರದ ತಳಭಾಗದಲ್ಲಿ ಪ್ರಕಾಶ ಬೇಧ್ಯ ಮಚ್ಚೆಗಳಿರುತ್ತವೆ; ಎಲೆಗಳ ಎರಡೂ ಬದಿಯಲ್ಲಿ ಧೃಡವಾದ ಹಾಗೂ ಸನಿಹವಾದ ಜಾಲಬಂಧ ನಾಳಗಳಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ ;ಎರಡನೇ ದರ್ಜೆಯ ನಾಳಗಳು 6 - 9 ಜೋಡಿಗಳಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕ ಲಿಂಗಿಗಳಾಗಿರುತ್ತವೆ; ಗಂಡು ಹೂಗಳು ಅಕ್ಷಾಕಂಕುಳಿನಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ; ಹೆಣ್ಣು ಹೂಗಳು ಅಕ್ಷಾಕಂಕುಳಿನಲ್ಲಿ ಒಂಟಿಯಾಗಿ ಅಥವಾ 2 ರಿಂದ 3 ಹೂಗಳನ್ನೊಳಗೊಂಡ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ ;ಪುಷ್ಪಪಾತ್ರೆ ಕಪ್ಪು ಮಸಿಯ ತರಹದ ರೋಮಗಳಿಂದ ಕೂಡಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಅಂಡಾಕಾರದಲ್ಲಿದ್ದು ಎಳೆಯದಾಗಿದ್ದಾಗ ತುಕ್ಕು ಹಿಡಿದ ಮತ್ತು ಕಪ್ಪು ಮಸಿಯ ತರಹದ ರೋಮಗಳಿಂದ ಕೂಡಿರುತ್ತವೆ ನಂತರ ರೋಮರಹಿತವಾಗುತ್ತವೆ; ಪುಷ್ಪಪಾತ್ರೆ ವೃದ್ಧಿಸಿದ್ದು, ಎಲೆರೂಪಿಯಾಗಿದ್ದು ಮಡಚಿದ ದಳಗಳನ್ನು ಹೊಂದಿದ್ದು ಒಳಭಾಗದಲ್ಲಿ ಕಪ್ಪು ಮಸಿಯ ತರಹದ ರೋಮಗಳಿಂದ ಕೂಡಿರುತ್ತವೆ.;ಬೀಜಗಳು 4 ಇದ್ದು ನಯವಾಗಿರುತ್ತವೆ;

ಜೀವಪರಿಸ್ಥಿತಿ :

1200 ಮೀ.ವರೆಗಿನ ಎತ್ತರದ ಪ್ರದೇಶಗಳ ತೇವಾಂಶವುಳ್ಳ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಸಸ್ಯ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Hooker”s J.Bot.Kew Gard. Misc. 4:109.1852;;Gamble, Fl. Madras 2:775.1997(rep.ed.);Biodiversity ;Sasidharan, Biodiversity documentation for Kerala-Flowering Plants,part 6.272..2004;Singh, Monograph on Indian Diospyros L. (Persimmon, Ebony)Ebenaceae 189. 2005. Saldanha,Fl.Karnataka.1:340.1996

Top of the Page