ಡೈಮೋಕಾರ್ಪಸ್ ಲಾಂಗಾನ್ Lour. - ಸ್ಯಾಪಿಂಡೇಸಿ

ಪರ್ಯಾಯ ನಾಮ : ನೆಫೀಲಿಯಮ್ ಲಾಂಗಾನ್ (Lam.) Camp.

Vernacular names : Tamil: ಚೆಂಪೂವನ,ಚೆಂಪುನ್ನ,ಮಲಂಪೂವತ್ತಿ,ಮಲಂಪೂವನ್ನ,ಮುಲೈ,ಪಸಕೊಟ್ಟ,ಪೋರಿಪುನMalayalam: ಕನಕೆಂಡೆಲ,ಕಂದಲ್ಲ,ಕೆಂದಾಳೆ ಮರ.ಕನ್ನಡದ ಪ್ರಾದೇಶಿಕ ಹೆಸರು: ದಿ ಲೋಂಗ್ಯಾನ್,ಲೋಂಗಯ್ಆನ್ ಟ್ರೀ,ಐ ಬಾಲ್ ಟ್ರೀ.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ ಎತ್ತರದವರೆಗಿನ ದೊಡ್ಡ ಗಾತ್ರದ,ಆನಿಕೆಯುಳ್ಳ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ಅನಿಯತವಾಗಿ ಚಕ್ಕೆಯೆದ್ದ ಮಾದರಿಯಲ್ಲಿರುತ್ತದೆ;ಒಳ ತೊಗಟೆ ಕೆನೆ ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾದ ಆಕಾರ ಹೊಂದಿದ್ದು ಬೆಂಡು ರಂಧ್ರಗಳ ಸಮೇತವಿರುತ್ತವೆ, ಎಲೆಯದಾಗಸೂಕ್ಷ್ಮದಾಗಿದ್ದಾಗ ನಕ್ಷತ್ರ ರೂಪದ ರೋಮಗಳನ್ನು ಹೊಂದಿರುತ್ತವೆ, ನಂತರ ರೋಮ ರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ ಹಾಗೂ ಅಸಮ ಗರಿ ರೂಪಿ ಮಾದರಿಯದಾಗಿರುತ್ತವೆ,ಕೆಲವು ವೇಳೆ ಸಮಗರಿ ರೂಪಿಗಳಾಗಿರುತ್ತವೆ, ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ ಹಾಗೂ 15 ರಿಂದ 40 ಸೆಂ.ಮೀ. ಉದ್ದವಿರುತ್ತವೆ; ಅಕ್ಷದಿಂಡು ದುಂಡಾಗಿದ್ದು ಉಬ್ಬಿದ ಬುಡದ ಸಮೇತವಿರುತ್ತದೆ; ಉಪತೊಟ್ಟುಗಳು ದೃಢವಾಗಿದ್ದು 0.2 ರಿಂದ 0.8 ಸೆಂ.ಮೀ. ಉದ್ದಹೊಂದಿದ್ದು ಕಾಲುವೆಗೆರೆಯ ಸಮೇತವಿರುತ್ತವೆ;ಉಪಪತ್ರಗಳು 4 ರಿಂದ 8(-10) ಜೋಡಿಗಳಿರುತ್ತವೆ ಮತ್ತು ಪರ್ಯಾಯ ರೀತಿಯಲ್ಲಿ ಜೋಡನೆಗೊಂಡಿದ್ದು,8-18.5(20.3) X 2.5-7 ಸೆಂ.ಮೀ. ಗಾತ್ರ,ಭರ್ಜಿ ಅಥವಾ ಸಂಕುಚಿತ ಅಂಡವೃತ್ತ –ಚತುರಸ್ರದ ಮಾದರಿಯ ಆಕಾರ, ಬರಬರುತ್ತಾ ಕ್ರಮೇಣ ಚೂಪಾಗುವ ಮೊಂಡಾಗ್ರವುಳ್ಳ ಅಥವಾ ಉಪಚೂಪಾದ, ಕೆಲವು ವೇಳೆ ಚೂಪಲ್ಲದ ತುದಿ, ದುಂಡಾಗಿರುವ ಮಾದರಿಯಿಂದ ಚೂಪಾಗಿರುವರೆಗಿನ, ಕೆಲವು ವೇಳೆ ಅಸಮ್ಮಿತಿಯಾದ ಬುಡ,ನಯವಾದ ಅಂಚು,ತೊಗಲನ್ನೋಲುವ ಮೇಲ್ಮೈ,ಮಾಸಲು ಬೂದು ಬಣ್ಣದ ತಳಭಾಗ ಹೊಂದಿದ್ದು ರೋಮರಹಿತವಾಗಿರುತ್ತದೆ;ಮಧ್ಯನಾಳ ಮೇಲ್ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು 10 ರಿಂದ 20 ಜೋಡಿಗಳಿದ್ದು ಹೆಚ್ಚೂಕಡಿಮೆ ನೇರವಾಗಿದ್ದು ಅಂಚಿನ ಬಳಿ ಬಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ತೆಳುವಾಗಿದ್ದು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಮತ್ತು ಅಕ್ಷಾಕಂಕುಳಿನಲ್ಲಿರುವ ಹೆಚ್ಚಾಗಿ, ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವು;ಹೂಗಳು ತೊಟ್ಟುರಹಿತ.
ಕಾಯಿ / ಬೀಜ : ಷೈಝೋಕಾರ್ಪುಗಳು ಗೋಳದ ಆಕಾರದಲ್ಲಿದ್ದು ಗುಬುಟುಗಳ ಸಮೇತವಿರುತ್ತವೆ, ಕೆಂಪಾಗಿದ್ದು, 1.5 ಸೆಂ.ಮೀ. ಅಡ್ಡಗಲತೆಯನ್ನು ಹೊಮದಿರುತ್ತವೆ;ಬೀಜಗಳ ಸಂಖ್ಯೆ 1.

ಜೀವಪರಿಸ್ಥಿತಿ :

1400 ಮೀ. ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ;ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳು.

ಗ್ರಂಥ ಸೂಚಿ :

Lour., Fl. Cochinch. 233. 1790; Gamble, Fl. Madras 1: 252. 1997 (re. ed); Sasidharan, Biodiversity documentation for Kerala- Flowering Plants, part 6:107. 2004; Saldanha, Fl. Karnataka 2: 193. 1996; Cooke, Fl. Bombay 1:267. 1903; Almeida, Fl. Maharashtra 1:280. 1996.

Top of the Page