English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 15 ಮೀ. ಎತ್ತರದವರೆಗಿನ ಮರಗಳು. |
| ಕಾಂಡ ಮತ್ತು ತೊಗಟೆ : | ತೊಗಟೆ ಹಸಿರು ಬಣ್ಣದಲ್ಲಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ತೆಳು ಕಿತ್ತಳೆ ಬಣ್ಣದಲ್ಲಿರುತ್ತದೆ. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ. |
| ಎಲೆಗಳು : | ಎಲೆಗಳು ಸರಳವಾಗಿದ್ದುಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ಕಾವಿನೆಲೆಗಳು ಉದುರಿ ಹೋಗುವ ಮಾದರಿಯವು; ತೊಟ್ಟುಗಳು ಅಂದಾಜು 0.4 – 0.9 ಸೆಂ.ಮೀ. ಉದ್ದ ಹೊಂದಿದ್ದು ಕಾಲುವೆಗೆರೆ ಸಮೇತವಿದ್ದು ರೋಮರಹಿತವಾಗಿರುತ್ತವೆ; ಪತ್ರಗಳು 5 – 15 X 2.5 – 6.4 ಸೆಂ.ಮೀ. ಗಾತ್ರವಿದ್ದು ಸಂಕುಚಿತ ಅಂಡವೃತ್ತ ದಿಂದ ಅಂಡವೃತ್ತ-ಅಂಡದ ಆಕಾರದಲ್ಲಿದ್ದು,ಸಾಮಾನ್ಯವಾಗಿ ತಿರುವಿಕೊಂಡಿರುವ ತೀಕ್ಣಾಗ್ರವುಳ್ಳ ಕ್ರಮೇಣ ಚೂಪಾಗುವ ತುದಿ, ಒಳಬಾಗಿದ ಅಥವಾ ಉಪ-ಚೂಪಾದ ಬುಡ,ನಯವಾದ ಅಥವಾ ಗರಗಸ ದಂತಿತವಾದ ಅಂಚು ಹೊಂದಿದ್ದು ಪತ್ರ ರೋಮರಹಿತವಾಗಿದ್ದು,ಪ್ರಕಾಶ ಭೇಧ್ಯ ಹಾಗೂ ಪಾರದರ್ಶಕವಾದ ಚುಕ್ಕೆ ಮತ್ತು ಗೆರೆಗಳಿಂದ ಕೂಡಿದ ಕಾಗದವನ್ನೋಲುವ ಮೇಲ್ಮೈ ಹೊಂದಿರುತ್ತವೆ;ಮಧ್ಯ ನಾಳ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 6 ರಿಂದ 10 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳವಿನ್ಯಾಸವನ್ನು ಹೊಂದಿರುತ್ತವೆ. |
| ಪುಷ್ಪಮಂಜರಿ / ಹೂಗಳು : | ಹೂಗಳು ಅಕ್ಷಾಕಂಕುಳಿನಲ್ಲಿರುವ ಗುಛ್ಛದಲ್ಲಿದ್ದು ಬಿಳಿ ಬಣ್ಣವನ್ನು ಹೊಂದಿರುತ್ತವೆ. |
| ಕಾಯಿ / ಬೀಜ : | ಸಂಪುಟ ಫಲಗಳು 2 ರಿಂದ ಮೂರು ಕೋಣೆಗಳ ಸಮೇತವಿರುತ್ತವೆ ಮತ್ತು ಉಪ-ದುಂಡಾಕಾರದಿಂದ ಅಂಡವೃತ್ತದವರೆಗಿನ ಆಕಾರ ಹೊಂದಿದ್ದು ಕಿತ್ತಳೆ ಬಣ್ಣದಲ್ಲಿರುತ್ತವೆ; ಬೀಜಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಪತ್ರೆ ಸಮೇತವಾಗಿರುತ್ತವೆ. |