English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 4 ಮೀ. ಎತ್ತರದವರೆಗೆ ಬೆಳೆಯುವ ದೊಡ್ಡ ಪೊದೆಗಳು ಅಥವಾ ಸಣ್ಣ ಮರಗಳು. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ದುಂಡಾಗಿದ್ದು ನಕ್ಷತ್ರ ರೂಪದ ಶಲ್ಕೆಗಳಿಂದ ಕೂಡಿರುತ್ತವೆ. |
| ಎಲೆಗಳು : | ಎಲೆಗಳು ಸಾಮಾನ್ಯವಾಗಿ ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ, ಕೆಲವು ಸಂಧರ್ಭಗಳಲ್ಲಿ ಉಪ-ಅಭಿಮುಖಿಗಳಾಗಿರುತ್ತವೆ; ಕಾವಿನೆಲೆಗಳು ದಬ್ಬಳದಾಕಾರದಲ್ಲಿದ್ದು ಉದುರಿ ಹೋಗುವಂತಹವು;ತೊಟ್ಟುಗಳು 0.5 -2.5 ಸೆಂ.ಮೀ. ಉದ್ದವಿದ್ದು ಕಾಲುವೆಗೆರೆ ಸಮೆತವಿರುತ್ತವೆ ಹಾಗೂ ನಕ್ಷತ್ರ ರೂಪಿ ಶಲ್ಕೆಗಳಿಂದ ಕೂಡಿರುತ್ತವೆ; ಪತ್ರಗಳು 7 – 18 X1.8 – 4.5 ಸೆಂ ಮೀ. ಗಾತ್ರ, ಅಂಡವೃತ್ತ- ಚತುರಸ್ರದಿಂದ ಭರ್ಜಿಯ ಆಕಾರ ಹೊಂದಿರುತ್ತವೆ;ತುದಿ ಸಂಕುಚಿತ ಹಾಗೂ ಉದ್ದವಾದ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು ಚೂಪಾದ ಬುಡವನ್ನು ಹೊಂದಿರುತ್ತವೆ; ಅಂಚು ನಯವಾಗಿದ್ದು ಮೇಲ್ಮೈ ಕಾಗದವನ್ನೋಲುವ ಮಾದರಿಯಲ್ಲಿರುತ್ತದೆ;ಪತ್ರದ ಕೆಳ ಬದಿ ದಟ್ಟವಾದ ಬೆಳ್ಳಿಯ ಹೊಳಪುಳ್ಳ ನಕ್ಷತ್ರ – ಶಲ್ಕೆಗಳಿಂದ ಕೂಡಿರುತ್ತವೆ; ಪತ್ರ ಮತ್ತು ತೊಟ್ಟು ಸಂಧಿಸುವಲ್ಲಿ ವೃಂತವುಳ್ಳ1 ರಿಂದ 2 ಜೋಡಿ ರಸಗ್ರಂಥಿಗಳು ಇರುತ್ತವೆ; ಎರಡನೇ ದರ್ಜೆಯ ನಾಳಗಳು 5-10 ಜೋಡಿಗಳಿರುತ್ತವೆ, ಅತಿ ತಳ ಭಾಗದ ಜೋಡಿ ನಾಳಗಳು ಅಭಿಮುಖಿಗಳಾಗಿರುತ್ತವೆ ಮತ್ತು ತೀಕ್ಷ್ಣವಾದ ಕೋನ ಹೊಂದಿರುತ್ತವೆ ;ಮೂರನೇ ದರ್ಜೆಯ ನಾಳಗಳು ವಿಶಾಲವಾಗಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತವು. |
| ಪುಷ್ಪಮಂಜರಿ/ಹೂಗಳು : | ಪುಷ್ಪಮಂಜರಿ ಬೆಳ್ಳಿ ಬಣ್ಣದ ಶಲ್ಕೆಗಳಿಂದ ಆವೃತವಾದ ಹಾಗೂ ತುದಿಯಲ್ಲಿನ ಮಧ್ಯಾಭಿಸರ ಮಾದರಿಯವು;ಹೂಗಳು ಏಕಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಒಂದೇ ಸಸ್ಯದಲ್ಲಿರುತ್ತವೆ |
| ಕಾಯಿ /ಬೀಜ : | ಸಂಪುಟ ಫಲಗಳು ಅಂಡ – ಚತುರಸ್ರ ಆಕಾರದಲ್ಲಿದ್ದು ಸ್ವಲ್ಪ ಮಟ್ಟಿಗೆ 3-ಹಾಲೆಗಳನ್ನು ಹೊಂದಿರುತ್ತವೆ ಹಾಗೂ ಕೆಂಪು ಮಿಶ್ರಿತ ಕಂದು ಬಣ್ಣದ ಶಲ್ಕೆಗಳಿಂದ ಕೂಡಿರುತ್ತವೆ ಮತ್ತು 3 ಬೀಜಗಳನ್ನೊಳಗೊಂಡಿರುತ್ತವೆ. |