English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | ಅಂದಾಜು 10 ಮೀ. ಎತ್ತರದವರೆವಿಗೆ ಬೆಳೆಯುವ ಮರಗಳು. |
| ಕಾಂಡ ಮತ್ತು ತೊಗಟೆ : | ತೊಗಟೆ ವಯಸ್ಸಾದ ಮರಗಳಲ್ಲಿತೆಳು ಚಕ್ಕೆ ರೂಪದಲ್ಲಿರುತ್ತದೆ. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ದುಂಡಾಗಿದ್ದು ಮೃದುತುಪ್ಪಳವನ್ನು ಹೊಂದಿರುತ್ತವೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು, ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿ ಹೊಂದಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ. ಕಾವಿನೆಲೆಗಳು ರೇಖಾತ್ಮಕ-ಭರ್ಜಿಯ ಆಕಾರದಲ್ಲಿದ್ದು ಚೂಪಾಗಿದ್ದು, ಮೃದು ತುಪ್ಪಳ ಹೊಂದಿದ್ದು 1.2 ಸೆಂ.ಮೀ ಉದ್ದವಿರುತ್ತವೆ ಹಾಗೂ ಉಪ-ಶಾಶ್ವತವಾಗಿರುತ್ತವೆ; ತೊಟ್ಟುಗಳು ಅಂದಾಜು 0.25-0.7(-1.2) ಸೆಂ.ಮೀ. ಉದ್ದವಿದ್ದು ದುಂಡಾಗಿರುತ್ತವೆ ಕೆಲವು ವೇಳೆ ಉಪ-ಕಾಲುವೆಗೆರೆಗಳನ್ನು ಹೊಂದಿರುತ್ತವೆ ಹಾಗೂ ಮೃದುತುಪ್ಪಳ ಸಮೇತವಾಗಿರುತ್ತವೆ; ಪತ್ರಗಳು 8-22 X2.5- 7.7 ಸೆಂ ಮೀ. ವರೆಗಿನ ಗಾತ್ರ; ಸಾಮಾನ್ಯವಾಗಿ ಚತುರಸ್ರದಿಂದ ಅಂಡವೃತ್ತ ಅಥವಾ ಬುಗುರಿ - ಭರ್ಜಿವರೆಗಿನ ಮಾದರಿಯ ಆಕಾರ, ಅಗ್ರದಲ್ಲಿ ಮೊನಚು ಮುಳ್ಳನ್ನು ಹೊಂದಿದ ಕ್ರಮೇಣ ಚೂಪಾಗುವ ತುದಿ, ಚೂಪಾದುದರಿಂದ ಹಿಡಿದು ದುಂಡಗಿನ ಅಥವಾ ಬೆಣೆಯಾಕಾರದ ಬುಡ, ನಯವಾದ ಅಂಚು, ಕಾಗದವನ್ನೋಲುವ ಮೇಲ್ಮೈ ಹೊಂದಿರುತ್ತವೆ, ಮಧ್ಯನಾಳವನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಭಾಗಗಳು ರೋಮರಹಿತವಾಗಿರುತ್ತವೆ;ಎರಡನೇ ದರ್ಜೆಯ ನಾಳಗಳು 5 ರಿಂದ 9 ಜೋಡಿಗಳಿರುತ್ತವೆ ಮತ್ತು ಆರೋಹಣಮಾದರಿಯಲ್ಲಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸ ಹೊಂದಿರುತ್ತವೆ. |
| ಪುಷ್ಪಮಂಜರಿ/ಹೂಗಳು : | ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿ ಅಥವಾ ತುದಿಯಲ್ಲಿರುತ್ತವೆ; ಹೂಗಳು ಏಕಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳ ಗುಚ್ಛಗಳು ಹೆಣ್ಣು ಹೂಗಳ ಗುಚ್ಛಗಳಿಗಿಂತ ಹೆಚ್ಚು ಅಂತರದಲ್ಲಿರುತ್ತವೆ. |
| ಕಾಯಿ /ಬೀಜ : | ಡ್ರೂಪ್ಗಳು ಅಂಡವೃತ್ತಾಕಾರದಲ್ಲಿದ್ದು ಸ್ವಲ್ಪ ಮಟ್ಟಿಗೆ ಓರೆಯಾಗಿರುತ್ತವೆ ಹಾಗೂ ಕೆಂಪು ಬಣ್ಣಕ್ಕೆ ತಿರುಗುತ್ತವೆ ಮತ್ತುಒಂದು ಬೀಜವನ್ನು ಹೊಂದಿರುತ್ತವೆ. |