ದೆಬ್ರೆಜಿಯಾಸಿಯ ಲಾಂಜಿಫೋಲಿಯ (Burm. f.) Wedd. - ಅರ್ಟಿಕೇಸಿ

ಪರ್ಯಾಯ ನಾಮ : ಅರ್ಟಿಕ ಲಾಂಜಿ್ಓಲಿಯ Burm.f.;ದೆಬ್ರೆಜಿಯಾಸಿಯ ವೆಲ್ಯುಟಿನ Gaud.

Vernacular names : Tamil: ಕಾಟ್ಟುನೊಚ್ಚಿ,ನ್ಜನ್ದುಮುಟ್ಟ,ಪುಲಿಚಿMalayalam: ಖಾಪ್ಲಿ,ಕಾಪ್ಸಿ,ಕೆಪ್ಪಸಿ,ಕುರಿಗೆಲೆ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ ಅಂದಾಜು 5 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮಿಶ್ರಿತ ಕಂದು ಬಣ್ಣದಲ್ಲಿದ್ದು,ನಯವಾಗಿರುತ್ತದೆ .
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು,ಬೂದು ಬಣ್ಣದ ಒರಟು ರೋಮಗಳಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಕಾವಿನೆಲೆಗಳು ಭರ್ಜಿಯ ಆಕಾರದಲ್ಲಿದ್ದು, ಕವಲುಗೊಂಡಿರುತ್ತವೆ, ಆಜನ್ಮ ಸಂಯುಕ್ತವಾಗಿದ್ದು ಉದುರುವ ಮಾದರಿಯಲ್ಲಿದ್ದು ಉದುರಿ ಹೋದ ನಂತರ ಗುರುತುಗಳನ್ನು ಉಳಿಸುತ್ತವೆ;ತೊಟ್ಟುಗಳು 0.8-4 ಸೆಂ.ಮೀ.ವರೆಗಿನ ಉದ್ದವಿದ್ದು,ದುಂಡಾಗಿರುತ್ತವೆ, ಬೂದು ಬಣ್ಣದ ಒರಟು ರೋಮಗಳಿಂದ ಕೂಡಿರುತ್ತವೆ ;ಪತ್ರಗಳು 5–15(-23) X 1.5 – 4(6) ಸೆಂ.ಮೀ. ಗಾತ್ರ, ಸಂಕುಚಿತ ಚತುರಸ್ರ ಅಥವಾ ಭರ್ಜಿಯ ಆಕಾರ , ಚೂಪಾದುದರಿಂದ ಕ್ರಮೇಣ ಚೂಪಾಗುವವರೆಗಿನ ತುದಿ, ದುಂಡಾದ ಬುಡ, ಗರಗಸ ದಂತಿತ ಅಂಚು ಹೊಂದಿದ್ದು ತೊಗಲನ್ನೋಲುವ ಮೇಲ್ಮೈ, ಪತ್ರಗಳ ಮೇಲ್ಭಾಗ ಗುಳ್ಳೆಗಳ ಮಾದರಿಯ ಆಕಾರಗಳನ್ನೊಳಗೊಂಡಿದ್ದು, ಚದುರಿದ ರೋಮಗಳ ಸಮೇತವಿರುತ್ತವೆ ಮತ್ತು ಸೂಕ್ಷ್ಮವಾದ ಬಿಳಿ ಕೂದಲುಗಳನ್ನೊಳಗೊಂಡ ತಳಭಾಗವನ್ನು ಹೊಂದಿರುತ್ತವೆ; ಪತ್ರಗಳ ಬುಡದಲ್ಲಿ 3 ನಾಳಗಳಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ; ಎರಡನೇ ದರ್ಜೆಯ ನಾಳಗಳು 3 ರಿಂದ 6 ಜೋಡಿಗಳಿದ್ದು,ಅಗ್ರದ ಕಡೆಗೆ ಆರೋಹಣವಾಗುವ ಮಾದರಿಯಲ್ಲಿರುತ್ತವೆ; ಮೂರನೇ ದರ್ಜೆಯ ನಾಳಗಳು ಲಂಬ ರೇಖೆಗೆ ಸಮಕೋನದಲ್ಲಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಗೊಂಚಲು ಚೆಂಡಿನ ಮಾದರಿಯಲ್ಲಿದ್ದು ಕವಲುಗೊಂಡ,ಅಕ್ಷಾಕಂಕುಳಿನಲ್ಲಿನ ಮಧ್ಯಾರಂಭಿ ಮಂಜರಿಯಲ್ಲಿರುತ್ತವೆ;ವೃಂತ 0.5 ಸೆಂ.ಮೀ.ವರೆಗಿನ ಉದ್ದ ಹೊಂದಿದ್ದು ಮೃದುತುಪ್ಪಳದಿಂದ ಕೂಡಿರುತ್ತವೆ.
ಕಾಯಿ / ಬೀಜ : ಫಲಗಳು ಅಖೀನು ಮಾದರಿಯವುಗಳಾಗಿದ್ದು ಕಳಿತಾಗ ಕಿತ್ತಳೆ-ಹಳದಿ ಬಣ್ಣ ಹೊಂದಿರುತ್ತವೆ.

ಜೀವಪರಿಸ್ಥಿತಿ :

1800 ಮೀ. ಎತ್ತರದವರೆಗಿನ ನಿತ್ಯ ಹರಿದ್ವರ್ಣ ಮತ್ತು ಎರಡನೇ ದರ್ಜೆಯ ಕಾಡುಗಳ ಅಂಚಿನಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ; ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

DC, Prodr. 16: 235. 1869; Gamble, Fl. Madras 3: 1389. 1998 (re. ed); Sasidharan, Biodiversity documentation for Kerala- Flowering Plants, part 6: 431. 2004.

Top of the Page