English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 8 ಮೀ.ವರೆವಿಗೆ ಬೆಳೆಯುವ ಮರಗಳು. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ತೆಳುವಾಗಿದ್ದು ಕೋನಯುಕ್ತವಾಗಿರುತ್ತದೆ ಮತ್ತು ದಟ್ಟವಾದ, ಅಪ್ಪು ರೋಮಗಳಿಂದ ಆವೃತವಾಗಿರುತ್ತವೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು,ಅಭಿಮುಖದಿಂದ ಉಪಅಭಿಮುಖ ಮಾದರಿಯಲ್ಲಿ ಜೋಡನೆಗೊಂಡಿರುತ್ತವೆ;ತೊಟ್ಟುಗಳು 1 ಸೆಂ.ಮೀ. ಉದ್ದವಿರುತ್ತದೆ;ಪತ್ರಗಳು 6-11 x 1.5 - 4 ಸೆಂ.ಮೀ.ವರೆಗಿನ ಗಾತ್ರ ಹೊಂದಿದ್ದು ಅಂಡವೃತ್ತ ಅಥವಾ ಉಪಬುಗುರಿ -ಅಂಡವೃತ್ತ ಆಕಾರದಲ್ಲಿರುತ್ತವೆ. ಪತ್ರದ ತುದಿ ಕಿರಿದಾದ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು ಮೊಂಡಾದ ಅಗ್ರವನ್ನು ಹೊಂದಿರುತ್ತದೆ;ಬುಡ ಬೆಣೆಯಾಕಾರದಿಂದ ಒಳಬಾಗುವ ರೀತಿಯಲ್ಲಿರುತ್ತದೆ;ಅಂಚು ನಯವಾಗಿರುತ್ತದೆ;ಪತ್ರಗಳ ಮೇಲ್ಮೈ ಉಪ-ತೊಗಲನ್ನೋಲುವ ಮಾದರಿಯಲ್ಲಿದ್ದು ಎಳೆಯದಾಗಿದ್ದಾಗ ತಳಭಾಗದಲ್ಲಿ ರೇಷ್ಮೆಯಂತಹ ತುಪ್ಪಳವನ್ನು ಹೊಂದಿರುತ್ತದೆ ಮತ್ತು ನಂತರ ರೋಮರಹಿತವಾಗಿರುತ್ತದೆ; ಪತ್ರಗಳು 3 ಆಧಾರ ನಾಳಗಳನ್ನು ಹೊಂದಿದ್ದು ಪಾರ್ಶ್ವ ನಾಳಗಳು ಎಲೆಯ ಅಗ್ರವನ್ನು ತಲುಪುವುದಿಲ್ಲ;ಮೂರನೇ ದರ್ಜೆಯ ನಾಳಗಳು ಲಂಬ ರೇಖೆಗೆ ಸಮಕೋನದಲ್ಲಿರುತ್ತವೆ ಹಾಗೂ ಎಲೆದಿಂಡಿಗೆ ಅಡ್ಡವಾಗಿ ಕೂಡುತ್ತವೆ;ಉನ್ನತ ದರ್ಜೆಯ ನಾಳಗಳು ಸೂಕ್ಷ್ಮ-ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ. |
| ಪುಷ್ಪಮಂಜರಿ/ಹೂಗಳು : | ಪುಷ್ಪಮಂಜರಿ ಅಕ್ಷಾಕಂಕುಳಿನ ಅಥವಾ ಹುಸಿ-ತುದಿಯಲ್ಲಿನ ಮಧ್ಯಾಭಿಸರ ಮಾದರಿ -ಯದಾಗಿದ್ದು 5 ಸೆಂ.ಮೀ.ವರೆಗಿನ ಉದ್ದ ಹೊಂದಿದ್ದು ಮೃದುತುಪ್ಪಳ ಸಮೇತವಿರುತ್ತದೆ. |
| ಕಾಯಿ /ಬೀಜ : | ಕಾಯಿಗಳು ಬೆರ್ರಿ ರೀತಿಯಲ್ಲಿದ್ದು ಒಂದು ಬೀಜವನ್ನೊಳಗೊಂಡಿರುತ್ತವೆ. |