ಅಟಲಾಂಟಿಯ ವೈಟಿಯೈ Tanaka - ರೂಟೇಸಿ

Synonym : ಅಟಲಾಂಟಿಯ ಸೇಲಾನಿಕ(Arn.)Oliver

Vernacular names : Tamil: Kanavari, Peykkurundu

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 4 ಮೀ. ಎತ್ತರದವರೆಗಿನ ಪೊದೆಗಳು ಅಥವಾ ಸಣ್ಣಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಹಳದಿ ಬಣ್ಣದ ಛಾಯೆ ಹೊಂದಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಬಿಳಿ ಬಣ್ಣದ ಛಾಯೆಯನ್ನು ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು ಉದ್ದವಾದ ಮುಳ್ಳುಗಳನ್ನು ಹೊಂದಿರುತ್ತವೆ;ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 0.5-1ಸೆಂ.ಮೀ.ವರೆಗಿನ ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ ರೋಮರಹಿತವಾಗಿದ್ದು ಗಿಣ್ಣುಗಳಿಂದ ಕೂಡಿರುತ್ತವೆ; ಪತ್ರಗಳು 7.5-13 X 3 –6 ಸೆಂ.ಮೀ. ಗಾತ್ರ ಹೊಂದಿದ್ದು,ಅಂಡವೃತ್ತ-ಅಂಡದ ಮಾದರಿಯಿಂದ ಅಂಡವೃತ್ತ-ಭರ್ಜಿಯವರೆಗಿನ ಆಕಾರ ಹೊಂದಿದ್ದು,ಸಂಕುಚಿತ ಚೂಪಾದುದರಿಂದ ಅಗಲವಾದ ಹಾಗೂ ದುಂಡನೆಯ ಅಗ್ರದಲ್ಲಿ ತಗ್ಗುಳ್ಳ ತುದಿ, ಚೂಪಾದ ಬುಡ, ನಯವಾದ ಅಂಚು, ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ ಹಾಗೂ ಮಚ್ಚೆ ರೀತಿಯ ರಸಗ್ರಂಥಿಗಳ ಸಮೇತವಿರುತ್ತವೆ ಮತ್ತು ತಳಭಾಗದಲ್ಲಿ ತೆಳು ಬಣ್ಣದಲ್ಲಿರುತ್ತವೆ ಒಣಗಿದಾಗ ಮಬ್ಬು ಹಳದಿ ಛಾಯೆಯ ಹಸಿರು ಬಣ್ಣದಲ್ಲಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತವೆ ; ಎರಡನೇ ದರ್ಜೆಯ ನಾಳಗಳು 10-18 ಜೋಡಿಗಳಿರುತ್ತವೆ ;ಮೂರನೇ ದರ್ಜೆಯ ನಾಳಗಳ ಕವಲುಗಳು ಎಲೆಯ ಅಕ್ಷದ ಕಡೆಗೆಇರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಚಿಕ್ಕ ಗಾತ್ರದ ಮಧ್ಯಾರಂಭಿ ಮಾದರಿಯವು; ಹೂಗಳು ಬಿಳಿ ಬಣ್ಣದವು;ತೊಟ್ಟುಗಳು 0.4 ಸೆಂ.ಮೀ. ಉದ್ದವಿರುತ್ತವೆ;ಕೇಸರಗಳು ಸ್ವತಂತ್ರವಾಗಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಅಂಡಾಕಾರದಲ್ಲಿದ್ದು ಅಗ್ರದಲ್ಲಿ ಸಣ್ಣ ಚೂಪು ಮುಳ್ಳನ್ನು ಹೊಂದಿರುತ್ತವೆ, 1.9 ಸೆಂ.ಮೀ.ಉದ್ದವನ್ನು ಹೊಂದಿರುತ್ತವೆ;ಬೀಜಗಳ ಸಂಖ್ಯೆ 4.

ಜೀವಪರಿಸ್ಥಿತಿ :

1700 ಮೀ. ಎತ್ತರದ ಪ್ರದೇಶಗಳ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳ ಒಳಾವರಣದಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ;ಪಶ್ಚಿಮ ಘಟ್ಟದ ದಕ್ಷಿಣ,ಮಧ್ಯ ಮತ್ತು ದಕ್ಷಿಣ ಮಹಾರಾಷ್ಟ್ರದ ಸಹ್ಯಾದ್ರಿ ಪ್ರದೇಶಗಳು.

ಗ್ರಂಥ ಸೂಚಿ :

Bull. Soc. Bot. France 75: 714. 1928; Gamble, Fl. Madras 1: 160.1997 (re. ed); Sasidharan, Biodiversity documentation for Kerala- Flowering Plants, part 6: 79. 2004; Cooke, Fl. Bombay 1: 188.1903; Almeida, Fl. Maharashtra 1:199. 1996; Saldanha, Fl. Karnataka 2: 217. 1996.

Top of the Page