ಕ್ರಿಪ್ಟೋಕಾರ್ಯ ವೈಟಿಯಾನ Thw. - ಲಾರೇಸಿ

Synonym : ಕ್ರಿಪ್ಟೋಕಾರ್ಯ ಬೋರ್ಡಿಲ್ಲೋನಿಯೈ Gamble

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ.ವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ತೆಳು ಕಂದು ಬಣ್ಣದಲ್ಲಿದ್ದು ವಾಯು ವಿನಿಮಯ ಬೆಂಡು ರಂಧ್ರಗಳನ್ನು ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಉಪ-ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿರುತ್ತವೆ ಹಾಗೂ ಎಲೆಗಳು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ತೊಟ್ಟುಗಳು 0.8-1.5 ಸೆಂ.ಮೀ. ಉದ್ದವಿರುತ್ತದೆ ಮತ್ತು ಮೇಲ್ಭಾಗದಲ್ಲಿ ಕಾಲುವೆಗೆರೆಯನ್ನು ಹೊಂದಿರುತ್ತವೆ ಹಾಗೂ ಉಪ-ರೋಮರಹಿತವಾಗಿರುತ್ತವೆ; ಪತ್ರಗಳು 8-25 X3-11 ಸೆಂ.ಮೀ.ವರೆಗಿನ ಗಾತ್ರ ಹೊಂದಿದ್ದುಚತುರಸ್ರ ಕೆಲವು ವೇಳೆ ಅಂಡವೃತ್ತ-ಚತುರಸ್ರದ ಆಕಾರ ಹೊಂದಿದ್ದು ಮೊಂಡಾದ ಅಗ್ರವುಳ್ಳ ಕಿರಿದಾದ, ಕ್ರಮೇಣ ಚೂಪಾಗುವ ತುದಿ, ದುಂಡಾದುದರಿಂದ ಚೂಪಾದ ಬುಡವನ್ನು ಹೊಂದಿರುತ್ತವೆ.;ಅಂಚು ನಯವಾಗಿರುತ್ತದೆ; ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿರುತ್ತವೆ ಮತ್ತು ರೋಮರಹಿತವಾಗಿರುತ್ತದೆ; ಪತ್ರದ ತಳಭಾಗ ಮಾಸಲು ಬೂದು ಹಸಿರು ಬಣ್ಣ ಹೊಂದಿರುತ್ತದೆ;ಮಧ್ಯ ನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು 7-13 ಪ್ರಮುಖವಾದ ಜೋಡಿಗಳಿರುತ್ತವೆ ಮತ್ತು ಅಂಚಿಗೆ ಸಮಾಂತರವಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ಹೆಚ್ಚಿನ ಅಂತರ ಹೊಂದಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ ಮತ್ತು ತೆಳುವಾಗಿರುತ್ತವೆ;ಉನ್ನತ ದರ್ಜೆಯ ನಾಳಗಳು ಸೂಕ್ಷ್ಮವಾದ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿನ ಅಥವಾ ತುದಿಯಲ್ಲಿನ ಸಡಿಲವಾದ ಪುನರಾವೃತ್ತಿಯಾಗಿ ಕವಲೊಡೆಯುವ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿ ಗೋಳಾಕಾರದಲ್ಲಿದ್ದು1.5 ಸೆಂ.ಮೀ. ಅಡ್ಡಗಳತೆ ಹೊಂದಿದ್ದು ನಯವಾಗಿರುತ್ತದೆ ಮತ್ತು ಒಂದು ಬೀಜವನ್ನು ಒಳಗೊಂಡಿರುತ್ತದೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ 900 ಮೀ.ವರೆಗಿನ ಕಡಿಮೆ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಉಪ-ಮೇಲ್ಛಾವಣಿ ಮರಗಳಾಗಿ ಕಂಡುಬರುವ ಈ ಪ್ರಭೇದ ಸ್ಥಳೀಯವಾಗಿ 1200 ಮೀ. ವರೆವಿಗೆ ವಿಸ್ತರಿಸಿರುತ್ತದೆ.

ವ್ಯಾಪನೆ :

ಭಾರತ, ಶ್ರೀಲಂಕಾ ಮತ್ತು ಮ್ಯಾನ್ಮಾರ್; ಪಶ್ಚಿಮ ಘಟ್ಟದಲ್ಲಿ ಈ ಸಸ್ಯ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Kew Bull. 127:1925;Gamble,Fl.Madras 2:1218. 1993(rep.ed.); Sasidharan, Biodiversity documentation for Kerala Flowering Plants, part 6: 398. 2004; Saldanha, Fl. Karnataka 1:64.1996.

Top of the Page