ಕ್ಯಾಲೋಫಿಲ್ಲಮ್ ಆಸ್ಟ್ರೋಇಂಡಿಕಮ್ Kosterm. ex Stevens - ಕ್ಲೂಸಿಯೇಸಿ

Synonym : ಕ್ಯಾಲೋಫಿಲ್ಲಮ್ ಟ್ರಪೀಜಿಫೋಲಿಯಮ್ sensu Anders.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 35ಮೀ ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ಹೊರ ತೊಗಟೆ ಮಂದವಾದ ಹಳದಿ ಬಣ್ಣದಲ್ಲಿದ್ದು ಬಲಿಷ್ಠವಾದ ದೋಣಿಯಾಕಾರದ ಸೀಳಿಕೆಗಳನ್ನು ಹೊಂದಿರುತ್ತದೆ; ಒಳತೊಗಟೆ ಕೆಂಪು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ನಾಲ್ಕು ಕೋನಗಳನ್ನು ಹೊಂದಿರುತ್ತವೆ ಹಾಗೂ ಒಣಗಿದಾಗ ಕಡುಕಂದು ಬಣ್ಣದಲ್ಲಿರುತ್ತವೆ.
ಜಿನುಗು ದ್ರವ : ಸಸ್ಯ ಸ್ವಚ್ಛವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆ,ಯಲ್ಲಿದ್ದು 0.3 ರಿಂದ 0.5 ಸೆಂ.ಮೀ. ಉದ್ದದ ಕಾಲುವೆಗೆರೆ ಸಮೇತವಾಗಿರುವ ಎಲೆತೊಟ್ಟುಗಳನ್ನು ಹೊಂದಿರುತ್ತವೆ; ಎಲೆಪತ್ರಗಳು 2.5 -6 (-8) X 1 - 4 ಸೆಂ.ಮೀ ಗಾತ್ರ ಹೊಂದಿದ್ದು, ಬುಗುರಿಯಾಕಾರದಲ್ಲಿರುತ್ತದೆ; ಸಾಮಾನ್ಯವಾಗಿ ಎಲೆ ತುದಿ ದುಂಡಾದ ಅಥವಾ ಚೂಪಲ್ಲದ ಮಾದರಿಯಲ್ಲಿರುತ್ತವೆ,ಕೆಲವು ವೇಳೆ ಉಪ-ಕ್ರಮೇಣವಾಗಿ ಚೂಪಾಗುವ ಮಾದರಿಯದ್ದಾಗಿರುತ್ತದೆ, ಎಲೆಯ ಬುಡ ಬೆಣೆಯಾಕಾರದಲ್ಲಿರುತ್ತದೆ, ಎಲೆಗಳು ತೊಗಲನ್ನೋಲುವ ಮಾದರಿಯಲ್ಲಿದ್ದು, ಹೊಳಪಾದ ಮೇಲ್ಭಾಗವನ್ನು ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಚಪ್ಪಟೆ ಅಥವಾ ಪತ್ರದ ಮೇಲ್ಭಾಗದಲ್ಲಿ ತುಸು ಉಬ್ಬಿಕೊಂಡಿರುತ್ತದೆ ; ಎರಡನೇ ದರ್ಜೆಯ ನಾಳಗಳು ಕಡಿಮೆ ಅಂತರದಲ್ಲಿದ್ದು ಸಮಾಂತರದಲ್ಲಿರುತ್ತವೆ ಹಾಗೂ ತೀಕ್ಷ್ಣವಾದ ಕೋನವನ್ನು ಹೊಂದಿದ್ದು ಎಲೆಯ ದಪ್ಪವಾದ ಅಂಚಿನಲ್ಲಿ ಕೊನೆಗೊಳ್ಳುತ್ತವೆ;
ಪುಷ್ಪಮಂಜರಿ/ಹೂಗಳು : ಹೂಗಳು ಶ್ವೇತ ವರ್ಣ ಹೊಂದಿದ್ದು ಅಕ್ಷಾಕಂಕುಲೀನಲ್ಲಿರುವ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಡ್ರೂಪ್ ಗಳು ಅಂಡಾಕಾರದಲ್ಲಿದ್ದು, ಅಗ್ರ ಭಾಗದಲ್ಲಿ ಸೂಕ್ಷ್ಮವಾದ ಮುಳ್ಳನ್ನು ಹೊಂದಿದ್ದು, 3.5 ಸೆಂ ಮೀ ಉದ್ದವಿದ್ದು ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

1100 ಮತ್ತು 1800 ಮೀ ನಡುವಿನ ಮಧ್ಯ ಮತ್ತು ಅತಿ ಎತ್ತರದ ಪ್ರದೇಶಗಳ ತೇವಾಂಶದಿಂದ ಕೂಡಿದ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಮರಗಳಾಗಿ ಈ ಪ್ರಭೇಧ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ಅಗಸ್ತ್ಯಮಲೈ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಹಾಗೂ ಏಲಮಲೈನಿಂದ ನೀಲಗಿರಿಯ ಪಶ್ಚಿಮ ಇಳಿಜಾರು ಪ್ರದೇಶಗಳಲ್ಲಿ ಅಪರೂಪವಾಗಿಯೂ ಬೆಳೆಯುತ್ತದೆ.

ಗ್ರಂಥ ಸೂಚಿ :

J. Arn.Arb.61:250.1980; Gamble,Fl.Madras1:76.1997(re.ed.); Sasidharan, Biodiversity documentation for Kerala-Flowering Plants, part 6:39.2004;Saldanha, Fl.Karnataka 1:202.1996.

Top of the Page