ಸೆಲ್ಟಿಸ್ ಟೆಟ್ರ್ಯಾಂಡ್ರ Roxb. - ಅಲ್ಮೇಸಿ

:

Vernacular names : Tamil: ಕರುಕ್ಕುಯ್ಯನ್,ಕುಯ್ಯಮರಮ್,ಓಮ,ಪೊಚ್ಚಕ್ಕುರುಮರಮ್Malayalam: ಅಡುವ ಕನ್ನಡದ ಪ್ರಾದೇಶಿಕ ಹೆಸರು: ನೀಲಗಿರಿ ಎಮ್

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಅಂದಾಜು 20 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು,ನಯವಾಗಿರುತ್ತದೆ ಮತ್ತುವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ;ಕಚ್ಚು ಮಾಡಿದ ಜಾಗ ಬಿಳಿ ಛಾಯೆ ಹೊಂದಿದ್ದು ಕೆನ್ನೀಲಿ ಬಣ್ಣದ ಮಚ್ಚೆಗಳ ಸಮೇತವಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು,ಕಂದು ಮಿಶ್ರಿತ ಹಳದಿ ಬಣ್ಣದ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮಾದರಿಯಲ್ಲಿ ಜೋಡಣೆಯಾಗಿದ್ದು, ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ಕಾವಿನೆಲೆಗಳು ಪಾರ್ಶ್ವದಲ್ಲಿದ್ದು ಮೃದುತುಪ್ಪಳದಿಂದ ಕೂಡಿರುತ್ತವೆ,ಉದುರುವ ಮಾದರಿಯಲ್ಲಿದ್ದು ಉದುರಿ ಹೋದ ನಂತರ ಗುರುತುಗಳನ್ನು ಉಳಿಸುತ್ತವೆ;ತೊಟ್ಟುಗಳು 0.8 ಸೆಂ.ಮೀ.ವರೆಗಿನ ಉದ್ದವಿದ್ದು, ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತವೆ, ಮೃದುತುಪ್ಪಳದಿಂದ ಕೂಡಿರುತ್ತವೆ ;ಪತ್ರಗಳು 3.5 – 10 X1.2-4 ಸೆಂ.ಮೀ. ಗಾತ್ರ, ಅಂಡ- ಭರ್ಜಿಯ ಆಕಾರ ಹೊಂದಿದ್ದು, ಕ್ರಮೇಣ ಚೂಪಾಗುವವರೆಗಿನ ತುದಿ, ಅಸಮ್ಮಿತಿಯಾದ ಬುಡ,ಗರಗಸ ದಂತಿತ ಅಂಚು,ಪೊರೆ ರೂಪದ ಮೇಲ್ಮೈ ಹೊಂದಿದ್ದು,ತಳ ಭಾಗದಲ್ಲಿ ಮೃದುತುಪ್ಪಳದಿಂದ ಕೂಡಿರುತ್ತದೆ; ಪತ್ರಗಳ ಬುಡದಲ್ಲಿ 3-ನಾಳಗಳಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ ಅಥವಾ ಸ್ವಲ್ಪಮಟ್ಟಿಗೆ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 4 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಅಂತರ ಹೊಂದಿದ್ದು, ಜಾಲಬಂಧ ನಾಳ ವಿನ್ಯಾಸದವುಗಳಾಗಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಮಧ್ಯಾರಂಭಿ ಮಾದರಿಯವು;ಹೂಗಳು ಸಂಕೀರ್ಣ ಲಿಂಗಿಗಳು;ತೊಟ್ಟುಗಳು 1 ಸೆಂ.ಮೀ.ವರೆಗಿನ ಉದ್ದವಿರುತ್ತವೆ.
ಕಾಯಿ / ಬೀಜ : ಫಲಗಳು ಡ್ರೂಪ್ ಮಾದರಿಯವು; ಬೀಜಗಳ ಸಂಖ್ಯೆ 1.

ಜೀವಪರಿಸ್ಥಿತಿ :

1800 ಮೀ. ಎತ್ತರದವರೆಗಿನ ನಿತ್ಯ ಹರಿದ್ವರ್ಣದಿಂದ ಅರೆನಿತ್ಯ ಹರಿದ್ವರ್ಣವರೆಗಿನ ಕಾಡುಗಳ ಅಂಚಿನಲ್ಲಿ ಬೆಳೆಯುವ ಮರಗಳು.

ವ್ಯಾಪನೆ :

ಇಂಡೋಮಲೇಸಿಯ;ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Roxburgh, Fl. Ind. 2: 63. 1832; Gamble, Fl. Madras 3: 1349. 1998 (re. ed); Sasidharan, Biodiversity documentation for Kerala- Flowering Plants, part 6: 436. 2004

Top of the Page