ಸೈನೋಮೆಟ್ರ ಟ್ರವಂಕೂರಿಕ Bedd. - ಸಿಸಾಲ್ಪಿನಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಆನಿಕೆಗನ್ನೊಳಗೊಂಡ 30 ಮೀ. ಉದ್ದದವರೆಗೆ ಬೆಳೆಯುವ ನಿತ್ಯಹರಿದ್ವರ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು, ತೆಳುವಾಗಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ.
ಎಲೆಗಳು : ಎಲೆಗಳುಏಕ ಗರಿರೂಪಿ ಸಂಯುಕ್ತ ಮಾದರಿಯಲ್ಲಿದ್ದು, ದ್ವಿಪರ್ಣಿಕಾ ರೀತಿಯವು; ಎಲೆಗಳು ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಬದಿಯಲ್ಲಿ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ, ಎಲೆಯ ಬುಡ ಉಬ್ಬಿಕೊಂಡಿರುತ್ತದೆ, ಕಾವಿನೆಲೆಗಳು ಉದುರಿ ಹೋಗುವಂತಹವು; ಅಕ್ಷದಿಂಡು 4 - 14 x 1.5 - 4.5 ಸೆ.ಮೀ. ಗಾತ್ರ ಹೊಂದಿದ್ದು ಅಸಮ್ಮಿತಿಯಾಗಿರುತ್ತದೆ, ಕುಡುಗೋಲಿನ ಅಥವಾ ಭರ್ಜಿಯಾಕಾರದಲ್ಲಿದ್ದು, ತುದಿ ಅನುಕ್ರಮವಾಗಿ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು, ಅಗ್ರಭಾಗದಲ್ಲಿ ಮೊಂಡಾದ ಅಥವಾ ದುಂಡನೆಯ ತುದಿಯಲ್ಲಿ ತಗ್ಗನ್ನು ಹೊಂದಿರುತ್ತದೆ, ಎಲೆಯ ಬುಡ ಅಸಮ್ಮಿತಿಯಾಗಿರುತ್ತದೆ, ಅಂಚು ನಯ, ಪತ್ರ ಕಾಗದವನ್ನೋಲುವ ಅಥವಾ ಉಪ-ತೊಗಲನ್ನೋಲುವ ಮಾದರಿಯಲ್ಲಿದ್ದು, ರೋಮರಹಿತವಾಗಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 12 ಜೋಡಿಗಳಿದ್ದು ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿರುವ ಮಧ್ಯಾಭಿಸರ ಪುಷ್ಪಮಂಜರಿ-ಯಲ್ಲಿದ್ದು, ಗುಲಾಬಿ ಮಿಶ್ರಿತ ಶ್ವೇತ ವರ್ಣದವುಗಳಾಗಿರುತ್ತವೆ.
ಕಾಯಿ / ಬೀಜ : ಪಾಡ್ ಗಳು ಚಪ್ಪಟೆ, ನಯ ಹಾಗೂ ರೋಮರಹಿತವಾಗಿದ್ದು, ಒಂದು ಬೀಜವನ್ನೊಳಗೊಂಡು 3.2 ಸೆ.ಮೀ. ಉದ್ದವನ್ನು ಹೊಂದಿರುತ್ತದೆ.

ಜೀವಪರಿಸ್ಥಿತಿ :

ಕಡಿಮೆ ಎತ್ತರದ (200 ರಿಂದ 700 ಮೀ.) ಪ್ರದೇಶಗಳ ಮೇಲ್ಛಾವಣಿಯ ಮರಗಳಾಗಿ ತೇವಾಂಶವುಳ್ಳ ನಿತ್ಯಹರಿದ್ವರ್ಣಕಾಡುಗಳಲ್ಲಿ ಅಪರೂಪವಾಗಿ ಕಂಡು ಬರುವ ಪ್ರಭೇದ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತ; ದಕ್ಷಿಣ ಸಹ್ಯಾದ್ರಿಯ ಅಗಸ್ತ್ಯ ಮಲೈ, ಉತ್ತರ ಮಲಬಾರು ಮತ್ತು ಮಧ್ಯ ಸಹ್ಯಾದ್ರಿಯ ಪಾಲಕ್ಕಾಡು ಬೆಟ್ಟದಿಂದ ಕೊಡಗಿನವರೆಗೆ ಈ ಪ್ರಭೇದ ಕಂಡು ಬರುತ್ತದೆ.

ಸ್ಥಿತಿ :

ಉಳಿವಿನ ಆತಂಕಕಾರಿ ಸ್ಥಿತಿ. (IUCN 2000)

ಗ್ರಂಥ ಸೂಚಿ :

Beddome, Fl. Sylv. 316. 1872; Gamble, Fl. Madras 1:413 & 414. 1997 (re.ed); Sasidharan, Biodiversity documentation for Kerala - Flowering Plants, part 6:154. 2004; Saldanha, Fl. Karnataka 1:389. 1996. Keshava Murthy and Yoganarasimhan, Fl. Coorg (Kodagu) 171. 1990.

Top of the Page