English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ
| ಪ್ರಕೃತಿ : | 7 ಮೀ. ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು. |
| ಕವಲುಗಳು ಮತ್ತು ಕಿರುಕೊಂಬೆಗಳು : | ಎಳೆಯ ಕಿರುಕೊಂಬೆಗಳು ತೆಳುವಾಗಿದ್ದು ದುಂಡಾಗಿರುತ್ತವೆ, ರೋಮರಹಿತವಾಗಿರುತ್ತವೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ತೊಟ್ಟುಗಳ ನಡುವೆ ಇದ್ದು ಉದುರಿ ಹೋದ ನಂತರ ಗುರುತುನ್ನು ಉಳಿಸುತ್ತವೆ; ತೊಟ್ಟು 0.5 ಸೆಂ.ಮೀ.ವರೆಗಿನ ಉದ್ದವಿದ್ದು,ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತದೆ, ರೋಮರಹಿತವಾಗಿರುತ್ತದೆ; ಪತ್ರಗಳು 10 X 4.5 ಸೆಂ.ಮೀ. ಗಾತ್ರ, ಅಂಡವೃತ್ತ, ಅಂಡವೃತ್ತ-ಚತುರಸ್ರದ ಆಕಾರ ಹೊಂದಿದ್ದು,ಚೂಪಾದುದರಿಂದ ಹಿಡಿದು ಮೊಂಡಾಗ್ರವುಳ್ಳ ಚಿಕ್ಕದಾಗಿ ಕ್ರಮೇಣ ಚೂಪಾಗುವ ತುದಿ, ಒಳಬಾಗಿದ ಬುಡ, ನಯವಾದ ಅಂಚು,ಕಾಗದವನ್ನೋಲುವ ಮೇಲ್ಮೈ ಹೊಂದಿರುತ್ತವೆ,ಎಳೆಯದಾಗಿದ್ದಾಗ ಪತ್ರದ ಎರಡೂ ಬದಿಯಲ್ಲಿ ಒರಟುರೋಮಗಳಿದ್ದು ಬಲಿತಾಗ ತಳಭಾಗದಲ್ಲಿ ಮಾತ್ರ ಒರಟು ರೋಮಗಳಿರುತ್ತವೆ ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿಕೊಂಚ ಮಟ್ಟಿಗೆ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 6 ಜೋಡಿಗಳಿದ್ದು ತೆಳುವಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಅಸ್ಪಷ್ಟವಾಗಿರುತ್ತವೆ.. |
| ಪುಷ್ಪಮಂಜರಿ / ಹೂಗಳು : | ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿರುವ ಪೀಠಛತ್ರ ಮಾದರಿಯವು;ಹೂಗಳು ಬಿಳಿ ಬಣ್ಣದವು;ತೊಟ್ಟು 0.4 ಸೆಂ.ಮೀ. ಉದ್ದವಿರುತ್ತದೆ. |
| ಕಾಯಿ / ಬೀಜ : | ಡ್ರೂಪ್ಗಳು ಬುಗುರಿಯಿಂದ ತಲೆಕೆಳಗಾದ ಹೃದಯದವರೆಗಿನ ಆಕಾರ ಹೊಂದಿದ್ದು ಅಂದಾಜು 1.3 ಸೆಂ.ಮೀ. ಉದ್ದವಿರುತ್ತವೆ;ಬೀಜಗಳ ಸಂಖ್ಯೆ 2. |