ಆರ್ಕಿಡೆಂಡ್ರಾನ್ ಮಾನ್ಅಡೆಲ್ಫಮ್ (Roxb.) Nielson var. ಮಾನ್ಅಡೆಲ್ಫಮ್ - ಫ್ಯಾಬೇಸಿ- ಮಿಮೋಸಾಯ್ಡಿ

ಪರ್ಯಾಯ ನಾಮ : ಮಿಮೋಸ ಮಾನ್ಅಡೆಲ್ಫ Roxb.; ಪಿತೆಕೊಲೋಬಿಯಂ ಬೈಜೆಮೈನಮ್ Mart.

Vernacular names : Tamil: ಅಟ್ಟಪರಂಟ;ಕಾಟ್ಟುಕೊನ್ನ;ಮುತ್ತ;ಮುತ್ತಕೋಲಪ್ಪನ್;ಪಣ್ಣಿವಕ;ವರಿಕಿರಿMalayalam: ಕಾಡು ಕೊಂಡೆಮರ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ. ಎತ್ತರದವರೆಗೆ ಬೆಳೆಯುವ ಮಧ್ಯಮ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕೆಂಪು ಮಿಶ್ರಿತ ಕಂದು ಬಣ್ಣ ಹೊಂದಿದ್ದು ಪ್ರಾಮುಖ್ಯವಾಗಿ ಕಾಣುವ ಸೂಕ್ಷ್ಮ ವಾಯುವಿನಿಮಯ ಬೆಂಡು ರಂಧ್ರಗಳನ್ನು ಹೊಂದಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪು ಮಿಶ್ರಿತ ನಸುಗೆಂಪು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ಸೂಕ್ಷ್ಮ ಮೃದು ತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ, ದ್ವಿಗರಿ ಹಾಗೂ ಸಮ ಸಂಖ್ಯಾ ಗರಿ ರೂಪಿಗಳಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ ;ಕಾವಿನೆಲೆಗಳು ಅಸ್ಥಿರವಾಗಿರುತ್ತವೆ;ನಡುಕಾಂಡ 10 ರಿಂದ 11 ಸೆಂ.ಮೀ.ಉದ್ದವಿದ್ದು,ಉಬ್ಬಿದ ಎಲೆ ಬುಡವನ್ನು ಹೊಂದಿದ್ದು ಪ್ರಾಥಮಿಕ ನಡುಕಾಂಡದ ಮೇಲ್ಭಾಗದಲ್ಲಿ ಮತ್ತು ರಡನೇ ದರ್ಜೆಯ ನಡುಕಾಂಡದ ಕಿರುಎಲೆಗಳ ನಡುವೆ ದುಂಡಾದ, ತೊಟ್ಟುರಹಿತವಾದ ರಸಗ್ರಂಥಿಗಳ ಸಮೇತವಿದ್ದು ಸೂಕ್ಷ್ಮ ಮೃದು ತುಪ್ಪಳದಿಂದ ಕೂಡಿರುತ್ತವೆ;ಕಿರುಎಲೆಯ ತೊಟ್ಟುಗಳು 0.4 ರಿಂದ 0.5 ಸೆಂ.ಮೀ. ಉದ್ದವಿರುತ್ತವೆ; ಗರಿಗಳು 1 ರಿಂದ 2 ಜೋಡಿಗಳಿದ್ದು ,ತಳ ಭಾಗದ ಗರಿಗಳು ತುದಿಯಲ್ಲಿನ ಗರಿಗಳಿಗಿಂತ ಚಿಕ್ಕದಾಗಿರುತ್ತವೆ;ಕಿರು ಎಲೆಗಳು 4 ರಿಂದ 8 ಇರುತ್ತವೆ ಮತ್ತು ಅಭಿಮುಖಿಗಳಾಗಿರುತ್ತವೆ ಹಾಗೂ ಅಗ್ರದ ಕಡೆಗೆ ಹೋದಂತೆ ಗಾತ್ರ ಹೆಚ್ಚುತ್ತಾ ಹೋಗುತ್ತದೆ,ಕಿರುಎಲೆಗಳು 1 – 14.5 X 1.8 – 5.5 ಸೆಂ.ಮೀ. ಗಾತ್ರ ಹೊಂದಿದ್ದು ಸಾಮಾನ್ಯವಾಗಿ ಸಂಕುಚಿತ ಅಂಡವೃತ್ತದಿಂದ ಅಂಡದವರೆಗಿನ ಆಕಾರ, ಸೂಕ್ಷ್ಮ ಮೊನಚು ಮುಳ್ಳುಳ್ಳ ಬಾಲ ರೂಪಿ –ಕ್ರಮೇಣ ಚೂಪಾಗುವ ತುದಿ, ಅಸಮ್ಮಿತಿಯಾದ ಅಥವಾ ಬೆಣೆಯಾಕಾರದದಿಂದ ಚೂಪಾಗುವವರೆಗಿನ ಬುಡ,ನಯವಾದ ಅಂಚು ಕಾಗದವನ್ನೋಲುವ ಮೇಲ್ಮೈ, ಹೊಂದಿದ್ದು ಕನಿಷ್ಠ ಪಕ್ಷ ಎಳೆಯದಾದ ಕಿರುಎಲೆಗಳಾದರೂ ಸೂಕ್ಷ್ಮ ಮೃದುಗೂದಲುಗಳನ್ನು ಹೊಂದಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು 8 ರಿಂದ 14 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಕೃಶವಾಗಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವ ಅಥವಾ ವಿಶಾಲ ಜಾಲಬಂಧ ನಾಳವಿನ್ಯಾಸದಲ್ಲಿರುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಗೋಳಾಕಾರ ಮಂಜರಿ ಮಾದರಿಯವುಗಳಾಗಿದ್ದು ತುದಿಯಲ್ಲಿನ ಮತ್ತು ಅಕ್ಷಾಕಂಕುಳಿನಲ್ಲಿರುವ ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾಭಿಸರ ರೀತಿಯಲ್ಲಿರುತ್ತವೆ; ಹೂಗಳು ಬಿಳಿ ಬಣ್ಣ ಹೊಂದಿರುತ್ತವೆ.
ಕಾಯಿ / ಬೀಜ : ಕಾಯಿಗಳು ಪಾಡ್ ಮಾದರಿಯವುಗಳಾಗಿದ್ದು 10 X 1.5 - 2 ಸೆಂ.ಮೀ. ಗಾತ್ರ ವಿದ್ದು ಸುರುಳಿಯಾಗಿರುತ್ತದೆ ಮತ್ತು ಪಟ್ಟಿಯ ಆಕಾರವನ್ನು ಹಾಗೂ ಕೆಂಪು ಬಣ್ಣದ ಒಳಭಾಗ ಹೊಂದಿರುತ್ತವೆ;ಬೀಜಗಳು 3 – 8, ಅಂಡಾಕಾರವಾಗಿದ್ದು ನಯವಾಗಿರುತ್ತವೆ.

ಜೀವಪರಿಸ್ಥಿತಿ :

1000 ಮೀ. ಎತ್ತರದವರೆಗಿನ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಮತ್ತು ಅರೆ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಭಾರತ, ಮ್ಯಾನ್ಮಾರ್ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದಲ್ಲಿನ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Adansonia 19:15.1979;J.Econ.Tax. Bot. 17:688.1993;Gamble, Fl. Madras 1:434. 1997(rep.ed.);Sasidharan, Biodiversity documentation for Kerala- Flowering Plants, part 6:162.2004.

Top of the Page