ಕಲ್ಲಿಕಾರ್ಪ ಟೊಮೆಂಟೋಸ (L.) Murr. - ವರ್ಬೆನೇಸಿ

ಪರ್ಯಾಯ ನಾಮ : ಟೋಮೆಕ್ಸ್ ಟೊಮೆಂಟೋಸ L.;ಕಲ್ಲಿಕಾರ್ಪ ಲನಾಟ L.

Vernacular names : Tamil: ತಿನ್ಪೆರಿವಲ್ಲಂ,ತಿರಿಪೆರಿವೇಲಂMalayalam: ಆರತಿ ಗಿಡ,ದೊಡ್ಡ ನಾತದ ಗಿಡ,ಋಷಿ ಪತ್ರಿ,ಇಬ್ಬನ್ನೆ ಗಿಡ.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ ಅಂದಾಜು 5 ಮೀ. ಎತ್ತರದ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು,ನಯವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು 4-ಕೋನಯುಕ್ತವಾಗಿದ್ದು ಸಂದಣಿಗೊಂಡ ನಕ್ಷತ್ರ ರೂಪದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖಿ,ಕತ್ತರಿಯಾಕಾರದ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 2.5 – 7.5 ಸೆಂ.ಮೀ. ಉದ್ದವಿದ್ದು, ದುಂಡಾಗಿರುತ್ತವೆ, ನಿಬಿಡವಾಗಿ ನಕ್ಷತ್ರ ರೂಪದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ;ಪತ್ರಗಳು 10.5 - 25 X 5.5 –15 ಸೆಂ.ಮೀ. ಗಾತ್ರ, ಅಂಡವೃತ್ತದಿಂದ ವಿಶಾಲ ಅಂಡವೃತ್ತ ಅಥವಾ ಅಂಡದ ಆಕಾರ ಹೊಂದಿದ್ದು, ಚೂಪಾದ ಅಥವಾ ಕ್ರಮೇಣ ಚೂಪಾಗುವ ತುದಿ, ಚುಪಾದ ಬುಡ,ತೆಳುವಾದ ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ಪತ್ರಗಳ ತಳಭಾಗ ಮಾಸಲು ಬೂದು ಹಸಿರಿನ ಬಣ್ಣದಲ್ಲಿದ್ದು ದಟ್ಟವಾದ ನಿಬಿಡವಾಗಿ ಬಿಳಿ ಬಣ್ಣದ ನಕ್ಷತ್ರ ರೂಪದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ.; ಎರಡನೇ ದರ್ಜೆಯ ಮತ್ತು ಜಾಲಬಂಧ ನಾಳಗಳು ಪತ್ರಗಳ ಮೇಲ್ಭಾಗದಲ್ಲಿ ಅಚ್ಚೊತ್ತಿದಂತಿರುತ್ತವೆ;ಮಧ್ಯನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ 6 ರಿಂದ 9 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಅಂತರ ಹೊಂದಿದ್ದು,ಓರೆಯಾಗಿ ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿದ್ದು ಕವಲೊಡೆಯುವ ಮಧ್ಯಾರಂಭಿ ಮಾದರಿಯವು; ಹೂಗಳು ಕೆನ್ನೀಲಿ ಬಣ್ಣದಲ್ಲಿದ್ದು ತೊಟ್ಟುರಹಿತವಾಗಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಗೋಳಾಕಾರದಲ್ಲಿದ್ದು,ಕಪ್ಪಾಗಿರುತ್ತವೆ,ಹೊಳಪಿನ ಸಮೇತವಿದ್ದು 4 ಪೈರೀನುಗಳನ್ನೊಳಗೊಂಡಿರುತ್ತವೆ.ಬೀಜಗಳ ಸಂಖ್ಯೆ 3 - 4.

ಜೀವಪರಿಸ್ಥಿತಿ :

1400 ಮೀ. ಎತ್ತರದ ಪ್ರದೇಶಗಳಲ್ಲಿನ ತೆರೆದ,ಭಗ್ನಗೊಂಡ ನಿತ್ಯ ಹರಿದ್ವರ್ಣದಿಂದ ಅರೆನಿತ್ಯ ಹರಿದ್ವರ್ಣ ಕಾಡುಗಳ ಒಳಾವರಣದಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Murray, Syst. Veg. (ed. 13) 130. 1774; Gamble, Fl. Madras 2: 1092. 1993 (re.ed.); Sasidharan, Biodiversity documentation for Kerala- Flowering Plants, part 6: 357. 2004.

Top of the Page