ಡಯೋಸ್ಪೈರಾಸ್ ಫೋಲಿಯೋಲೋಸ Wall. ex A.DC. - ಎಬೆನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣ ಹೊಂದಿದ್ದು, ಶಲ್ಕೆಗಳಿಂದ ಕೂಡಿರುತ್ತದೆ; ಕಚ್ಚು ಮಾಡಿದ ಜಾಗ ಕೆಂಪಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳು ಹಾಗೂ ದುಂಡಾಗಿದ್ದು,ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ;ಎಲೆ ತೊಟ್ಟುಗಳು 0.4-0.9 ಸೆಂ.ಮೀ ಉದ್ದವಿದ್ದು ಮೇಲ್ಭಾಗದಲ್ಲಿ ಕಾಲುವೆಗೆರೆಸಮೇತವಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ; ಪತ್ರಗಳು 4 – 12 X 1 – 2.7 ಸೆಂ.ಮೀ. ಗಾತ್ರ ಭರ್ಜಿಯ ಆಕಾರ,ಚೂಪಾದ ಅಥವಾ ಮೊಂಡಾದ ಅಗ್ರವುಳ್ಳ ಕ್ರಮೇಣ ಚೂಪಾಗುವ ತುದಿ ; ಚೂಪಾದುದರಿಂದ ಹಿಡಿದು ಒಳಬಾಗಿದ ಬುಡ,ನಯವಾದ ಅಂಚು ಹಾಗೂ ಉಪ-ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ; ಮೇಲ್ಭಾಗದಲ್ಲಿ ಮಧ್ಯನಾಳ ಚಪ್ಪಟೆಯಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು 8 ಜೋಡಿಗಳಿದ್ದು, ಕವಲೊಡೆದಿರುತ್ತವೆ ಹಾಗೂ ತುದಿಎಡೆಗೆ ಆರೋಹಣಗೊಳ್ಳುತ್ತವೆ; ಮೂರನೇ ದರ್ಜೆಯ ನಾಳಗಳು ನಿರ್ದಿಷ್ಟವಾಗಿ ಜಾಲಬಂಧ ನಾಳ ವಿನ್ಯಾಸದಲ್ಲಿ ರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕ ಲಿಂಗಿಗಳು; ಗಂಡು ಹೂಗಳು ಅಕ್ಷಾಕಂಕುಳಿನಲ್ಲಿನ ಅಕ್ಷದಿಂಡು ಸಹಿತವಾದ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ;ಹೆಣ್ಣು ಹೂಗಳು ದೊಡ್ಡ ಗಾತ್ರ ಹೊಂದಿದ್ದು ಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು 2 ಸೆಂ. ಮೀ.ವರೆಗಿನ ವ್ಯಾಸ ಹೊಂದಿದ್ದು ಗೋಳಾಕಾರದಲ್ಲಿದ್ದು ವೃದ್ಧಿಸಿದ, ಎಲೆ ರೂಪದ ದೃಢವಾಗಿ ನಿಲ್ಲುವ ಪುಷ್ಪಪಾತ್ರೆಯ ದಳಗಳ ಸಮೇತವಾಗಿರುತ್ತವೆ ಹಾಗೂ 4 ಬೀಜಗಳನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

300 ರಿಂದ 1000 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ಒಣ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಈ ಸಸ್ಯ ಕಂಡುಬರುತ್ತದೆ..

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ದಕ್ಷಿಣ ಸಹ್ಯಾದ್ರಿಯ ಅಗಸ್ತ್ಯಮಲೆ ಮತ್ತು ಪೆರಿಯಾರ್ ಬೆಟ್ಟದ ಗಾಳಿ ಮರೆಯ ದಿಕ್ಕಿನಲ್ಲಿ, ಮತ್ತು ವರುಶುನಾಡು ಬೆಟ್ಟಗಳಲ್ಲಿ ಬೆಳೆಯುತ್ತದೆ.

ಗ್ರಂಥ ಸೂಚಿ :

DC., Prodr. 8:234.1844;Singh, Monograph on Indian Diospyros L.(Persimmon, Ebony)Ebenaceae 107.2005; Sasidharan, Biodiversity documentation for Kerala-Flowering Plants,part 6.271.2004:Gamble, Fl. Madras 2:774.1997(rep.ed.)

Top of the Page