ಆ್ಯಕ್ರೋನಿಖಿಯ ಪೆಡಂಕ್ಯುಲೇಟ (L.) Miq. - ರೂಟೇಸಿ

:

Vernacular names : Tamil: ಮೂಟ ನರಿ;ಮುಟ್ಟನರಿ;ವಿದುಕನಲೈMalayalam: ಭೂತಾಳಿ ಮರ,ಸೋನೆ ಮಾವು

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ. ಎತ್ತರದವರೆಗಿನ ಸದಾಪರ್ಣಿ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣ ಹೊಂದಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದೃಢ ಹಾಗೂ ದುಂಡಾಗಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖಿ ಅಥವಾ ಉಪ-ಅಭಿಮುಖಿಗಳಾಗಿರುತ್ತವೆ, ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ತೊಟ್ಟು 1.5 – 3.3 ಸೆಂ.ಮೀ.ವರೆಗಿನ ಉದ್ದವಿದ್ದು, ಕಾಲುವೆಗೆರೆ ಸಮೇತವಿದ್ದು ರೋಮರಹಿತವಾಗಿರುತ್ತವೆ, ಗಿಣ್ಣುಗಳ ಸಮೇತವಿರುತ್ತವೆ;ಪತ್ರಗಳು 7-17 X 3.5 –7.5 ಸೆಂ.ಮೀ. ಗಾತ್ರ ಹೊಂದಿದ್ದು, ಅಂಡವೃತ್ತದ ಆಕಾರ,ಮೊಂಡಾಗ್ರವುಳ್ಳ ಕ್ರಮೇಣ ಚೂಪಾಗುವ ತುದಿ ಹೊಂದಿರುತ್ತವೆ ಮತ್ತು ಹಿಂಭಾಗದ ಕಡೆಗೆ ಬಾಗಿರುತ್ತವೆ, ಕೆಲವು ವೇಳೆ ಚೂಪಲ್ಲದ ಅಥವಾ ಮೊಂಡಾದ ತುದಿಯಲ್ಲಿ ಕಚ್ಚುಳ್ಳ ಅಗ್ರವನ್ನು ಹೊಂದಿದ ತುದಿ, ಬೆಣೆ-ಚೂಪಾದ ಬುಡ, ನಯವಾದ ಅಂಚು ಹೊಂದಿದ್ದು ತೊಗಲು ಅಥವಾ ಉಪ-ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಉಬ್ಬಿರುತ್ತವೆ ; ಎರಡನೇ ದರ್ಜೆಯ ನಾಳಗಳು 7-10 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ನೀಳಛತ್ರ ಮಧ್ಯಾರಂಭಿ ಮಾದರಿಯವು;ಹೂಗಳು ಹಳದಿ ಮಿಶ್ರಿತ ಬಿಳಿ ಬಣ್ಣದವು;ತೊಟ್ಟುಗಳು ಅಂದಾಜು 1 ಸೆಂ.ಮೀ. ಉದ್ದವಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು 4-ಕೋಶಗಳನ್ನೊಳಗೊಂಡಿದ್ದು ಸಾಮಾನ್ಯವಾಗಿ ಉದ್ದಕ್ಕಿಂತ ಅಗಲವಾಗಿರುತ್ತವೆ,ಉಪಗೋಳಾಕಾರದಲ್ಲಿದ್ದು, ಸ್ವಲ್ಪಮಟ್ಟಿಗೆ ತೋಡುಗುರುತುಗಳನ್ನು ಹೊಂದಿರುತ್ತವೆ ಹಾಗೂ 0.8X1.2 ಸೆಂ.ಮೀ.ಉದ್ದವನ್ನು ಹೊಂದಿರುತ್ತವೆ; ಬೀಜಗಳ ಸಂಖ್ಯೆ ಒಂದು.

ಜೀವಪರಿಸ್ಥಿತಿ :

1800 ಮೀ. ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ;ಪಶ್ಚಿಮ ಘಟ್ಟದ ದಕ್ಷಿಣ,ಮಧ್ಯ ಮತ್ತು ದಕ್ಷಿಣ ಮಹಾರಾಷ್ಟ್ರದ ಸಹ್ಯಾದ್ರಿ ಪ್ರದೇಶಗಳು.

ಗ್ರಂಥ ಸೂಚಿ :

Fl. Ind. Bat. Suppl. 532. 1861; Gamble, Fl. Madras 1: 152 .1997 (re. ed); Sasidharan, Biodiversity documentation for Kerala- Flowering Plants, part 6: 78. 2004; Saldanha, Fl. Karnataka 2: 215. 1996.

Top of the Page