English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
ಪ್ರಕೃತಿ : | 10 ಮೀ ಎತ್ತರದವರೆಗಿನ ಮರಗಳು. |
ಕಾಂಡ ಮತ್ತು ತೊಗಟೆ : | ತೊಗಟೆ ಬೂದು ಬಣ್ಣ ಹೊಂದಿದ್ದು,ಚಕ್ಕೆಯೇಳುವ ರೂಪದಲ್ಲಿರುತ್ತವೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ. |
ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ದುಂಡಾಗಿದ್ದು, ಬೆಂಡು ರಂಧ್ರಗಳ ಸಮೇತವಿರುತ್ತವೆ, ರೋಮರಹಿತವಾಗುತ್ತವೆ. |
ಎಲೆಗಳು : | ಎಲೆಗಳು ಸರಳವಾಗಿದ್ದು ಅಭಿಮುಖಿ ಕತ್ತರಿಯ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 0.7 ಸೆಂ.ಮೀ. ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದಿಂದ ಒಣಗಿದಾಗ ಕೊಂಚ ಮಟ್ಟಿಗೆ ಕಾಲುವೆಗೆರೆವರೆಗಿನ ಆಕಾರದಲ್ಲಿರುತ್ತವೆ, ರೋಮರಹಿತವಾಗಿರುತ್ತವೆ; ಪತ್ರಗಳು 4 - 7 X 1.5 – 3 ಸೆಂ.ಮೀ. ಗಾತ್ರ, ಬುಗುರಿ ಅಥವಾ ಬುಗುರಿ-ಭರ್ಜಿಯವರೆಗಿನ ಆಕಾರ ಹೊಂದಿದ್ದು, ಚೂಪಲ್ಲದ ಮಾದರಿಯ ತುದಿ,ಬೆಣೆಯಾಕಾರದ ಅಥವಾ ಒಳಬಾಗಿದ ಮಾದರಿಯ ಬುಡ, ನಯವಾದ ಅಂಚು, ರೋಮರಹಿತವಾದ ತಳಭಾಗ, ತೊಗಲನ್ನು ಹೋಲುವ ಮೇಲ್ಮೈ ಹೊಂದಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು 7 ಜೋಡಿಗಳಿದ್ದು ಅಸ್ಪಷ್ಟವಾಗಿರುತ್ತವೆ ಅಥವಾ ಒಣಗಿದಾಗ ಸ್ಪಷ್ಟವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ. |
ಪುಷ್ಪಮಂಜರಿ / ಹೂಗಳು : | ಹೂಗಳು ಅಕ್ಷಾಕಂಕುಳಿನಲ್ಲಿನ ಮಧ್ಯಾಭಿಸರ ಮಾದರಿಯವು; ಹೂಗಳು ಬಿಳಿ ಬಣ್ಣದಲ್ಲಿರುತ್ತವೆ. |
ಕಾಯಿ / ಬೀಜ : | ಫಲಗಳು ಡ್ರೂಪ್ ಮಾದರಿಯವು;ಬೀಜದ ಸಂಖ್ಯೆ 1. |