ಡಯೋಸ್ಪೈರಾಸ್ ನೀಲಗಿರಿಕ Bedd. - ಎಬೆನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಪ್ಪು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ಕೆಂಗಂದು ಬಣ್ಣವುಳ್ಳ ಮೃದುತುಪ್ಪಳದಿಂದ ಕೂಡಿರುತ್ತವೆ.; ಅಗ್ರದಲ್ಲಿನ ಹಾಗು ಅಕ್ಷಾಕಂಕುಳಿನಲ್ಲಿನ ಕುಡಿಮೊಗ್ಗುಗಳು ದಟ್ಟವಾದ,ಕಿಲುಬು ಬಣ್ಣದ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು 0.6 -1.0 ಸೆಂಮೀ.ಉದ್ದವಿದ್ದು ಕಾಲುವೆಗೆರೆ ಸಮೇತವಿರುತ್ತವೆ ಹಾಗೂ ಬಲಿತಾಗ ರೊಮರಹಿತವಾಗಿರುತ್ತವೆ; ಪತ್ರಗಳು 6.5 – 18 X 2 – 4.5 ಸೆಂ.ಮೀ. ಗಾತ್ರ, ಸಾಧಾರಣವಾಗಿ ಸಂಕುಚಿತ ಅಂಡವೃತ್ತ ಕೆಲವು ವೇಳೆ ಬುಗುರಿ-ಭರ್ಜಿಯ ಆಕಾರ, ಮೊಂಡಾದ ಅಗ್ರವುಳ್ಳ ಚೂಪಾದ ಅಥವಾ ಕ್ರಮೇಣ ಚೂಪಾಗುವ ತುದಿ ; ಚೂಪಾದುದರಿಂದ ಒಳಬಾಗಿದ ಬುಡವನ್ನು ಹೊಂದಿರುತ್ತವೆ;ಪತ್ರದ ಅಂಚು ಕಡೇ ಪಕ್ಷ ಬುಡದ ಬಳಿಯಲ್ಲಾದರೂ ಹಿಂಸುರುಳಿಯಾಗಿರುತ್ತದೆ; ಮೇಲ್ಮೈ ತೊಗಲವನ್ನೋಲುವ ಮಾದರಿಯಲ್ಲಿರುತ್ತದೆ, ಪತ್ರಗಳು ಎಳೆಯದಾಗಿದ್ದಾಗ ಎರಡೂ ಬದಿ ತುಕ್ಕಿನ ಬಣ್ಣವುಳ್ಳ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ, ಬಲಿತ ನಂತರ ರೋಮರಹಿತವಾಗುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 6-9 ಜೋಡಿಗಳಿರುತ್ತವೆ ಹಾಗೂ ಆರೋಹಣ ಮಾದರಿಯಲ್ಲಿದ್ದು ಪ್ರಮುಖವಾಗಿರುದಿಲ್ಲ ; ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಹೂಗಳು ಏಕ ಲಿಂಗಿಗಳಾಗಿದ್ದು ಹಳದಿ ಮಿಶ್ರಿತ ಬಿಳಿ ಬಣ್ಣದವು; ಗಂಡು ಹೂಗಳು ಅಕ್ಷಾಕಂಕುಳಿನಲ್ಲಿನ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ; ಹೆಣ್ಣು ಹೂಗಳು ಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ದುಂಡಾಕಾರದಲ್ಲಿದ್ದು 2.5 ಸೆಂ.ಮೀ. ವ್ಯಾಸ ಹೊಂದಿರುತ್ತವೆ, ಕಾಯಿಗಳ ಪುಷ್ಪಪಾತ್ರೆ ಹಿಂಸುರುಳಿಯುಳ್ಳ ಅಂಚಿನ ಮೇತವಿರುತ್ತದೆ. ಹಾಗೂ ನಯವಾದ 8 ಬೀಜಗಳನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

800 - 1600 ಮೀ.ವರೆಗಿನ ಎತ್ತರದ ಪ್ರದೇಶಗಳ ತೇವಾಂಶವುಳ್ಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತ;ದಕ್ಷಿಣ ಸಹ್ಯಾದ್ರಿಯ ಪೆರಿಯಾರ್ ಪ್ರದೇಶದಿಂದ ಅಣ್ಣಾಮಲೆಯಲ್ಲಿ ಆಗಾಗ್ಗೆಯೂ ಮಧ್ಯ ಸಹ್ಯಾದ್ರಿಯ ಪಾಲಕ್ಕಾಡು ಬೆಟ್ಟಗಳು ಮತ್ತು ಕೊಡಗು ಪ್ರದೇಶಗಳಲ್ಲಿ ಅಪರೂಪವಾಗಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Bedd., Ic. Pl.Ind. or.7277. 136 1871;Gamble, Fl. Madras 2:775.1997(rep.ed.);Sasidharan, Biodiversity documentation for Kerala-Flowering Plants,part 6.271..2004;Singh, Monograph on Indian Diospyros L.(Persimmon, Ebony)Ebenaceae 181.2005.

Top of the Page