ಆಕ್ಟೆಫೈಲ ಎಕ್ಸೆಲ್ಸ (Dalz.) Muell.-Arg. - ಯೂಫೊರ್ಬಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ಎತ್ತರದವರೆವಿಗೆ ಬೆಳೆಯುವ ಮರಗಳು
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣ ಹೊಂದಿದ್ದುವಾಯು ವಿನಿಮಯ ಬೆಂಡು ರಂಧ್ರ ಸಹಿತವಾಗಿರುತ್ತವೆ; ಕಚ್ಚು ಮಾಡಿದ ಜಾಗ ನಸುಗೆಂಪಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿಯಲ್ಲಿರುತ್ತವೆ ; ಕಾವಿನೆಲೆಗಳು ಜೋಡಿಯಾಗಿರುತ್ತವೆ ಮತ್ತು ಉದುರಿ ಹೋಗುವಂತಹವು ಹಾಗೂ ಉದುರಿದ ಜಾಗದಲ್ಲಿ ಗುರುತುಗಳನ್ನು ಶೇಷವಾಗುಳಿಸುತ್ತವೆ;ತೊಟ್ಟುಗಳು 2 ಸೆಂ.ಮೀ. ಉದ್ದವಿದ್ದು, ಎರಡೂ ತುದಿಯಲ್ಲಿ ಊದಿಕೊಂಡಿರುತ್ತವೆ; ಪತ್ರಗಳು 15 X 4 ಸೆಂ ಮೀ. ವರೆಗಿನ ಗಾತ್ರ ಹೊಂದಿದ್ದು ವೈವಿಧ್ಯತೆ ಹೊಂದಿರುತ್ತವೆ; ಅಂಡವೃತ್ತ-ಭರ್ಜಿಯಾಕಾರದಿಂದ ಬುಗುರಿ-ಭರ್ಜಿ ಮಾದರಿಯವರೆಗಿನ ಆಕಾರ,ಚೂಪಾದ ತುದಿ, ಒಳಬಾಗಿದ ಬುಡ ಹೊಂದಿದ್ದು ಉಪ-ತೊಗಲನ್ನೋಲುವ ಮೇಲ್ಮೈ ಸಮೇತವಿರುತ್ತವೆ;ಮಧ್ಯ ನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು 6 ರಿಂದ 12 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳು; ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು ಅಕ್ಷಾಕಂಕುಳಿನಲ್ಲಿನ ಗುಚ್ಛದಲ್ಲಿರುತ್ತವೆ ಹಾಗೂ ಚಿಕ್ಕ ತೊಟ್ಟುಗಳನ್ನು ಹೊಂದಿರುತ್ತವೆ;ಪುಷ್ಪಗಳ ದಳಗಳು ಬಿಳಿ ಬಣ್ಣದವು;ಬಿಂಬ ಹಳದಿಯಾಗಿರುತ್ತದೆ;ಹೆಣ್ಣು ಹೂಗಳು ಒಂಟಿಯಾಗಿದ್ದು, ಅಕ್ಷಾಕಂಕುಳಿನಲ್ಲಿದ್ದು ಉದ್ದವಾದ ತೊಟ್ಟುಗಳನ್ನು ಹೊಂದಿದ್ದು ಹಳದಿ ಬಣ್ಣದಿಂದ ಕೂಡಿದ ಕಿರು ಗಾತ್ರದ ದಳಗಳ ಸಹಿತವಿರುತ್ತವೆ; ಬಿಂಬ ಹಳದಿ ಬಣ್ಣ ಹೊಂದಿರುತ್ತದೆ.
ಕಾಯಿ /ಬೀಜ : ಸಂಪುಟ ಫಲಗಳು ಸಂಕುಚಿತವಾಗಿದ್ದು 2 X 3.2 ಸೆಂ.ಮೀ. ಗಾತ್ರದಲ್ಲಿದ್ದು ಗೋಳಾಕಾರದಲ್ಲಿರುತ್ತವೆ ಹಾಗೂ ದಾರುವಿನಂತಿದ್ದು ತೊಟ್ಟುಗಳ ಸಮೇತವಿರುತ್ತವೆ; ಪ್ರತಿ ಕೋಶದಲ್ಲಿ 2 ಬೀಜಗಳಿರುತ್ತವೆ.

ಜೀವಪರಿಸ್ಥಿತಿ :

300 ರಿಂದ 2200 ಮೀ. ನಡುವಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿ ಮರಗಳಾಗಿ ಈ ಸಸ್ಯ ಕಂಡುಬರುತ್ತದೆ.

ವ್ಯಾಪನೆ :

ಇಂಡೋಮಲೇಶಿಯಾ; ಪಶ್ಚಿಮ ಘಟ್ಟಗಳಲ್ಲಿನ ದಕ್ಷಿಣ ಸಹ್ಯಾದ್ರಿಯಲ್ಲಿ ಅಲ್ಲಲ್ಲಿ ಹಾಗೂ ಮಧ್ಯ ಸಹ್ಯಾದ್ರಿಯ ಚಿಕ್ಕಮಗಳೂರು (ಬಾಬಾಬುಡನ್ ಬೆಟ್ಟಗಳು) ಮತ್ತು ಸಿರಸಿಯಲ್ಲಿ ಅಪರೂಪವಾಗಿಯೂ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Linnaea 32:78.1863;Gamble, Fl. Madras2:1283.1993(rep.ed.); Sasidharan, Biodiversity documentation for Kerala – Flowering plants, part 6, 408.2004;Saldanha, Fl. Karnataka 2:114.1996.

Top of the Page