ಆಂಟಿಡೆಸ್ಮ ಬೂನಿಯಸ್ (L.) Spreng - ಯೂಫೊರ್ಬಿಯೇಸಿ

Synonym : ಸ್ಟೈಲಾಗೋ ಬೂನಿಯಸ್

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆವಿಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಸ್ವಲ್ಪ ಮಟ್ಟಿಗೆ ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿಯಲ್ಲಿರುತ್ತವೆ.ಎಲೆ ತೊಟ್ಟುಗಳು ಅಂದಾಜು 0.5 ಸೆಂ.ಮೀ. ಉದ್ದವಿರುತ್ತವೆ; ಪತ್ರಗಳು 7-18 X 1.5 -4 ಸೆಂ ಮೀ. ವರೆಗಿನ ಗಾತ್ರ; ಅಂಡವೃತ್ತ- ಚತುರಸ್ರದಿಂದ ಭರ್ಜಿವರೆಗಿನ ಮಾದರಿಯ ಆಕಾರ, ಕ್ರಮೇಣ ಚೂಪಾಗುವ ತುದಿ, ಚೂಪಾದುದರಿಂದ ಹಿಡಿದು ಚೂಪಲ್ಲದವರೆಗಿನ ಬುಡ, ರೋಮರಹಿತವಾದ ಮೇಲ್ಮೈಹೊಂದಿರುತ್ತವೆ ಹಾಗೂ ಕೆಲವು ವೇಳೆ ಪತ್ರದ ಮೇಲ್ಭಾಗ ಹೊಳಪು ಹೊಂದಿದ್ದುಕಡು ಹಸಿರು ಬಣ್ಣವನ್ನು ಹೊಂದಿರುತ್ತದೆ; ಮಧ್ಯ ನಾಳ ಪ್ತರದ ಮೇಲ್ಭಾಗದಲ್ಲಿ ಕಾಲುವೆ ಗೆರೆ ಸಮೇತವಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು 5 ರಿಂದ 8 ಜೋಡಿಗಳಿದ್ದು ಕುಣಿಕೆಗೊಂಡಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸ ಹೊಂದಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿ ಅಥವಾ ತುದಿಯಲ್ಲಿರುತ್ತವೆ; ಹೂಗಳು ಏಕಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು ತೊಟ್ಟು ರಹಿತವಾಗಿದ್ದು ದಪ್ಪ ಗಾತ್ರದ, 8-10 ಸೆಂ.ಮೀ ಉದ್ದವುಳ್ಳ, ರೋಮರಹಿತವಾದ ಕದಿರು ಮಂಜರಿಯಲ್ಲಿರುತ್ತವೆ; ಹೆಣ್ಣು ಹೂಗಳು ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಡ್ರೂಪ್ಗಳು ಒಂದು ಬೀಜವನ್ನು ಹೊಂದಿರುತ್ತವೆ.

ಜೀವಪರಿಸ್ಥಿತಿ :

900 ಮೀ. ವರೆಗಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿ ಮರಗಳಾಗಿ ಈ ಸಸ್ಯ ಕಂಡುಬರುತ್ತದೆ.

ವ್ಯಾಪನೆ :

ಇಂಡೋಮಲೇಶಿಯಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಚೀನಾ; ಪಶ್ಚಿಮ ಘಟ್ಟಗಳಲ್ಲಿನ ದಕ್ಷಿಣ ಸಹ್ಯಾದ್ರಿ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Syst. Veg. 1.826.1825; Gamble, Fl. Madras 2:1297.1993(rep.ed.);Sasidharan, Biodiversity documentation for Kerala – Flowering plants, part 6, 409.2004;Saldanha, Fl. Karnataka 2:116.1996.

Top of the Page