English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 5 ಮೀ. ಎತ್ತರದವರೆಗೆ ಬೆಳೆಯುವ ಮರಗಳು. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ಉಪ- ದುಂಡಾಗಿದ್ದು ರೋಮರಹಿತವಾಗಿರುತ್ತವೆ. |
| ಜಿನುಗು ದ್ರವ : | ಕತ್ತರಿಸಿದಾಗ ಎಲೆಗಳು ಮತ್ತು ಕುಡಿಕೊಂಬೆಗಳ ತುದಿಯಿಂದ ಬೆಳ್ಳಗಿನ ಸಸ್ಯ ರಸ ಒಸರುತ್ತವೆ |
| ಎಲೆಗಳು : | ಎಲೆಗಳು ಸರಳವಾಗಿದ್ದು,ಪರ್ಯಾಯ ಅಥವಾ ಉಪ-ಅಭಿಮುಖಿಗಳಾಗಿದ್ದುಕೆಲವು ವೇಳೆ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ತೊಟ್ಟುಗಳು 0.2 – 0.3 ಸೆಂ.ಮೀ.ವರೆಗಿನ ಉದ್ದವನ್ನು ಹೊಂದಿರುತ್ತವೆ;ಪತ್ರಗಳು 4 - 9.5 X 1.6 –4.2 ಸೆಂ ಮೀ. ಗಾತ್ರ, ಅಂಡವೃತ್ತ-ವಜ್ರಾಕೃತಿಯ ಆಕಾರ, ತುದಿ ಚೂಪಾಗಿದ್ದು ಚೂಪಲ್ಲದ ಅಥವಾ ದುಂಡಾದ ತುದಿಯಲ್ಲಿ ಕಚ್ಚುಳ್ಳ ಅಗ್ರವನ್ನು ಹೊಂದಿರುತ್ತವೆ;ಬುಡ ಚೂಪಾಗಿರುತ್ತದೆ;ಅಂಚು ನಯವಾಗಿದ್ದು ರೋಮರಹಿತವಾಗಿರುತ್ತವೆ; ಎರಡನೇ ದರ್ಜೆಯ ನಾಳಗಳು ಅಂದಾಜು 9 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳ ಕವಲುಗಳು ಎಲೆಯ ಅಕ್ಷದ ದಿಕ್ಕಿನಲ್ಲಿರುತ್ತವೆ. |
| ಪುಷ್ಪಮಂಜರಿ/ಹೂಗಳು : | ಹೂಗಳು ಹಸಿರು ಮಿಶ್ರಿತ ಹಳದಿ ಬಣ್ಣ ಹೊಂದಿದ್ದು ಏಕಲಿಂಗಿಗಳಾಗಿರುತ್ತವೆ ಮತ್ತು ಗಂಡು ಮತ್ತು ಹೆಣ್ಣು ಹೂಗಳು ಒಂದೇ ಸಸ್ಯದಲ್ಲಿರುತ್ತವೆ; ಗಂಡು ಹೂಗಳು ತುದಿಯಲ್ಲಿನ ತೆಳುವಾದ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ; ಹೆಣ್ಣು ಹೂಗಳು ಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ ಅಥವಾ ಗುಚ್ಛಗಳಲ್ಲಿರುತ್ತವೆ. |
| ಕಾಯಿ /ಬೀಜ : | ಸಂಪುಟ ಫಲಗಳು ಆಳವಿಲ್ಲದ ಹಾಲೆ ಸಮೇತವಿದ್ದು ಅಂದಾಜು 1 ಸೆಂ ಮೀ.ಉದ್ದವಿರುತ್ತವೆ ; ಕಾಯಿಗಳ ಪುಷ್ಪ ಪಾತ್ರೆಯ ದಳಗಳು ಹರಡಿಕೊಂಡಿರುತ್ತವೆ; ಬೀಜಗಳು 3. |