ಅಫನಮಿಕ್ಸಿಸ್ ಪಾಲಿಸ್ಟ್ಯಾಕ್ಯ (Wall.) Parker - ಮೀಲಿಯೇಸಿ

Synonym : ಅಗ್ಲೆಯಿಯ ಪಾಲಿಸ್ಟ್ಯಾಕ್ಯ Wall. ಮತ್ತು ಅಮೂರ ರೊಹಿತುಕ (Roxb.)Wt. & Arn.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಮಧ್ಯಮ ಗಾತ್ರದ ಮರಗಳಾಗಿದ್ದು ದೊಡ್ಡ ಗಾತ್ರದ ಅಗ್ರದಲ್ಲಿನ ಕವಲುಗಳಿಂದ ಎರಡನೇ ಶ್ರೇಣಿಯನ್ನು ತಲುಪುತ್ತವೆ.
ಕಾಂಡ ಮತ್ತು ತೊಗಟೆ : ತೊಗಟೆ ತೆಳುವಾಗಿದ್ದು ಹೊಳೆಯುವ ಹೊಟ್ಟು ರೂಪದ ಶಲ್ಕೆಗಳಿಂದ ಆವೃತವಾಗಿದ್ದು ನಂತರ ಶಲ್ಕಾರಹಿತವಾಗುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಕಾರದಲ್ಲಿರುತ್ತವೆ ಮತ್ತು ಸಂಯುಕ್ತ ಎಲೆಗಳು ತುದಿಯಲ್ಲಿ ಕೇಂದ್ರೀಕೃತವಾಗಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತಪರ್ಣಿಗಳಾಗಿದ್ದು ಬೆಸ ಸಂಖ್ಯೆಯ ಗರಿರೂಪದಲ್ಲಿರುತ್ತವೆ ಮತ್ತು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು 50(-90) ಸೆಂ.ಮೀ ಉದ್ದವಿದ್ದು ಕುಡಿ ಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ತೊಟ್ಟುಗಳು 15 ಸೆಂ.ಮೀ. ಅಥವಾ ಹೆಚ್ಚಿನ ಉದ್ದವಿದ್ದು ಬುಡದಲ್ಲಿ ಉಬ್ಬಿಕೊಂಡಿರುತ್ತವೆ;ಅಕ್ಷ ದಿಂಡು 30ಸೆಂ.ಮೀ. ಅಥವಾ ಇನ್ನೂ ಹೆಚ್ಚಿನ ಉದ್ದವಿದ್ದು ಹಲವು ವೇಳೆ ಹೊಟ್ಟು ರೂಪದ ಶಲ್ಕೆಗಳಿಂದ ಕೂಡಿರುತ್ತದೆ; ಕಿರುಎಲೆಗಳು ಅಭಿಮುಖವಾಗಿರುತ್ತವೆ(ಸಸಿಗಳಲ್ಲಿ ಪರ್ಯಾಯದಿಂದ ಉಪ ಅಭಿಮುಖವಾಗಿರುತ್ತವೆ);ಕಿರುಎಲೆಗಳು 4 ರಿಂದ 8 ಜೋಡಿಗಳಿದ್ದು ಮತ್ತು ಒಂದು ಬೆಸ ಸಂಖ್ಯೆಯದಾಗಿರುತ್ತದೆ;ಕಿರುಪತ್ರಗಳು 7-18(22) X 3-6.5(10) ಸೆಂ.ಮೀ. ಗಾತ್ರದಲ್ಲಿದ್ದು ಚತರಸ್ರ-ಭರ್ಜಿಯ ಆಕಾರದಲ್ಲಿದ್ದು ತುಸುವಾದ ಕ್ರಮೇಣವಾಗಿ ಚೂಪಾಗುವ ತುದಿ ಮತ್ತು ಅಸಮ ಪಾರ್ಶ್ವ ಮತ್ತು ಅಸಮವಾದ ಬುಡ ಹೊಂದಿರುತ್ತವೆ ಅಂಚು ನಯವಾಗಿರುತ್ತದೆ;ಮೇಲ್ಮೈ ತೊಗಲನ್ನೋಲುವ ಮಾದರಿಯದಾಗಿದ್ದು ರೋಮರಹಿತವಾಗಿರುತ್ತದೆ;ಕಿರುತೊಟ್ಟುಗಳು 0.4-1 ಸೆಂ.ಮೀ. ಉದ್ದವಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ತುಸು ಮೇಲೆದ್ದಿರುತ್ತದೆ ಮತತು ತಳಭಾಗದಲ್ಲಿ ಉತ್ಕ್ರುಷ್ಟವಾಗಿರುತ್ತದೆ;ನಾಳ ವಿನ್ಯಾಸ “ಯೂಕ್ಯಾಂಪ್ಟೋಡ್ರೋಮಸ್” ಮಾದರಿಯಲ್ಲಿರುತ್ತದೆ ಕೆಲವು ವೇಳೆ ಕುಣಿಕೆಗಳು ಪ್ರಮುಖವಾಗಿದ್ದು “ಕ್ಯಾಂಪ್ಟ್ರೋಡ್ರೋಮಸ್”ಮಾದರಿಯವುಗಳಾಗುತ್ತವೆ; ಎರಡನೇ ದರ್ಜೆಯ ನಾಳಗಳು ತೆಳುವಾಗಿದ್ದು ಸಡಿಲವಾದ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ;ಉನ್ನತ ದರ್ಜೆಯ ನಾಳಗಳು ಪ್ರಮುಖವಾಗಿರುವುದಿಲ್ಲ ಆದರೆ ಕವಲುಗೊಂಡಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾಭಿಸರ ಮಾದರಿಯಲ್ಲಿದ್ದು ಎಲೆಗಳಿಗಿಂತ ಚಿಕ್ಕದಾಗಿ ಅಥವಾ ಸಮನಾಗಿರುತ್ತವೆ; ಹೂಗಳು ಬಹುಕೋನಗಳನ್ನು ಹೊಂದಿರುತ್ತವೆ ಮತ್ತು ಮೊಗ್ಗುಗಳು ಗೋಳಾಕಾರ -ದಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು 3 ಸೆಂ.ಮೀ.ವರೆಗಿನ ಅಡ್ಡಗಳತೆ ಹೊಂದಿದ್ದು ಉಪಗೋಳಾಕಾರ-ದಲ್ಲಿದ್ದು ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ತೆಳು ಹಳದಿ ಅಥವಾ ಕೆಂಪು ಬಣ್ಣದಲ್ಲಿರುತ್ತವೆ ಹಾಗೂ 3 ಕೋಶಗಳನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ ಕೆಳ ಎತ್ತರದ ಪ್ರದೇಶಗಳಲ್ಲಿನ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡು ಬರುವ ಈ ಸಸ್ಯ ಕೆಲವು ವೇಳೆ 1300 ಮೀ. ಎತ್ತರದ ಪ್ರದೇಶ -ಗಳಲ್ಲೂ ಬೆಳೆಯುತ್ತದೆ.

ವ್ಯಾಪನೆ :

ಭಾರತ(ಪಶ್ಚಿಮ ಘಟ್ಟದಲ್ಲಿ ತಿರುವನಂತಪುರದಿಂದ ದಕ್ಷಿಣ ಕನ್ನಡ ಪ್ರದೇಶದಲ್ಲಿ) ಅಸ್ಸಾಂ, ಶ್ರೀಲಂಕಾ,ಮಲೇಶಿಯ, ಫಿಲಿಪ್ಪೈನ್ಸ್ ದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Indian Forester 57: 486.1931;Gamble, Fl. Madras 1:181.1997 (rep.ed.)Sasidharan, Biodiversity documentation for Kerala Plants, part 6, 88.2004 Saldanha, Fl. Karnataka 2:231.1996.

Top of the Page